IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಟ್ರಾಕೊಮಾ ಕಣ್ಣು ಬ್ಯಾಕ್ಟೀರಿಯಾ ಸೋಂಕಿನಿಂದ ಭಾರತ ಮುಕ್ತ

ಭಾರತವನ್ನು ಟ್ರಾಕೊಮಾ ಕಣ್ಣು ಬ್ಯಾಕ್ಟೀರಿಯಾ ಸೋಂಕು ಮುಕ್ತ ದೇಶವಾಗಿ ಘೋಷಿಸಲಾಗಿದೆ. ಇದು ಕಣ್ಣಿನ ಬ್ಯಾಕ್ಟೀರಿಯಾ ಸೋಂಕಿನ ರೋಗವಾಗಿದೆ. ಸೋಂಕಿನಿಂದಾಗಿ ಕಣ್ಣುಗುಡ್ಡೆಗಳಲ್ಲಿ ಅಕ್ಷಿಪಟಲದಲ್ಲಿ ಉರಿ ಕಾಣಿಸಿಕೊಳ್ಳುತ್ತದೆ.

ಇದನ್ನು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಘೋಷಿಸಿದರು. ನವದೆಹಲಿಯಲ್ಲಿ ರಾಷ್ಟ್ರೀಯ ಟ್ರಕೋಮಾ ಸಮೀಕ್ಷೆ ವರದಿ (2014-2017) ಬಿಡುಗಡೆ ಮಾಡಿ ಅವರು ಮಾತನಾಡಿದರು. ಇದರೊಂದಿಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್) ನಿಗದಿಪಡಿಸಿದ ಟ್ರಕೋಮಾ ನಿರ್ಮೂಲನೆ ಭಾರತ ಸಾಧಿಸಿದಂತಾಗಿದೆ.

ಜಿಇಟಿ-2020 (ಗ್ಲೋಬಲ್ ಎಲಮಿನೇಷನ್ ಆಫ್ ಟ್ರಕೋಮಾವನ್ನು 2020ರೊಳಗೆ) ನಿರ್ಮೂಲನೆ ಮಾಡುವ ಗುರಿ ಹಾಕಿಕೊಂಡಿದೆ.

ಟ್ರಕೋಮಾ

ಟ್ರಕೋಮಾ ಎನ್ನುವುದು ಕಣ್ಣಿನ ತೀವ್ರತರ ಸೋಂಕು ರೋಗವಾಗಿದ್ದು, ಇದು ಜಾಗತಿಕವಾಗಿ ಸೋಂಕಿನಿಂದಾಗುವ ಅಂಧತ್ವಕ್ಕೆ ಪ್ರಮುಖ ಕಾರಣವಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಪರಿಸರ ಹಾಗೂ ವೈಯಕ್ತಿಕ ನೈರ್ಮಲ್ಯದ ಕೊರತೆ, ಅಸಮರ್ಪಕ ನೀರು ಮತ್ತು ನೈರ್ಮಲ್ಯದ ಲಭ್ಯತೆ. ಇದು ಕಣ್ಣುಗುಡ್ಡೆಯ ನಡುವಿನ ಅಕ್ಷಿಪಟಲಕ್ಕೆ ಹಾನಿ ಉಂಟುಮಾಡುತ್ತದೆ.

ಪದೇ ಪದೇ ಟ್ರಕೋಮಾ ಸೋಂಕು ತಗುಲುವುದರಿಂದ ಅಕ್ಷಿಪಟಲಕ್ಕೆ ಹಾನಿ ಉಂಟಾಗಿ ಕಣ್ಣಗುಡ್ಡೆಗಳಿಗೂ ತೊಂದರೆಯಾಗುತ್ತದೆ. ಇದು ಕಣ್ಣಿನ ಕಾರ್ನಿಯಾಗೂ ಹಾನಿ ಮಾಡಿ ಅಂಧತ್ವಕ್ಕೆ ಕಾರಣವಾಗುತ್ತದೆ. ಇದು ಕಾರ್ನಿಯಾ ಅಂಧತ್ವಕ್ಕೆ ಭಾರತದಲ್ಲಿ ಪ್ರಮುಖ ಕಾರಣವಾಗಿದೆ. ಹಲವು ಮಂದಿ ಯುವಕರಿಗೆ ಇದು ಬಾಧಿಸುತ್ತದೆ. ಅದರಲ್ಲೂ ಮುಖ್ಯವಾಗಿ ಗುಜರಾತ್, ಪಂಜಾಬ್, ಹರ್ಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಂಥ ಉತ್ತರ ರಾಜ್ಯಗಳಲ್ಲಿ ದೊಡ್ಡ ಸಂಖ್ಯೆಯ ಜನರನ್ನು ಬಾಧಿಸುತ್ತಿತ್ತು.

ರಾಷ್ಟ್ರೀಯ ಟ್ರಕೋಮಾ ಸಮೀಕ್ಷೆ ವರದಿ (2014-2017)

ಸಮೀಕ್ಷಾ ಫಲಿತಾಂಶದಿಂದ ತಿಳಿದುಬರುವಂತೆ ಸಕ್ರಿಯ ಟ್ರಕೋಮಾ ಭಾರತದಲ್ಲಿ ಇನ್ನು ಮುಂದೆ ಆರೋಗ್ಯ ಸಮಸ್ಯೆಯಾಗಿ ಉಳಿಯದು. ಹಲವು ದಶಕಗಳ ಕಾಲ ವಿವಿಧ ವಿಭಾಗಗಳು ಹಸ್ತಕ್ಷೇಪ ಮಾಡಿ, ಪ್ರಯತ್ನಗಳನ್ನು ನಡೆಸಿ ಸಂಘಟಿತವಾಗಿ ಇದರ ವಿರುದ್ಧ ಹೋರಾಡಿದ್ದರಿಂದ ಇದನ್ನು ಸಾಧಿಸುವುದು ಸಾಧ್ಯವಾಗಿದೆ. ಸೋಂಕುನಿವಾರಕ ಡ್ರಾಪ್, ವೈಯಕ್ತಿಕ ನೈರ್ಮಲ್ಯ, ಸುಧಾರಿಸಿರುವ ಪರಿಸರ ನೈರ್ಮಲ್ಯ, ಸುರಕ್ಷಿತ ನೀರಿನ ಲಭ್ಯತೆ, ಶಸ್ತ್ರಚಿಕಿತ್ಸಾ ಸೌಲಭ್ಯಗಳ ಲಭ್ಯತೆ ಮತ್ತಿತರ ಅಂಶಗಳು ಇದಕ್ಕೆ ಪೂರಕವಾಗಿವೆ.

ಟ್ರಕೋಮಾ ರೋಗವನ್ನು 10 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಸಂಪೂರ್ಣ ನಿರ್ಮೂಲನೆಗೊಳಿಸಲಾಗಿದ್ದು, ಸಮೀಕ್ಷೆ ಕೈಗೊಂಡ ಎಲ್ಲ ರಾಜ್ಯಗಳಲ್ಲಿ ಇದರ ಇರುವಿಕೆ ಪ್ರಮಾಣ ಶೇಕಡ 0.7ಕ್ಕಿಂತ ಕಡಿಮೆ ಇದೆ. ಇದು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಪ್ರಮಾಣಕ್ಕಿಂತ ತೀರಾ ಕಡಿಮೆ. ವಿಶ್ವ ಆರೋಗ್ಯಸಂಸ್ಥೆಯ ಗುರಿಯ ಅನ್ವಯ ಟ್ರಕೋಮಾವನ್ನು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಶೇಕಡ 5ಕ್ಕಿಂತ ಕಡಿಮೆ ಇದ್ದರೆ ಟ್ರಕೋಮಾ ಮುಕ್ತ ಎಂದು ಘೋಷಿಸಬಹುದಾಗಿದೆ.

Comment