IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಎಂಎಸ್‍ಎಂ ಸಂಬಂಧ್: ಸಾರ್ವಜನಿಕ ಖರೀದಿಗೆ ಪೋರ್ಟೆಲ್

ಎಂಎಸ್‍ಎಂ ಸಂಬಂಧ್: ಸಾರ್ವಜನಿಕ ಖರೀದಿಗೆ ಪೋರ್ಟೆಲ್

ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳ ಸಚಿವಾಲಯವು ಸಾರ್ವಜನಿಕ ಖರೀದಿ ಪೋರ್ಟೆಲ್, ಎಂಎಸ್‍ಎಂಇ ಸಂಬಂಧ್‍ಗೆ ಚಾಲನೆ ನೀಡಿದೆ. ಇದು ಎಂಎಸ್‍ಎಂಇಗಳಿಗೆ ಸಾರ್ವಜನಿಕ ಖರೀದಿಗೆ ಅನುಕೂಲ ಮಾಡಿಕೊಡಲಿದೆ.

ಈ ಪೋರ್ಟೆಲ್‍ನ ಮುಖ್ಯ ಉದ್ದೇಶವೆಂದರೆ, ಎಂಎಸ್‍ಎಂಇಗಳಿಂದ ಸಾರ್ವಜನಿಕ ಖರೀದಿ ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆಗೆ ಇದು ಸಹಕಾರಿಯಾಗಲಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಎಂಎಸ್‍ಎಂಇ ಘಟಕಗಳಿಂದ ಖರೀದಿಸುವ ಸರಕುಗಳಿಗೆ ಇದು ಅನ್ವಯಿಸುತ್ತದೆ. ಇದು ಎಂಎಸ್‍ಎಂಇಗಳಿಗೆ ಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಕೂಲ ಮಾಡಿಕೊಡಲಿದೆ. ಇದಲ್ಲದೇ ಇದು ಸಚಿವಾಲಯ ಹಾಗೂ ಇತರ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಗೆ ತಮ್ಮ ಖರೀದಿ ಪ್ರಕ್ರಿಯೆಯ ಕ್ಷಮತೆಯನ್ನು ಮೌಲ್ಯಮಾಪನ ಮಾಡಲು ನೆರವಾಗುತ್ತದೆ. ಜತೆಗೆ 2012ರ ಖರೀದಿ ನೀತಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ.

ಹಿನ್ನೆಲೆ

2012ರಲ್ಲಿ ಚಾಲನೆ ನೀಡಲಾದ ಹೊಸ ಖರೀದಿ ನೀತಿಯು, ಕೇಂದ್ರ ಸರ್ಕಾರದ ಇಲಾಖೆಗಳು ಹಾಗೂ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಅಗತ್ಯವಾದ ಬಿಡಿಭಾಗಗಳನ್ನು ಹಾಗೂ ಇತರ ಬಂಡವಾಳ ಸರಕುಗಳನ್ನು ಎಂಎಸ್‍ಇಗಳಿಮದ ಖರೀದಿಸುವುದನ್ನು ಕಡ್ಡಾಯ ಮಾಡಿದೆ. ಅಂದರೆ ಕೇಂದ್ರ ಸರ್ಕಾರದ ಎಲ್ಲ ಸಚಿವಾಲಯಗಳು, ಇಲಾಖೆಗಳು, ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಎಂಎಸ್‍ಇಗಳಿಂದ ಖರೀದಿಸುವ ವಾರ್ಷಿಕ ಗುರಿಯನ್ನು ವರ್ಷದ ಆರಂಭದಲ್ಲೇ ನಿಗದಿಪಡಿಸಬೇಕಾಗುತ್ತದೆ. ಇದರ ಮುಖ್ಯವಾದ ಉದ್ದೇಶವೆಂದರೆ, ವಾರ್ಷಿಕ ಒಟ್ಟು ಉತ್ಪಾದನೆಯ ಕನಿಷ್ಠ ಶೇಕಡ 20ನ್ನು ಎಂಎಸ್‍ಇ ಘಟಕಗಳಿಂದ ಖರೀದಿಸುವುದು.

Comment