IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಹೆದ್ದಾರಿ ನಿರ್ಮಾಣ ಕಾರ್ಯಕ್ಕೆ ಮರಳು ಒದಗಿಸಲು ಡಿಸಿಐ ಜತೆ ಎನ್‍ಎಚ್‍ಎಐ ಒಪ್ಪಂದ

ಡ್ರೆಡ್ಜಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ಡಿಸಿಐ) ಮತ್ತು ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್ಎಚ್ಎಐ) ದೇಶದಲ್ಲಿ ಹೆದ್ದಾರಿಗಳ ನಿರ್ಮಾಣ ಕಾರ್ಯಕ್ಕೆ ಮರಳು ಒದಗಿಸುವ ಸಂಬಂಧ ಒಪ್ಪಂದ ಮಾಡಿಕೊಂಡಿವೆ.

ಒಪ್ಪಂದದ ಮುಖ್ಯ ಉದ್ದೇಶವೆಂದರೆ, ಮರಳು ಬೇಡಿಕೆ ಮತ್ತು ಸರಬರಾಜಿನ ಅಂತರವನ್ನು ಕಡಿಮೆ ಮಾಡುವುದು. ಹೆದ್ದಾರಿ ನಿರ್ಮಾಣ ಕಾಮಗಾರಿಗಳಿಗೆ ಹಲವು ಪ್ರದೇಶಗಳಲ್ಲಿ ಮರಳು ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಪ್ರಮುಖ ಅಂಶಗಳು

ಒಪ್ಪಂದದ ಅನ್ವಯ ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಆಳ ಮಾಡುವ ಕಾರ್ಯಾಚರಣೆಯಿಂದ ದೊಡ್ಡ ಪ್ರಮಾಣದ ಮರಳು ಉತ್ಪಾದಿಸಲಾಗುತ್ತದೆ. ಆಳ ಹೊಂಡಗಳನ್ನು ನಿರ್ಮಿಸುವ ಮುಖ್ಯ ಉದ್ದೇಶವೆಂದರೆ ಮರಳು ಪಡೆಯುವುದು. ವಹಿವಾಟು ಮಧ್ಯವರ್ತಿಗಳು ಮರಳನ್ನು ಸಾಗಾಣಿಕೆ ಮಾಡಿ ಭಾರತದ ವಿವಿಧ ಬಂದರುಗಳಲ್ಲಿ ದಾಸ್ತಾನು ಮಾಡುತ್ತಾರೆ. ಬಳಿಕ ಹೆದ್ದಾರಿ ಯೋಜನೆಗಳಿಗೆ ಇದನ್ನು ಮಾರಾಟ ಮಾಡಲಾಗುತ್ತದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮರಳನ್ನು ವಿವಿಧ ಬಂದರುಗಳ ಸಂಗ್ರಹಾಗಾರದಿಂದ ಅಗತ್ಯವಿರುವ ಸ್ಥಳಗಳಿಗೆ ಸಾಗಾಣಿಕೆ ಮಾಡುತ್ತದೆ.

ಡ್ರೆಡ್ಜಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ಡಿಸಿಐ)

ಡ್ರೆಡ್ಜಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ಡಿಸಿಐ) ಎನ್ನುವುದು ಕೇಂದ್ರ ಸರ್ಕಾರಿ ಸ್ವಾಮ್ಯದ ಮಿನಿರತ್ನ ಕಂಪನಿಯಾಗಿದ್ದು, ಆಳಗೊಳಿಸುವಿಕೆ ವಹಿವಾಟಿನಲ್ಲಿ ತೊಡಗಿಸಿಕೊಂಡಿದೆ. ಇದನ್ನು 1976ರಲ್ಲಿ ಆರಂಭಿಸಲಾಗಿದೆ. ಇದು ಶಿಪ್ಪಿಂಗ್ ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುತ್ತದೆ. ಇದರ ಕೇಂದ್ರ ಕಚೇರಿ ವಿಶಾಖಪಟ್ಟಣದಲ್ಲಿದ್ದು, ಭಾರತದ ವಿವಿಧ ಬಂದರುಗಳಲ್ಲಿ ಇದರ ಯೋಜನಾ ಕಚೇರಿಗಳಿವೆ.

ಡ್ರೆಡ್ಜಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ಡಿಸಿಐ) ನಿರ್ವಹಣೆ ಆಳಗೊಳಿಸುವಿಕೆ, ಬಂಡವಾಳ ಆಳಗೊಳಿಸುವಿಕೆ, ಕಡಲ ಕಿನಾರೆ ಅಭಿವೃದ್ಧಿ, ಭೂಮಿಯ ಪುನರುಜ್ಜೀವನ, ನಿಂತ ನೀರಿನ ಡ್ರಿಡ್ಜಿಂಗ್, ಯೋಜನಾ ನಿರ್ವಹಣೆ ಸಲಹೆ ಮತ್ತು ಸಾಗರದಲ್ಲಿ ನಿರ್ಮಾಣ ಕಾರ್ಯ ಕೈಗೊಳ್ಳುವುದರಲ್ಲಿ ತೊಡಗಿಸಿಕೊಂಡಿದೆ. ಇದು ಅಪರೂಪಕ್ಕೆ ವಿದೇಶಿ ಬಂದರುಗಳಲ್ಲಿ ಕೂಡಾ ಡ್ರೆಡ್ಜಿಂಗ್ ಚಟುವಟಿಕೆಗಳನ್ನು ಕೈಗೊಳ್ಳುತ್ತದೆ. ಶ್ರೀಲಂಕಾ, ದುಬೈ ಹಾಗೂ ಥೈವಾನ್ನಲ್ಲೂ ಇಂಥ ಕಾರ್ಯಾಚರಣೆ ನಡೆಸುತ್ತಿದೆ.

Comment