IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಗೋವಾದಲ್ಲಿ ಮೊಟ್ಟಮೊದಲ ಸಂಚಾರಿ ಆಹಾರ ಪರೀಕ್ಷಾ ಪ್ರಯೋಗಾಲಯ

ಗೋವಾದಲ್ಲಿ ಮೊಟ್ಟಮೊದಲ ಸಂಚಾರಿ ಆಹಾರ ಪರೀಕ್ಷಾ ಪ್ರಯೋಗಾಲಯ

ದೇಶದ ಮೊಟ್ಟಮೊದಲ ಸಂಚಾರಿ ಆಹಾರ ಪರೀಕ್ಷಾ ಪ್ರಯೋಗಾಲಯವನ್ನು ಗೋವಾದಲ್ಲಿ ಆರಂಭಿಸಲಾಗಿದೆ. ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ನೂತನ ಸಂಚಾರಿ ಪ್ರಯೋಗಾಲಯ ಉದ್ಘಾಟಿಸಿದರು.

ಪ್ರಮುಖ ಅಂಶಗಳು

ಇದು ದೇಶದಲ್ಲೇ ಮೊಟ್ಟಮೊದಲ ಸಂಚಾರಿ ಆಹಾರ ಸುರಕ್ಷಾ ಪ್ರಯೋಗಾಲಯವಾಗಿದೆ. ವಾಹನದಲ್ಲಿ ಸ್ಥಳದಲ್ಲೇ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸುವ ಮತ್ತು ಕಲಬೆರಕೆಯನ್ನು ಪತ್ತೆ ಮಾಡಿ ತಡೆಯುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದು ನೀರಿನ ನೈರ್ಮಲ್ಯಮಟ್ಟವನ್ನು ಕೂಡಾ ಪರಿಶೀಲಿಸಲಿದ್ದು, ಕೇವಲ 15 ನಿಮಿಷಗಳಲ್ಲಿ ಇದು ಫಲಿತಾಂಶವನ್ನು ನೀಡಬಲ್ಲದು.

ಸಂಚಾರಿ ಆಹಾರ ತಪಾಸಣಾ ಪ್ರಯೋಗಾಲಯದ ಅಂದಾಜು ವೆಚ್ಚ 45 ಲಕ್ಷ ರೂಪಾಯಿಗಳಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಅನುದಾನ ನೀಡಿದೆ. ಇದು ಆಹಾರ ಮಾದರಿಗಳನ್ನು ಪಣಜಿ ಸಮೀಪದ ಎಫ್ಡಿಎ ಪ್ರಯೋಗಾಲದಿಂದ ಪರೀಕ್ಷೆಗಾಗಿ ಪಡೆಯುತ್ತದೆ ಹಾಗೂ ಇದು ಅನಗತ್ಯ ವಿಳಂಬವನ್ನು ತಪ್ಪಿಸಲು ಸಹಕಾರಿಯಾಗಿದೆ. ಇದನ್ನು ದಿಢೀರ್ ತಪಾಸಣೆಗಳಿಗಾಗಿ ಮತ್ತು ನಿಗದಿತ ಪರೀಕ್ಷೆಗಳಿಗಾಗಿಯೂ ಬಳಸಿಕೊಳ್ಳಲು ಅವಕಾಶವಿದೆ.

ವಾಹನದಲ್ಲಿ ಮುಖ್ಯವಾಗಿ ಹಾಲಿನ ವಿಶ್ಲೇಷಕ, ಬಿಸಿ ಗಾಳಿಯ ಓವನ್, ಹಾಟ್ ಪ್ಲೇಟ್, ಮಿಕ್ಸರ್ ಗ್ರೈಂಡರ್, ಡಿಜಿಟಲ್ ತೂಕದ ಮಾಪಕ, ಡಿಜಿಟಲ್ ಬಹು ಮಾನದಂಡದ ಮೀಟರ್, ಪವರ್ ಜನರೇಟರ್, ವಾತಾನುಕೂಲ ವ್ಯವಸ್ಥೆ ಮತ್ತು ರೆಫ್ರಿಜರೇಟರ್ ಸೌಲಭ್ಯ ಇರುತ್ತದೆ.

Comment