IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಬೋಧಿ ಪರ್ವ: ದೆಹಲಿಯಲ್ಲಿ ಬಿಮ್ಸ್ ಟೆಕ್ ಬೌದ್ಧ ಪರಂಪರೆ ಹಬ್ಬ

ಬೋಧಿ ಪರ್ವ: ದೆಹಲಿಯಲ್ಲಿ ಬಿಮ್ಸ್ ಟೆಕ್ ಬೌದ್ಧ ಪರಂಪರೆ ಹಬ್ಬ

ನವದೆಹಲಿಯಲ್ಲಿ ಇತ್ತೀಚೆಗೆ ಬೋಧಿ ಪರ್ವ: ಬಿಮ್ಸ್ಟೆಕ್ ಬೌದ್ಧ ಪರಂಪರೆ ಹಬ್ಬ ನಡೆಯಿತು. ಭಾರತ ಸರ್ಕಾರ ಇದನ್ನು ಆಯೋಜಿಸಿತ್ತು. ಬಿಮ್ಸ್ಟೆಕ್ 20ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಉತ್ಸವ ಆಯೋಜಿಸಲಾಗಿತ್ತು. ಕೇಂದ್ರ ಸಂಸ್ಕøತಿ ಖಾತೆ ಸಚಿವ ಮಹೇಶ್ ಶರ್ಮಾ ಉತ್ಸವವನ್ನು ನವದೆಹಲಿಯಲ್ಲಿ ಉದ್ಘಾಟಿಸಿದರು.

ಉತ್ಸವವು ಜನಪಥ್ ರಸ್ತೆಯ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ (ಐಜಿಎನ್ಸಿಎ) ದಲ್ಲಿ ನಡೆಯಿತು. ಇದರಲ್ಲಿ ವೈವಿಧ್ಯಮಯ ಅಂಶಗಳು ಒಳಗೊಂಡಿದ್ದು, ಅಂತರರಾಷ್ಟ್ರೀಯ ಹಾಗೂ ಭಾರತೀಯ ಬೌದ್ಧ ಕಲೆ ಹಾಗೂ ವಾಸ್ತುಶಿಲ್ಪಗಳ ಪ್ರದರ್ಶನ ಗಮನ ಸೆಳೆಯಿತು. ಖ್ಯಾತ ವಾಗ್ಮಿಗಳು ಹಾಗೂ ಬೌದ್ಧ ಚಿಂತಕರಿಂದ ಪ್ರವಚನಗಳು, ಬೌದ್ಧಭಿಕ್ಷುಗಳಿಂದ ಹಾಗೂ ಸಾಧಕರಿಂದ ಮಾರ್ಗದರ್ಶನಯುಕ್ತ ಧ್ಯಾನ ಹಾಗೂ ಪಠಣ, ನೃತ್ಯ ಹಾಗೂ ಸಂಗೀತ ಕಚೇರಿಗಳು, ಬೌದ್ಧಧರ್ಮ ಕುರಿತ ಚಲನಚಿತ್ರ ಪ್ರದರ್ಶನ ಹಾಗೂ ಆಹಾರ ಮೇಳ ಪ್ರಮುಖ ಆಕರ್ಷಣೆಯಾಗಿತ್ತು.

ಉತ್ಸವದ ಉದ್ದೇಶ

ಬೌದ್ಧಧರ್ಮಕ್ಕೆ ಒತ್ತು ನೀಡುವುದು ಹಾಗೂ ಬೌದ್ಧಧರ್ಮದ ಬಗ್ಗೆ ಜನಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶ. ಬಿಮ್ಸ್ಟೆಕ್ 20ನೇ ವರ್ಷಾಚರಣೆ ಸಂದರ್ಭದಲ್ಲಿ ಸಾಮಾನ್ಯ ಹಾಗೂ ಸಮೃದ್ಧ ಪರಂಪರೆಯನ್ನು ಉಳಿಸಿ ಬೆಳೆಸುವುದು ಇದರ ಉದ್ದೇಶ. ಬೌದ್ಧಧರ್ಮ ಅನುಸರಿಸಿಕೊಂಡು ಬಂದ ಶಾಂತಿ ಮತ್ತು ಸಹಿಷ್ಣುತೆಯ ಸಾರ್ವತ್ರಿಕ ಸಂದೇಶವನ್ನು ಸಾರುವುದು ಹಾಗೂ ಜಾಗತಿಕ ಮಟ್ಟದಲ್ಲಿನ ಸಂಘರ್ಷದ ವಾತಾವರಣವನ್ನು ತಿಳಿಗೊಳಿಸಲು ನೆರವಾಗುವುದು.

ಮಹತ್ವ

ಬಿಮ್ಸ್ಟೆಕ್ ಎನ್ನುವುದು ಅಂತರರಾಷ್ಟ್ರೀಯ ಸಂಘಟನೆಯಾಗಿದುದ, ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್, ಥಾಯ್ಲೆಂಡ್, ಶ್ರೀಲಂಕಾ, ನೇಪಾಳ ಹಾಗೂ ಭೂತಾನ್ ದೇಶಗಳನ್ನು ಒಳಗೊಂಡಿದೆ. ಬಿಮ್ಸ್ಟೆಕ್ ಬೌದ್ಧಧರ್ಮದ ಜತೆ ಆಳವಾದ ನಂಟು ಹೊಂದಿದ್ದು, ಇದು ದಕ್ಷಿಣ ಏಷ್ಯಾದಿಂದ ಹುಟ್ಟಿ, ಆಗ್ನೇಯ ಏಷ್ಯಾವರೆಗೆ ಬೆಳೆದು ಬೇರುಬಿಟ್ಟಿದೆ. ಬೌದ್ಧಧರ್ಮವು ದಕ್ಷಿಣ ಹಾಗೂ ಆಗ್ನೇಯ ಏಷ್ಯಾ ದೇಶಗಳ ನಡುವಿನ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತದೆ.

Comment