IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಟೈಮ್ಸ್ ವರ್ಷದ ವ್ಯಕ್ತಿಯಾಗಿ "ಸೈಲೆನ್ಸ್ ಬ್ರೇಕರ್ಸ್"

ಟೈಮ್ಸ್ ವರ್ಷದ ವ್ಯಕ್ತಿಯಾಗಿ

ದ ಸೈಲೆನ್ಸ್ ಬ್ರೇಕರ್ಸ್ ನಿಯತಕಾಲಿಕವನ್ನು 2017ನೇ ಸಾಲಿನ ಟೈಮ್ಸ್ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದು ಪ್ರಸಕ್ತ ವರ್ಷದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಬಗೆಗಳನ್ನು ಬಹಿರಂಗಗೊಳಿಸುವ, ಬಹುತೇಕ ಮಹಿಳೆಯನ್ನೇ ಒಳಗೊಂಡಿರುವ ಗುಂಪಾಗಿರುತ್ತದೆ, ಅಮೆರಿಕದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಗಳು ಎಸಗಿರುವ ಲೈಂಗಿಕ ದೌರ್ಜನ್ಯದ ಸ್ವರೂಪವನ್ನು ಇದು ಬಹಿರಂಗಗೊಳಿಸಿದೆ.

ಟೈಮ್ಸ್ ಗುರುತಿಸಿದ ವ್ಯಕ್ತಿಗಳಲ್ಲಿ ಮುಖ್ಯವಾಗಿ ಖ್ಯಾತ ನಟಿಯರು ಸೇರಿದ್ದಾರೆ. ಬಾಲಿವುಡ್ ನಟಿ ಮೊಗುಲ್ ಹಾರ್ವೆ, ಹಾಲಿವುಡ್‍ನಲ್ಲಿ ಸಾಮಾನ್ಯ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಶೋಷಣೆಯ ವಿರುದ್ಧ ಧ್ವನಿ ಎತ್ತಿ ಅವರ ಕಥೆಗಳನ್ನು #ಮೀ ಟೂ ಹೆಸರಿನಲ್ಲಿ ಪ್ರಚುರಪಡಿಸಿದ್ದರು. ಟೈಮ್ ನಿಯತಕಾಲಿಕ ಗುರುತಿಸಿದ ವ್ಯಕ್ತಿಗಳ ಪೈಕಿ ಆಸ್ಲೆ ಜುಡ್ ಸೇರಿದ್ದು, ಇವರು ವೈನ್‍ಸ್ಟೀನ್ ವಿರುದ್ಧ ದೂರು ನೀಡಿದವರು.

ಟೈಮ್ ನಿಯತಕಾಲಿಕದ ವರ್ಷದ ವ್ಯಕ್ತಿ

ಟೈಮ್ ನಿಯತಕಾಲಿಕ ನೀಡುವ ವರ್ಷದ ವ್ಯಕ್ತಿ ಪ್ರಶಸ್ತಿಯು, ವಾರ್ಷಿಕವಾಗಿ ನೀಡುವ ಪ್ರಶಸ್ತಿಯಾಗಿದ್ದು, ಇದನ್ನು 1927ರಲ್ಲಿ ಆರಂಭಿಸಲಾಗಿದೆ. ಇದನ್ನು ಪ್ರತಿ ವರ್ಷದ ಡಿಸೆಂಬರ್‍ನಲ್ಲಿ ಘೋಷಿಸಲಾಗುತ್ತದೆ. ಆ ವರ್ಷದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಸುದ್ದಿಯ ಮೇಲೆ ಪರಿಣಾಮ ಬೀರಿದ ವ್ಯಕ್ತಿಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಒಳ್ಳೆಯ ಅಥವಾ ಕೆಟ್ಟ ಕಾರಣಕ್ಕೆ ಪ್ರಚಾರವಾಗುವ ವ್ಯಕ್ತಿಗಳು ಕೂಡಾ ಈ ಪ್ರಶಸ್ತಿಗೆ ಪರಿಗಣಿಸಲ್ಪಡುತ್ತಾರೆ.

Comment