IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಎಕ್ಸಿಟೋನಿಮಸ್: ವಿಜ್ಞಾನಿಗಳಿಂದ ವಸ್ತುವಿನ ಹೊಸ ರೂಪ ಶೋಧ

ಎಕ್ಸಿಟೋನಿಮಸ್: ವಿಜ್ಞಾನಿಗಳಿಂದ ವಸ್ತುವಿನ ಹೊಸ ರೂಪ ಶೋಧ

ಇಲಿನೋಯಿಸ್ ವಿಶ್ವವಿದ್ಯಾನಿಲಯದ ಸಂಶೋಧಕರು ವಸ್ತುವಿನ ಹೊಸ ರೂಪವನ್ನು ಸಂಶೋಧಿಸಿದ್ದು, ಇದಕ್ಕೆ ಎಕ್ಸಿಟೋನಿಮಸ್ ಎಂದು ಹೆಸರಿಸಲಾಗಿದೆ. ವಿಶಿಷ್ಟ ಹಾಗೂ ವಿಸ್ಮಯ ರೂಪವನ್ನು ಹಾರ್ವರ್ಡ್ ಸೈದ್ಧಾಂತಿಕ ಬೌತಶಾಸ್ತ್ರಜ್ಞ ಬೆರ್ಟ್ ಹಾಪರ್ 1960ರಲ್ಲಿ ಸಂಶೋಧಿಸಿದ ಎಕ್ಸಿಟೋನಿಮಸ್ ಎಂಬ ಪದವನ್ನು ರೂಪಕ್ಕೆ ಇಡಲಾಗಿದೆ.

ಪ್ರಮುಖ ಅಂಶಗಳು

ಎಕ್ಸಿಟೋನ್ಸ್ಗಳ ಅಸ್ತಿತ್ವವನ್ನು ನಿರೂಪಿಸಲು ವಿಜ್ಞಾನಿಗಳು ಡೋಪ್ ಮಾಡಲಾದ ಡಿಹಾಲ್ಕೊನೈಡ್ ಟಿಟಾನಿಯಂ ಡಿಸೆಲೆನೈಡ್ (1ಟಿ-ಟಿಐಎಸ್2) ಎಂಬ ವರ್ಗಾಂತರದ ಲೋಹವನ್ನು ಬಳಸಲಾಗಿದೆ. ವಸ್ತುವನ್ನು ಒಂದು ಬಗೆಯ ಬೋಸೋನ್ ಎಂಬ ಸಂಯುಕ್ತ ಕಣಗಳಿಂದ ಉತ್ಪಾಧಿಸಲಾಗಿದ್ದು, ಇದು ಸೂಪರ್ಫ್ಲೂಯಿಡ್ ಆಗಿ ಕಾರ್ಯ ನಿರ್ವಹಿಸಬಲ್ಲದು. ಜತೆಗೆ ಸೂಪರ್ ಕಂಡಕ್ಟರ್ ಹಾಗೂ ಇನ್ಸುಲೇಟಿಂಗ್ ಎಲೆಕ್ಟ್ರಿಕ್ ಕಣವಾಗಿಯೂ ಇದು ಕೆಲಸ ಮಾಡುತ್ತದೆ. ವಿಜ್ಞಾನಿಗಳು ಎಕ್ಸಿಡೋನಿಯಂ ಅಸ್ತಿತ್ವವನ್ನು ವೀಕ್ಷಿಸಲು ವಿನೂತನ ವಿಧಾನವಾದ ಮೊಮೆಂಟಮ್- ರಿಸಾಲ್ವ್ಡ್ ಎಲೆಕ್ಟ್ರಾನ್ ಎನರ್ಜಿ ಲಾಸ್ ಸ್ಪೆಕ್ಟ್ರೊಸ್ಕೊಪಿ (ಎಂ-ಇಇಎಲ್ಎಸ್) ಬಳಸಿದ್ದಾರೆ.

ಎಕ್ಸಿಟೋನಿಯಂ

ಎಕ್ಸಿಟೋನಿಯಂ ಎನ್ನುವುದು ಸಂಕುಚಿತಗೊಳಿಸುವ ಸಾಧನವಾಗಿದ್ದು, ಇದನ್ನು ಎಕ್ಸಿಟೋನ್ನಿಂದ ಉತ್ಪಾದಿಸಲಾಗಿದೆ. ಇದು ಸೂಪರ್ಕಂಡಕ್ಟರ್ ಮೈಕ್ರೋಸ್ಕೋಪಿಕ್ ಕ್ವಾಂಟಮ್ ಫಿನೋಮಿನಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಎಕ್ಸಿಟೋನ್ಗಳು ತೀರಾ ವಿಚಿತ್ರವಾದ ಕ್ವಾಂಟಲ್ ಮೆಕ್ಯಾನಿಕಲ್ ಪೇರಿಂಗ್ನಿಂದ ಮಾಡಲ್ಪಟ್ಟ ಕಣಗಳಾಗಿವೆ. ಇದನ್ನು ತಪ್ಪಿಸಿಕೊಂಡ ಎಲೆಕ್ಟ್ರಾನ್ಗಳು ಮತ್ತು ರಂಧ್ರಗಳಿಂದ ಪಡೆಯಲಾಗುತ್ತದೆ.

ಕ್ಷಿಪ್ರ ಕ್ವಾಂಟಮ್ ಮೆಕ್ಯಾನಿಕಲ್ ಪೇರಿಂಗ್ ಹೇಗೆ ಸಾಧ್ಯವೆಂದರೆ, ಸೆಮಿಕಂಡಕ್ಟರ್ಗಳಲ್ಲಿ ಒಂದು ಕಣದ ವಿದ್ಯುತ್ ಮಟ್ಟದ ತುದಿಯಲ್ಲಿನ ಎಲೆಕ್ಟ್ರಾನ್ಗಳು ಪುಳಕಗೊಂಡಾದ ಮತ್ತೊಂದು ವಿದ್ಯುತ್ ಮಟ್ಟಕ್ಕೆ ಹಾರುತ್ತವೆ. ಇದರಿಂದಾಗಿ ಮೊದಲಿನ ಮಟ್ಟದಲ್ಲಿ ಒಂದು ಸಣ್ಣ ರಂಧ್ರ ಉಳಿದುಕೊಳ್ಳುತ್ತದೆ. ರಂಧ್ರವು ಧನಾತ್ಮಕವಾಗಿ ಚಾರ್ಜ್ ಮಾಡಲಾದ ಕಣವಾಗಿ ಕಾರ್ಯ ನಿರ್ವಹಿಸುತ್ತದೆ ಹಾಗೂ ಋಣಾತ್ಮಕವಾಗಿ ಚಾರ್ಜ್  ಆದ ತಪ್ಪಿಸಿಕೊಂಡ ಎಲೆಕ್ಟ್ರಾನ್ಗಳನ್ನು ಇದು ಆಕರ್ಷಿಸುತ್ತದೆ.

ಮಹತ್ವ

ಎಕ್ಸಿಟೋನಿಯಂ, ಸೂಪರ್ಕಂಡಕ್ಟರ್ನಂತೆ ಮೈಕ್ರೋಸ್ಕೋಪಿಕ್ ಕ್ವಾಂಟಮ್ ಫಿನೋಮಿನಾವನ್ನು ಪ್ರದರ್ಶಿಸುತ್ತದೆ ವಿಶೇಷವಾದ ಸಂಶೋಧನೆಯಿಂದಾಗಿ ಇನ್ನಷ್ಟು ಕ್ವಾಂಟಮ್ ಮೆಕ್ಯಾನಿಕಲ್ ವಿಸ್ಮಯಗಳನ್ನು ಅನಾವರಣಗೊಳಿಸಲು ಸಾಧ್ಯವಾಗಲಿದೆ. ಸೂಪರ್ ಕಂಡಕ್ಟರ್ ಹಾಗೂ ಸೂಪರ್ ಫ್ಲೂಯಿಡ್ ಆಗಿ, ವಸ್ತುವನ್ನು ಮತ್ತಷ್ಟು ಪ್ರಸ್ತುತ ತಂತ್ರಜ್ಞಾನಗಳಿಗೆ ಬಳಸಬಹುದಾಗಿದೆ. ಅನ್ವಯಿಕೆಗಳು ಅದರಲ್ಲೂ ಮುಖ್ಯವಾಗಿ ಕಣ ತಂತ್ರಜ್ಞಾನವು ಹಂತದಲ್ಲಿ ಊಹಾತ್ಮಕವಾಗಿರುತ್ತದೆ.

Comment