IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ವೆಸ್ಸೆನಾರ್ ಒಪ್ಪಂದಕ್ಕೆ ಭಾರತ ಸೇರ್ಪಡೆ

ವೆಸ್ಸೆನಾರ್ ಒಪ್ಪಂದಕ್ಕೆ ಭಾರತ ಸೇರ್ಪಡೆ

ಉನ್ನತ ರಫ್ತು ನಿಯಂತ್ರಣ ವ್ಯವಸ್ಥೆಯ ವೆಸ್ಸೆನಾರ್ ಒಪ್ಪಂದಕ್ಕೆ ಭಾರತವನ್ನು ಸದಸ್ಯದೇಶವಾಗಿ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ. ಆಸ್ಟ್ರಿಯಾದ ವಿಯೆನ್ನಾದಲ್ಲಿ ನಡೆದ ಸದಸ್ಯದೇಶಗಳ ಎರಡು ದಿನಗಳ ಅಧಿವೇಶನದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಒಪ್ಪಂದದಲ್ಲಿ ಪಾಲ್ಗೊಳ್ಳುತ್ತಿರುವ 42ನೇ ದೇಶ ಭಾರತ.

ಹಿನ್ನೆಲೆ

ಅಮೆರಿಕದ ಜತೆ ನಾಗರಿಕ ಅಣು ಒಪ್ಪಂದ ಮಾಡಿಕೊಂಡ ಬಳಿಕ, ಭಾರತ ರಫ್ತು ನಿಯಂತ್ರಣ ವ್ಯವಸ್ಥೆಯ ಸದಸ್ಯತ್ವ ಪಡೆಯಲು ಪ್ರಯತ್ನ ನಡೆಸಿತ್ತು. ಮುಖ್ಯವಾಗಿ ಅಣು ಸರಬರಾಜು ಗುಂಪು (ಎನ್ಎಸ್ಜಿ), ಕ್ಷಿಪಣಿ ತಂತ್ರಜ್ಞಾನ ವ್ಯವಸ್ಥೆ (ಎಂಟಿಸಿಆರ್_, ಆಸ್ಟ್ರೇಲಿಯಾ ಗ್ರೂಪ್ ಮತ್ತು ವೆಸ್ಸೆನ್ನಾರ್ ಒಪ್ಪಂಗಳು ಇದರಲ್ಲ ಸೇರಿವೆ. ಇದು ಸಾಂಪ್ರದಾಯಿಕ ಅಣ್ವಸ್ತ್ರ, ಜೈವಿಕ ಹಾಗೂ ರಾಸಾಯನಿಕ ಶಸ್ತ್ರಾಸ್ತ್ರಗಳು ಹಾಗೂ ತಂತ್ರಜ್ಞಾನಗಳನ್ನು ನಿಯಂತ್ರಿಸುತ್ತವೆ. 2016 ಜೂನ್ ತಿಂಗಳಲ್ಲಿ ಭಾರತ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಗೆ  ಸೇರ್ಪಡೆಯಾಗಿತ್ತು. ಇದು ರಫ್ತು ನಿಯಂತ್ರಣ ವ್ಯವಸ್ಥೆಯ ಮತ್ತೊಂದು ಒಪ್ಪಂದವಾಗಿದ್ದು, ಭಾರತವನ್ನು ಪೂರ್ಣಾವಧಿ ಸದಸ್ಯದೇಶವಾಗಿ ಸೇರಿಸಿಕೊಳ್ಳಲಾಗಿದೆ.

ವೆಸ್ಸೆನಾರ್ ಒಪ್ಪಂದ

ವೆಸ್ಸೆನಾರ್ ಒಪ್ಪಂದವು ಪ್ರಮುಖವಾಗಿ ಸಾಂಪ್ರದಾಯಿಕ ಶಸ್ತ್ರಾಸ್ತ್ರ ಹಾಗೂ ಅವಳಿ ಬಳಕೆಯ ಸರಕು ಹಾಗೂ ತಂತ್ರಜ್ಞಾನದ ರಫ್ತನ್ನು ನಿರ್ಬಂಧಿಸುವ ವ್ಯವಸ್ಥೆಯಾಗಿದೆ. ಇದನ್ನು ಸಾಮಾನ್ಯವಾಗಿ ವೆಸ್ಸೆನಾರ್ ಒಪ್ಪಂದ ಎಂದು ಕರೆಯಲಾಗುತ್ತದೆ. ಇದು ಬಹುಪಕ್ಷೀಯ ರಫ್ತು ನಿಯಂತ್ರಣ ವ್ಯವಸ್ಥೆಯಾಗಿದೆ. ಇದು ಶಸ್ತ್ರಾಸ್ತ್ರ ಖರೀದಿಯನ್ನು ನಿಂತ್ರಿಸುವ ವ್ಯವಸ್ಥೆಯಾಗಿದ್ದು, ಎನ್ಎಸ್ಜಿ ಹಾಗೂ ಎಂಟಿಸಿಆರ್ಗೆ ಅನುಗುಣವಾಗಿದೆ.

ಇದನ್ನು 1996ರಲ್ಲಿ ಆರಂಭಿಸಲಾಗಿದ್ದು, ಇದು ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ಭದ್ರತಾ ಹಾಗೂ ಸ್ಥಿರತೆಯನ್ನು ಖಾತ್ರಿಪಡಿಸುತ್ತದೆ. ಪಾರದರ್ಶಕತೆ ಹಾಗೂ ಹೆಚ್ಚಿನ ಹೊಣೆಗಾರಿಕೆಯಲ್ಲಿ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳು, ಅವಳಿ ಬಳಕೆಯ ಸರಕು ಮತ್ತು ತಂತ್ರಜ್ಞಾನಗಳನ್ನು ವರ್ಗಾಯಿಸುವುದನ್ನು ಕಡ್ಡಾಯ ಮಾಡುತ್ತದೆ. ಮೂಲಕ ಶಸ್ತ್ರಾಸ್ತ್ರಗಳ ದಾಸ್ತಾನನ್ನು ಅಸ್ಥಿರಗೊಳಿಸುವುದು ಒಪ್ಪಂದದ ಪ್ರಮುಖ ಉದ್ದೇಶವಾಗಿದೆ.

ಇದರ ಕೇಂದ್ರ ಕಚೇರಿ ಆಸ್ಟ್ರಿಯಾದ ವಿಯೆನ್ನಾದಲ್ಲಿದೆ. ಇದರಲ್ಲಿ 42 ಸದಸ್ಯ ದೇಶಗಳಿದ್ದು, ಭಾರತವೂ ಇದರಲ್ಲಿ ಸೇರಿದೆ. ಚೀನಾ ಹೊರತುಪಡಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎಲ್ಲ ದೇಶಗಳು ಇದರ ಸದಸ್ಯತ್ವ ಪಡೆದಿವೆ. ಒಪ್ಪಂದದ ಪಾಲುದಾರಿಕೆ ದೇಶಗಳು ರಾಷ್ಟ್ರೀಯ ನೀತಿಗಳ ಮೂಲಕ ನಿಯಂತ್ರಣ ಪಟ್ಟಿಯಲ್ಲಿರುವ ಶಸ್ತ್ರಾಸ್ತ್ರಗಳ ರಫ್ತನ್ನು ನಿಯಂತ್ರಿಸಬೇಕಾಗುತ್ತದೆ ಹಾಗೂ ಪ್ರದೇಶದ ಭದ್ರತೆಗೆ ಅಪಾಯ ಒಡ್ಡುವ ರೀತಿಯಲ್ಲಿ ತಮ್ಮ ಸೇನಾ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ.

ವೆಸ್ಸೆನಾರ್ ಒಪ್ಪಂದದ ಎಲ್ಲ ಸದಸ್ಯದೇಶಗಳು ಆರು ತಿಂಗಳಿಗೊಮ್ಮೆ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಸರಬರಾಜು ಕುರಿಯ ಮಾಹಿತಿಯನ್ನು ಇತರ ದೇಶಗಳ ಜತೆ ಹಂಚಿಕೊಳ್ಳುತ್ತವೆ. ಎಂಟು ವಿಸ್ತøತವಾದ ವಿಭಾಗಗಳ ವರ್ಗಗಳಲ್ಲಿ ಶಸ್ತ್ರಾಸ್ತ್ರಗಳು ಸೇರುತ್ತವೆ. ವರ್ಗದಲ್ಲಿ ಯುದ್ಧ ಟ್ಯಾಂಕ್ಗಳು, ಮಿಲಿಟರಿ ಹೆಲಿಕಾಪ್ಟರ್ಗಳು, ಶಸ್ತ್ರಾಸ್ತ್ರ ಹೊಂದಿದ ಯುದ್ಧವಾಹನಗಳು, ಸೇನಾ ವಿಮಾನಗಳು, ದೊಡ್ಡ ಪ್ರಮಾಣದ ಶಸ್ತ್ರಾಗಾರ, ಯುದ್ಧನೌಕೆ, ಕ್ಷಿಪಣಿ ಅಥವಾ ಕ್ಷಿಪಣಿ ವ್ಯವಸ್ಥೆ ಹಾಗೂ ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಲಘು ಯುದ್ಧೋಪಕರಣಗಳು ಸೇರುತ್ತವೆ.

ವೆಸ್ಸೆನಾರ್ ಒಪ್ಪಂದಕ್ಕೆ ಭಾರತ ಸದಸ್ಯತ್ವ ಪಡೆದಿರುವುದರಿಂದ ದೇಶಕ್ಕೆ ಅತ್ಯುನ್ನತ ತಂತ್ರಜ್ಞಾನ ಸುಲಭವಾಗಿ ಲಭ್ಯವಾಗುವಂತೆ ಮಾಡಬಹುದಾಗಿದೆ. ಇದು ಭಾರತದ ಬಾಹ್ಯಾಕಾಶ ಹಾಗೂ ರಕ್ಷಣಾ ವಲಯದ ಬೇಡಿಕೆಗಳನ್ನು ಪೂರೈಸಲು ಶಕ್ತವಾಗಲಿದೆ. ಇದು ಭಾರತದ ನಿಶ್ಶಸ್ತ್ರೀಕರಣದ ವಿಶ್ವಾಸಾರ್ಹತೆಯನ್ನು ಕೂಡಾ ಹೆಚ್ಚಿಸಲಿದ್ದು, ಎನ್ಪಿಟಿಗೆ ಭಾರತ ಸಹಿ ಮಾಡದಿದ್ದರೂ, ಒಪ್ಪಂದಕ್ಕೆ ಸಹಿ ಮಾಡಿರುವುದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲ ಹೆಚ್ಚಿನ ವಿಶ್ವಾಸಾರ್ಹತೆ ಗಳಿಸಿಕೊಳ್ಳಲಿದೆ.

ವೆಸ್ಸೆನಾರ್ ಒಪ್ಪಂದದ ಸದಸ್ಯತ್ವದಿಂದಾಗಿ ಭಾರತ 48 ಸದಸ್ಯದೇಶಗಳ ಎನ್ಎಸ್ಜಿಗೆ ಪ್ರವೇಶ ಪಡೆಯಲು ಕೂಡಾ ಪೂರಕವಾಗಲಿದೆ. ಇದಲ್ಲದೇ ವಿದ್ಯುತ್ ಕ್ಷಾಮದಿಂದ ಬಳಲುತ್ತಿರುವ ದೇಶಕ್ಕೆ, ಹೆಚ್ಚಿನ ಪ್ರಮಾಣದ ಅಣುವಿದ್ಯುತ್ ಪೂರೈಸಲು ಕೂಡಾ ಇದು ಪೂರಕವಾಗುತ್ತದೆ. ಭಾರತದಲ್ಲಿ ಕಡಿಮೆ ಪ್ರಮಾಣದ ಯುರೇನಿಯಂ ನಿಕ್ಷೇಪ ಇರುವುದರಿಂದ, ನಾಗರಿಕ ಅಣು ವಿದ್ಯುತ್ ಯೋಜನೆಗಳಿಗೆ ಹೆಚ್ಚಿನ ಉತ್ತೇಜನ ನೀಡುವಲ್ಲೂ ಒಪ್ಪಂದ ಮಹತ್ವದ್ದಾಗಲಿದೆ.

ಇದು ಭಾರತದ ಉದ್ದಿಮೆಗಳಿಗೆ ಉನ್ನತ ತಂತ್ರಜ್ಞಾನವನ್ನು ಒದಗಿಸಿಕೊಡಲು ಕೂಡಾ ನೆರವಾಗಲಿದ್ದು, ನಮ್ಮ ಬಾಹ್ಯಾಕಾಶ ಹಾಗೂ ರಕ್ಷಣಾ ಕಾರ್ಯಕ್ರಮಗಳಿಗೆ ಅಗತ್ಯವಾದ ಉನ್ನತ ತಂತ್ರಜ್ಞಾನ ಸುಲಭವಾಗಿ ಲಭ್ಯವಾಗಲಿದೆ. ಇದು ಭಾರತದ ರಫ್ತು ನಿಯಂತ್ರಣ ನೀತಿ ಚೌಕಟ್ಟು ಪುನರ್ ರೂಪಿಸಲು, ಕೆಲವು ಲೈಸನ್ಸಿಂಗ್ ಅರ್ಹತೆಯನ್ನು ಪಡೆಯಲು ಅನುಕೂಲವಾಗಲಿದೆ.

Comment