IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಸಂಕಲ್ಪ್ ಯೋಜನೆಗೆ ವಿಶ್ವಬ್ಯಾಂಕ್‍ನಿಂದ 250 ದಶಲಕ್ಷ ಡಾಲರ್ ಸಾಲ

ಜೀವನಾಧಾರಕ್ಕೆ ಬೆಂಬಲ ನೀಡುವ ಮಹತ್ವಾಕಾಂಕ್ಷಿ "ಸ್ಕಿಲ್ ಅಕ್ವಿಸಿಷನ್ ಅಂಡ್ ನಾಲೆಡ್ಜ್ ಅವೇರ್ನೆಸ್ ಫಾರ್ ಲೈವ್ಲಿಹುಡ್ ಪ್ರೊಮೋಷನ್" (ಸಂಕಲ್ಪ್) ಯೋಜನೆಗಾಗಿ ಕೇಂದ್ರ ಸರ್ಕಾರ ವಿಶ್ವಬ್ಯಾಂಕ್ನಿಂದ 250 ದಶಲಕ್ಷ ಡಾಲರ್ ಸಾಲ ಪಡೆಯಲು ಒಪ್ಪಂದ ಮಾಡಿಕೊಂಡಿದೆ.

ವಿಶ್ವಬ್ಯಾಂಕಿನ ನೆರವು ನೀಡುವ ಶಾಖೆಯಾದ ಇಂಟರ್ನ್ಯಾಷನಲ್ ಬ್ಯಾಂಕ್ ಫಾರ್ ರಿ ಕನ್ಸ್ಟ್ರಕ್ಷನ್ ಅಂಡ್ ಡೆವಲಪ್ಮೆಮಟ್ (ಐಬಿಆರ್ಡಿ) ಸಾಲವನ್ನು ನೀಡಲಿದ್ದು, ಯೋಜನೆ ಪೂರ್ಣಗೊಳ್ಳುವ ದಿನಾಂಕ 2023 ಮಾರ್ಚ್ 31 ಆಗಿರುತ್ತದೆ.

ಸಂಕಲ್ಪ್ ಯೋಜನೆ

ಯೋಜನೆಯ ಉದ್ದೇಶ: ಕೌಶಲ ಅಭಿವೃದ್ಧಿಗೆ ಸಾಂಸ್ಥಿಕ ವ್ಯವಸ್ಥೆಯನ್ನು ವಿಸ್ತøತಗೊಳಿಸುವುದು ಮತ್ತು ಗುಣಮಟ್ಟ ಮತ್ತು ಮಾರುಕಟ್ಟೆಗೆ ಪ್ರಸ್ತುತ ಎನಿಸುವ ರೀತಿಯಲ್ಲಿ ಕೆಲಸಗಾರರ ಲಭ್ಯತೆಯನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶ. ಇದರಲ್ಲಿ ಪ್ರಮುಖವಾಗಿ ಸಾಂಸ್ಥಿಕ ಸುಧಾರಣೆಗಳು ಮತ್ತು ಗುಣಮಟ್ಟ ಅಭಿವೃದ್ಧಿ & ಮಾರುಕಟ್ಟೆ ಪ್ರಸ್ತುತತೆಯನ್ನು ಕೌಶಲ ಅಭಿವೃದ್ಧಿ ತರಬೇತಿ ಯೋಜನೆಗಳಲ್ಲಿ ಧೀರ್ಘಾವಧಿ ಹಾಗೂ ಅಲ್ಪಾವಧಿ ವೃತ್ತಿಪರ ಶಿಕ್ಷಣ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ತರುವುದು ಇದರ ಉದೇಶ. ಸಮರ್ಪಕ ಶಿಕ್ಷಣ, ಕೌಶಲ ಮತ್ತು ಉದ್ಯೋಗವನ್ನು ಒದಗಿಸುವ ಮೂಲಕ ಯುವಕರಿಗೆ ಶಕ್ತಿ ತುಂಬುವುದು ಯೋಜನೆಯ ಗುರಿಯಾಗಿದೆ. ಯೋಜನೆಯಡಿ ಯುವಕರಿಗೆ ಮಾರುಕಟ್ಟೆಗೆ ಪ್ರಸ್ತುತ ಎನಿಸುವ ತರಬೇತಿಯನ್ನು ನೀಡುವ ಮೂಲಕ ಅವರ ಉದ್ಯೋಗಾರ್ಹತೆ ಅಧಿಕವಾಗುವಂತೆ ಹಾಗೂ ಗರಿಷ್ಠ ಉದ್ಯೋಗ ಗಳಿಕೆ ಸಾಧ್ಯತೆಗೆ ಅವರನ್ನು ಸಜ್ಜುಗೊಳಿಸಲಾಗುವುದು.

ಯೋಜನೆ ಪ್ರಮುಖ ಫಲಿತಾಂಶ ಕ್ಷೇತ್ರಗಳು: ಸಾಂಸ್ಥಿಕ ಸಬಲೀಕರಣವನ್ನು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಮಾಡಲಾಗುವುದು. ಇದಕ್ಕಾಗಿ ಕೌಶಲ ಅಭಿವೃದ್ಧಿ ಯೋಜನೆಗಳಿಲ್ಲಿ ಸೂಕ್ತ ಯೋಜನೆ, ಸುಧಾರಿತ ಗುಣಮಟ್ಟ ಮತ್ತು ಮಾರುಕಟ್ಟೆ ಪ್ರಸ್ತುತತೆಯನ್ನು ತರಲಾಗುವುದು. ಉತ್ತಮ ಗುಣಮಟ್ಟದ, ಮಾರುಕಟ್ಟೆಗೆ ಪ್ರಸ್ತುತ ಎನಿಸುವ ತರಬೇತಿಯನ್ನು ನೀಡಲಾಗುವುದು. ಮಹಿಳಾ ಅಭ್ಯರ್ಥಿಗಳಿಗೆ ಹಾಗೂ ಇತರ ದುರ್ಬಲ ವರ್ಗದವರಿಗೆ ಕೂಡಾ ಕೌಶಲ ಅಭಿವೃದ್ಧಿಯನ್ನು ಲಭ್ಯವಾಗುವಂತೆ ಮಾಡುವುದು ಹಾಗೂ ಇದನ್ನು ಪೂರ್ಣಗೊಳಿಸಲು ಅನುಕೂಲಕರ ವಾತಾವರಣ ಸೃಷ್ಟಿಸುವುದು ಇದರ ಉದ್ದೇಶ. ಇವೆಲ್ಲದರ ಜತೆಗೆ ಖಾಸಗಿ-ಸರ್ಕಾರಿ ಸಹಭಾಗಿತ್ವ ಯೋಜನೆಯ ಮೂಲಕ ಕೌಶಲ ಅಭಿವೃದ್ಧಿಯನ್ನು ವಿಸ್ತರಿಸಲಾಗುವುದು.

ಮಹತ್ವ

ಯೋಜನೆಯು ರಾಷ್ಟ್ರೀಯ ಕೌಶಲ ಅಭಿವೃದ್ಧಿ ಮಿಷನ್- 2015ಕ್ಕೆ ಅಗತ್ಯ ಉತ್ತೇಜನ ನೀಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಇದರ ಜತೆಗೆ ಇತರ ಹಲವು ಉಪ ಮಿಷನ್ಗಳಿಗೆ ಕೂಡಾ ಇದು ನೆರವಾಗಲಿದೆ. ಯೋಜನೆಯನ್ನು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಮೇಕ್ ಇನ್ ಇಂಡಿಯಾ, ಸ್ವಚ್ಛತಾ ಅಭಿಯಾನಗಳ ಜತೆಯೂ ಜೋಡಿಸಲಾಗಿದ್ದು, ಜಾಗತಿಕಮಟ್ಟದಲ್ಲಿ ಸ್ಪರ್ಧಾತ್ಮಕ ಕಾರ್ಯಪಡೆಯನ್ನು ದೇಶೀಯ ಹಾಗೂ ಸಾಗರೋತ್ತರ ಅಗತ್ಯತೆಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸುವಲ್ಲಿ ಪ್ರಯತ್ನ ಅತ್ಯಂತ ಮಹತ್ವದ್ದೆನಿಸಲಿದೆ.

ಎಲ್ಲಕ್ಕಿಂತ ಹಹೆಚ್ಚಾಗಿ, ಇದು ವಿವಿಧ ಕೇಂದ್ರೀಯ, ರಾಜ್ಯ ಮತ್ತು ಖಾಸಗಿ ವಲಯದ ಸಂಸ್ಥೆಗಳ ಸಮನ್ವಯದಲ್ಲಿ ಕೌಶಲ ಅಭಿವೃದ್ಧಿ ತರಬೇತಿಯನ್ನು ಒದಗಿಸಲಿದೆ. ಇದು ಚಟುವಟಿಕೆಗಳು ಪುನರಾವರ್ತನೆಯಾಗುವುದನ್ನು ತಡೆಯುವ ಜತೆಗೆ, ವೃತ್ತಿಪರ ತರಬೇತಿಯಲ್ಲಿ ಏಕರೂಪತೆಯಲ್ಲಿ ತರುವ ಮೂಲಕ ಒಳ್ಳೆಯ ಫಲಿತಾಂಶವನ್ನು ನೀಡುವ ಗುರಿ ಹೊಂದಿದೆ.

Comment