IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಕರ್ನಾಟಕ ಹೆದ್ದಾರಿಗಳ ಮೇಲ್ದರ್ಜೆಗೆ ಎಡಿಬಿ ನೆರವು

ಕರ್ನಾಟಕ ಹೆದ್ದಾರಿಗಳ ಮೇಲ್ದರ್ಜೆಗೆ ಎಡಿಬಿ ನೆರವು

ಬಹುಪಕ್ಷೀಯ ನೆರವು ಸಂಸ್ಥೆಯಾದ ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಕರ್ನಾಟಕದಲ್ಲಿ ಹೆದ್ದಾರಿಗಳ ಉನ್ನತೀಕರಣ ಯೋಜನೆಗೆ 346 ದಶಲಕ್ಷ ಡಾಲರ್ ನೆರವು ನೀಡುವ ಪ್ರಸ್ತಾವವನ್ನು ಅನುಮೋದಿಸಿದೆ.

ಸಾಲದ ನಿಧಿಯನ್ನು ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ-3ಕ್ಕೆ ವಿನಿಯೋಜಿಸಲಾಗುತ್ತದೆ. ಯೋಜನೆಯಡಿ 419 ಕಿಲೋಮೀಟರ್ ರಾಜ್ಯ ಹೆದ್ದಾರಿಗಳನ್ನು ದ್ವಿಪಥ ರಸ್ತೆಯ ಬದಲಾಗಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಇದರ ಜತೆಗೆ ರಸ್ತೆಯುದ್ದಕ್ಖೂ ಬರುವ ಮೋರಿ ಹಾಗೂ ಚರಂಡಿಗಳನ್ನು ಉನ್ನತೀಕರಿಇಸುವುದು ಕೂಡಾ ಇದರಲ್ಲಿ ಸೇರಿದೆ.

ಪ್ರಮುಖ ಅಂಶಗಳು

ರಸ್ತೆ ಯೋಜನೆಗಳು ಸ್ಥಳೀಯರ ರಸ್ತೆ ಅಗತ್ಯತೆಯನ್ನು ಪೂರೈಸುವ ಜತೆಗೆ ಸಮರ್ಪಕವಾದ ಪಾದಚಾರಿ ರಸ್ತೆ, ದೀಪ ಹಾಗೂ ರಾತ್ರಿಯ ವೇಳೆ ಅಪಾಯಕಾರಿ ಮೋರಿಗಳ ಸುಧಾರಣೆ ಅಂಶಗಳನ್ನು ಪ್ರಮುಖವಾಗಿ ಒಳಗೊಂಡಿದೆ.

ಇದು ರಸ್ತೆ ಸುರಕ್ಷತಾ ಸಮೀಕ್ಷೆಯನ್ನು ಕೂಡಾ ನಡೆಸಲಿದ್ದು, ತೀವ್ರ ಅಪಘಾತ ಸ್ಥಳಗಳನ್ನು ರಾಜ್ಯ ಹೆದ್ದಾರಿಯುದ್ದಕ್ಕೂ ಗುರುತಿಸುವ ಕಾರ್ಯವನ್ನೂ ಮಾಡಲಿದೆ. ಜತೆಗೆ ಇವುಗಳ ಸುಧಾರಣೆಗೂ ಕ್ರಮ ಕೈಗೊಳ್ಳಲಿದೆ. ಇದಲ್ಲದೇ ರಸ್ತೆ ಉನ್ನತೀಕರಣದಲ್ಲಿ, ಯೋಜನಾಬದ್ಧವಾಗಿ ಪಾದಚಾರಿ ರಸ್ತೆಗಳ ನಿರ್ಮಾಣ, ಮಹಿಳಾ ಸ್ನೇಹಿ ಸೌಲಭ್ಯಗಳನ್ನು ಅಳವಡಿಸುವುದು ಹಾಗೂ ಕ್ರಾಸಿಂಗ್ಗಳಲ್ಲಿ ಸಂಕೇತವನ್ನು ನೀಡುವ ಅಂಶಗಳನ್ನು ಕೂಡಾ ಒಳಗೊಂಡಿದೆ.

ಇದು ರಾಜ್ಯದ ರಸ್ತೆ ಜಾಲ ಅಭಿವೃದ್ಧಿಗೆ ಎಡಿಬಿಯಿಂದ ದೊರಕಿದ ಎರಡನೇ ಸಾಲವಾಗಿದೆ. ಯೋಜನೆಯ ಒಟ್ಟು ಅಂದಾಜು ಮೌಲ್ಯ 55 ದಶಲಕ್ಷ ಕೋಟಿ ಡಾಲರ್ ಎಮದು ಅಂದಾಜು ಮಾಡಲಾಗಿದ್ದು, ಪೈಕಿ ರಾಜ್ಯ ಸರ್ಕಾರ 202 ದಶಲಕ್ಷ ಡಾಲರ್, ಖಾಸಗಿ ವಲಯ ಹೂಡಿಕೆಯಿಂದ 107 ದಶಕ್ಷ ಡಾಲರ್ ಕ್ರೋಢೀಕರಿಸುವ ಗುರಿ ಹೊಂದಲಾಗಿದೆ.

ಏಷ್ಯನ್ ಅಭಿವೃದ್ಧಿ ಬ್ಯಾಂಕ್

ಎಡಿಬಿ ಒಂದು ಪ್ರಾದೇಶಿಕ ಅಭಿವೃದ್ಧಿ ಬ್ಯಾಂಕ್ ಆಗಿದ್ದು, ಇದು ಏಷ್ಯಾದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಇದು 1966ರಲ್ಲಿ ಆರಂಭವಾಗಿದೆ. ಇದರ ಕೇಂದ್ರ ಕಚೇರಿ ಫಿಲಿಫೀನ್ಸ್ ಮನಿಲಾದಲ್ಲಿದೆ. ಪ್ರಸ್ತುತ ಇದಕ್ಕೆ 67 ಸದಸ್ಯ ದೇಶಗಳಿದ್ದು, ಪೈಕಿ 48 ಏಷ್ಯನ್ ದೆಶಗಳು ಹಾಗೂ 19 ಪೆಸಿಫಿಕ್ ಹಾಗೂ ಹೊರಗಿನ ದೇಶಗಳಾಗಿವೆ.

ಎಡಿಬಿಯನ್ನು ವಿಶ್ವಬ್ಯಾಂಕ್ ಮಾದರಿಯಲ್ಲೇ ರೂಪಿಸಲಾಗಿದೆ. ವಿಶ್ವಬ್ಯಾಂಕ್ ವ್ಯವಸ್ಥೆಗೆ ಅನುಗುನವಾಗಿಯೇ ಮತದ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಸದಸ್ಯದೇಶಗಳ ಬಂಡವಾಳಕ್ಕೆ ಅನುಗುನವಾಗಿ ದೇಶಗಳ ಮತಹಕ್ಕು ನಿಗದಿಯಾಗುತ್ತದೆ. 2014 ವರೆಗೆ ಜಪಾನ್ ಅತಿಹೆಚ್ಚು ಪಾಲು ಬಂಡವಾಳವನ್ನು ಹೊಂದಿದ್ದು, ಶೇಕಡ 15.7ರಷ್ಟು ಷೇರುಗಳನ್ನು ಹೊಂದಿದೆ. ಉಳಿದಂತೆ ಅಮೆರಿಕ (15.60, ಚೀನಾ (6.5), ಭಾರತ (6.4) ಮತ್ತು ಆಸ್ಟ್ರೇಲಿಯಾ (5.8) ಪಾಲು ಹೊಂದಿವೆ.

Comment