IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಹಿಂದಿ ಲೇಖಕಿ ಮಮತಾ ಕಾಲಿಯಾಗೆ ವ್ಯಾಸ ಸಮ್ಮಾನ್

ಹಿಂದಿ ಲೇಖಕಿ ಮಮತಾ ಕಾಲಿಯಾಗೆ ವ್ಯಾಸ ಸಮ್ಮಾನ್

ಖ್ಯಾತ ಹಿಂದಿ ಲೇಖಕಿ ಮಮತಾ ಕಾಲಿಯಾ ಅವರನ್ನು 2017ನೇ ಸಾಲಿನ ಪ್ರತಿಷ್ಠಿತ ವ್ಯಾಸ ಸಮ್ಮಾನ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅವರ ದುಃಖಂ ಸುಖಂ ಕಾದಂಬರಿಗೆ ಗೌರವ ಸಂದಿದೆ. ಖ್ಯಾತ ಲೇಖಕ ವಿಶ್ವನಾಥ್ ಪ್ರಸಾದ್ ತಿವಾರಿ ನೇತೃತ್ವದ ಉನ್ನತ ಮಟ್ಟದ ಆಯ್ಕೆ ಸಮಿತಿ ಮಮತಾ ಕಾಲಿಯಾ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

2009ರಲ್ಲಿ ಪ್ರಕಟಿತವಾಗಿರುವ ದುಃಖಂ ಸುಖಂ ಕಾದಂಬರಿ, ಕೆಳ ಮಧ್ಯಮವರ್ಗದ ಕುಟುಂಬವೊಂದರ ಮೂರು ತಲೆಮಾರುಗಳ ಕಥಾನಕ. ನಮ್ಮ ಸಮಾಜದಲ್ಲಿ ಆಗುತ್ತಿರುವ ಸ್ಥಿತ್ಯಂತರಗಳ ಬಗ್ಗೆ ಕಾದಂಬರಿ ವಿಸ್ತøತವಾಗಿ ಬೆಳಕು ಚೆಲ್ಲಿದೆ.

ಮಮತಾ ಕಾಲಿಯಾ

ಹಿಂದಿ ಲೇಖಕಿ ಮಮತಾ ಕಾಲಿಯಾ ಹುಟ್ಟಿದ್ದು, 1940ರಲ್ಲಿ ಉತ್ತರ ಪ್ರದೇಶದ ವೃಂದಾವನದಲ್ಲಿ. ದೆಹಲಿ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ಮುಂಬೈನ ಎಸ್ಎನ್ಟಿಡಿ ಮಹಿಳಾ ವಿವಿಯಲ್ಲಿ ಅಧ್ಯಾಪನ ವೃತ್ತಿ ಆರಂಭಿಸಿದರು. 1973 ಬಳಿಕ ಅಲಹಾಬಾದ್ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇರಿದ ಅವರು, 2001 ವರೆಗೂ ಅದೇ ವೃತ್ತಿಯಲ್ಲಿ ಮುಂದುವರಿದರು.

ಹಿಂದಿ ಹಾಗೂ ಇಂಗ್ಲಿಷ್ನಲ್ಲಿ ಹಲವು ಕೃತಿಗಳನ್ನು ರಚಿಸಿರುವ ಇವರ ಪ್ರಮುಖ ಕೃತಿಗಳಲ್ಲಿ ಬೆಗ್ಹಾರ್ಜಂಚ್ ಅಬಿ ಜಾತಿ ಹೈ, ನಿರ್ಮೋಹಿ, ಬೋಲ್ನ್ ವಾಲಿ ಔರತ್ ಸೇರಿವೆ. ಇದಕ್ಕೂ ಮುನ್ನ ಮಮತಾ ಕಾಲಿಯಾ, ಯಶ್ಪಾಲ್ ಕಥಾ ಸಮ್ಮಾನ್ ಗೌರವಕ್ಕೆ ಪಾತ್ರರಾಗಿದ್ದರು. ಉತ್ತರ ಭಾರತ ಹಿಂದಿ ಸಂಘಟನಾ ಪ್ರಶಸ್ತಿ ನೀಡಿತ್ತು. ಜತೆಗೆ ರಾಮ ಮನೋಹರ್ ಲೋಹಿಯಾ ಸಮ್ಮಾನ್ ಹಾಗೂ ಸಾಹಿತ್ಯ ಭೂಷಣ ಸನ್ಮಾನ್ ಗೌರವಕ್ಕೂ ಪಾತ್ರರಾಗಿದ್ದರು.

ವ್ಯಾಸ ಸಮ್ಮಾನ್ ಪ್ರಶಸ್ತಿ

ವ್ಯಾಸ ಸಮ್ಮಾನ್ ಪ್ರಶಸ್ತಿಯನ್ನು ಕೆ.ಕೆ.ಬಿರ್ಲಾ ಫೌಂಡೇಷನ್ 1991ರಲ್ಲಿ ಆರಂಭಿಸಿದೆ. ಇದು ಭಾರತೀಯ ಪ್ರಜೆಗಳು ಕಳೆದ ಹತ್ತು ವರ್ಷಗಳಲ್ಲಿ ರಚಿಸಿದ ಹಿಂದಿ ಕೃತಿಯನ್ನು ಪ್ರಶಸ್ತಿಗೆಪರಿಗಣಿಸುತ್ತದೆ. ಪ್ರಶಸ್ತಿಯು 3.5 ಲಕ್ಷ ರೂಪಾಯಿ ನಗದು, ಭಿನ್ನವತ್ತಳಿಕೆ ಹಾಗೂ ಪ್ರಶಸ್ತಿಯನ್ನು ಒಳಗೊಂಡಿದೆ.

Comment