IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ರೋಟರಿ ಇಂಟರ್ನ್ಯಾಷನಲ್ ಇಂಡಿಯಾ, ದಏಶದಲ್ಲಿ ರಾಷ್ಟ್ರೀಯ ಪೋಲಿಯೊ ಪ್ಲಸ್ ಕಾರ್ಯಕ್ರಮದಡಿ ಸಂಪೂರ್ಣ ಲಸಿಕೆ ನೀಡುವ ಗುರಿ ಸಾಧಿಸುವ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಂಡಿವೆ. ಇದರ ಅನ್ವಯ ಲಸಿಕೆ ಗುರಿ ಸಾಧನೆ ನಿಟ್ಟಿನಲ್ಲಿ ಸಚಿವಾಲಯ ಹಾಗೂ ರೋಟರಿ ಸಂಸ್ಥೆ ತೀವ್ರವಾಗಿ ಶ್ರಮಿಸಲಿವೆ.

ಒಪ್ಪಂದದ ಮುಖ್ಯ ಉದ್ದೇಶವೆಂದರೆ, ಪೋಲಿಯೊ ನಿರ್ಮೂಲನೆ ಯೋಜನೆಯಡಿ ಸಹಭಾಗಿತ್ವದ ಬೆಂಬಲ ನೀಡುವುದು ಹಾಗೂ ನಿಟ್ಟಿನಲ್ಲಿ ಪ್ರಯತ್ನಗಳನ್ನು ಹೆಚ್ಚಿಸುವುದು. ಇದರ ಜತೆಗೆ ಸಾಮಾನ್ಯ ಲಸಿಕೆ ಕಾರ್ಯಕ್ರಮಗಳಾದ ಮಿಷನ್ ಇಂದ್ರಧನುಷ್, ತೀವ್ರ ಇಂದ್ರಧನುಷ್ ಯೋಜನೆಗಳ ಅನುಷ್ಠಾನದಂಥ ಅಂಶಗಳು ಕೂಡಾ ಸೇರಿವೆ.

ಸಹಭಾಗಿತ್ವದ ಪ್ರಮುಖ ಕ್ಷೇತ್ರಗಳು

ಮುಖ್ಯವಾಗಿ ಫಲಾನುಭವಿಗಳ ಸಾಮಾಜಿಕ ಕ್ರೋಢೀಕರಣದಲ್ಲಿ ಸಹಭಾಗಿತ್ವಕ್ಕೆ ಒಪ್ಪಂದ ಒತ್ತು ನೀಡುತ್ತದೆ. ಅದರಲ್ಲೂ ಮುಖ್ಯವಾಗಿ ನಗರದ ಕೊಳಗೇರಿಗಳು ಹಾಗೂ ಕ್ರೋಢೀಕರಣ ಇಲ್ಲದ ಪ್ರದೇಶಗಳು ಸೇರುತ್ತವೆ. ಇದು ಎನ್ಸಿಸಿ ಕ್ಯಾಡೆಟ್ಗಳಿಗೆಕೂಡ ಬೆಂಬಲ ನೀಡಲಿದ್ದು, ರಾಷ್ಟ್ರೀಯ ಸೇವಾ ಯೋಜನೆಯಂಥ ಚಟುವಟಿಕೆಗಳನ್ನೂ ಪ್ರೋತ್ಸಾಹಿಸಲಿದೆ. ಸಮುದಾಯ ಕ್ರೋಢೀಕರಣವನ್ನು ಉತ್ತೇಜಕಗಳ ಮೂಲಕ ಮಾಡುವ ಗುರಿಯನ್ನು ಇದು ಹೊಂದಿದೆ.

ಇದು ಪೋಲಿಯೊ ನಿರ್ಮೂಲನೆ ಯೋಜನೆಯಲ್ಲಿ ವಿನೂತನ ದೃಷ್ಟಿಕೋನವನ್ನು ಅಳವಡಿಸಿಕೊಂಡು ಜನಜಾಗೃತಿ ಮೂಡಿಸುವಲ್ಲಿ ಮತ್ತು ಆಂದೋಲನವನ್ನು ರೂಪಿಸುವಲ್ಲಿ, ಖಾಸಗಿ ಪಾಲುದಾರಿಕೆಯನ್ನು ಮತ್ತು ಸ್ಥಳೀಯ ಮುಖಂಡರ ನೆರವನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದರ ಜತೆಗೆ ಸಾಮಾನ್ಯ ಲಸಿಕಾ ಕಾರ್ಯಕ್ರಮಗಳಾದ ಮಿಷನ್ ಇಂದ್ರಧನುಷ್, ತೀವ್ರತರ ಇಂದ್ರಧನುಷ್ ಯೋಜನೆ ಹಾಗೂ ದಡಾರ ಹಾಗೂ ರುಬೆಲ್ಲಾ ವಿರುದ್ಧದ ಲಸಿಕೆಗಳು ಸೇರಿವೆ.

ಸಹಭಾಗಿತ್ವದ ಯೋಜನೆಯು ಪೋಲಿಯೊ ನಿರ್ಮೂಲನೆಯಲ್ಲಿ ರಾಜ್ಯದ ಪ್ರಯತ್ನಗಳನ್ನು ಬೆಂಬಲಿಸಲಿದ್ದು, ಸಾರ್ವಜನಿಕ ಕ್ರೋಢೀಕರಣಕ್ಕೆ ಒತ್ತು ನೀಡುತ್ತದೆ. ಇದರ ಜತೆಗೆ ಸಾಮಾನ್ಯ ಲಸಿಕಾ ಕಾರ್ಯಕ್ರಮಗಳಾದ ಮಿಷನ್ ಇಂದ್ರಧನುಷ್, ತೀವ್ರತರ ಇಂದ್ರಧನುಷ್ ಯೋಜನೆ ಹಾಗೂ ದಡಾರ ಹಾಗೂ ರುಬೆಲ್ಲಾ ವಿರುದ್ಧದ ಲಸಿಕೆಗಳು ಕೂಡಾ ಸೇರುತ್ತವೆ.

ರೋಟರಿ ಇಂಟರ್ನ್ಯಾಷನಲ್ ಇಂಡಿಯಾ ನ್ಯಾಷನಲ್ ಪೋಲಿಯೊ ಪ್ಲಸ್ ಸಮಿತಿ

ರೋಟರಿ ಇಂಟರ್ನ್ಯಾಷನಲ್ ಇಂಡಿಯಾ ನ್ಯಾಷನಲ್ ಪೋಲಿಯೊ ಪ್ಲಸ್ ಸಮಿತಿಯನ್ನು 1988ರಲ್ಲಿ ರಚಿಸಲಾಗಿದೆ. ಇದನ್ನು ದೇಶದಲ್ಲಿ ಪೋಲಿಯೊ ನಿರ್ಮೂಲನೆ ಉದ್ದೇಶದಿಂದ ರಚಿಸಲಾಗಿದೆ. ಇದರ ಕೇಂದ್ರ ಕಚೇರಿ ದೆಹಲಿಯಲ್ಲಿದೆ. ಇದು ದೊಡ್ಡ ಸಂಖ್ಯೆಯ ಬದ್ಧತೆ ಇರುವ ರೋಟರಿ ಸ್ವಯಂಸೇವಕರನ್ನು ಹೊಂದಿದ ತಂಡವನ್ನು ರಚಿಸಿದ್ದು, ಇವರು ಲಸಿಕೆ ವಿತರಣೆ, ಶಿಶುಗಳು ಹಾಗೂ ಮಕ್ಕಳಿಗೆ ಇವುಗಳ ಲಭ್ಯತೆ, ಸಾಮಾಜಿಕ ಕ್ರೋಢೀಕರಣದಂಥ ವಿಷಯಗಳಲ್ಲಿ ಇದು ಸರ್ಕಾರಕ್ಕೆ ನೆರವಾಗುತ್ತದೆ. ಇದು ಭಾರತ ಸರ್ಕಾರದ ಜತೆ ನಿಕಟವಾಗಿ ಕೈಜೋಡಿಸಿ ಕಾರ್ಯ ನಿರ್ವಹಿಸುತ್ತದೆ. ಜತೆಗೆ ವಿಶ್ವ ಆರೋಗ್ಯ ಸಂಸ್ಥೆ, ವಿಶ್ವಸಂಸ್ಥೆಯ ಮಕ್ಕಳ ನಿಧಿ ಮತ್ತು ಇತರ ಸಂಘ ಸಂಸ್ಥೆಗಳನ್ನೂ ಜತೆಗೂಡಿಸಿಕೊಂಡಿದೆ. ಇದರಲ್ಲಿ ಮುಖ್ಯವಾಗಿ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ ಸೇರಿದೆ.

Comment