IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಕುಂಭಮೇಳಕ್ಕೆ ಯುನೆಸ್ಕೊ ಗೌರವ

ಕುಂಭಮೇಳಕ್ಕೆ ಯುನೆಸ್ಕೊ ಗೌರವ

ಯುನೆಸ್ಕೊದ ಅದೃಶ್ಯ ಸಾಂಸ್ಕøತಿಕ ಪರಂಪರೆಯನ್ನು ಸಂರಕ್ಷಿಸುವ ಸಲುವಾಗಿ ಇರುವ ಅಂತರರಾಷ್ಟ್ರೀಯ ಸಮಿತಿ ಕುಂಭಮೇಳವನ್ನು ಯುನೆಸ್ಕೊ ಮಾನವತೆಯ ಅದೃಶ್ಯ ಪರಂಪರೆಯ ಸಾಂಸ್ಕøತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿಗೆ ಸೇರಿಸಿ ಆದೇಶ ನೀಡಿದೆ.

ಪಟ್ಟಿಯಲ್ಲಿ ಕುಂಭಮೇಳವನ್ನು ಸೇರಿಸುವ ನಿರ್ಧಾರವನ್ನು ತಜ್ಞರ ಸಮಿತಿಯ ಶಿಫಾರಸ್ಸಿನ ಮೇರೆಗೆ ಕೈಗೊಳ್ಳಲಾಗಿದೆ. ಯುನೆಸ್ಕೊ ಸದಸ್ಯರಾಷ್ಟ್ರಗಳು ಸಲ್ಲಿಸಿದ ನಾಮನಿರ್ದೇಶನಗಳನ್ನು ಸಮಿತಿ ಯನ್ನ 12ನೇ ಅಧಿವೇಶನದಲ್ಲಿ ಪರಿಶೀಲಿಸಿ ನಿರ್ಧಾರ ಕೈಗೊಂಡಿದೆ. ದಕ್ಷಿಣ ಕೊರಿಯಾದ ಜೆಜು ನಗರದಲ್ಲಿ ಅಧಿವೇಶನ ನಡೆಯಿತು. ಕುಂಭಮೇಳವು ಯುನೆಸ್ಕೊ ಪಟ್ಟಿಗೆ ಸೇರಿದ ಭಾರತದ 14ನೇ ಅದೃಶ್ಯ ಸಾಂಸ್ಕøತಿಕ ಪರಂಪರೆಯ ಉತ್ಸವವವಾಗಿದೆ.

ಕುಂಭಮೇಳ

ಕುಂಭ ಮೇಳ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಾಲ್ಕು ವಿಭಿನ್ನ ಕಡೆಗಳಲ್ಲಿ ನಡೆಯುತ್ತದೆ. ಉತ್ತರ ಹಾಗೂ ಕೇಂದ್ರ ಭಾರತದಲ್ಲಿ ಇದು ನಡೆಯುತ್ತದೆ. ಇದು ಅತಿದೊಡ್ಡ ಧಾರ್ಮಿಕ ಸಮಾವೇಶವಾಗಿದ್ದು, ವಿಶ್ವದಲ್ಲೇ'ಅತಿದೊಡ್ಡ ಶಾಂತಿಯುತ ಸಮಾವೇಶವಾಗಿರುತ್ತದೆ. ಅದ್ಭುತ ಉತ್ಸವವು ಲಕ್ಷಾಂತರ ಮಂದಿ ಹಿಂದೂ ತೀರ್ಥಯಾತ್ರಾಸಕ್ತರನ್ನು ಆಕರ್ಷಿಸುತ್ತದೆ. ಇದರಲ್ಲಿ ಮುಖ್ಯವಾಗಿ ನಾಗಾ ಸಾಧುಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ.

ಕುಂಭಮೇಳ ಕುರಿತ ಪ್ರಥಮ ಲಿಖಿತ ದಾಖಲೆಯು ಭಾಗವತ ಪುರಾಣದಲ್ಲಿ ಸಿಗುತ್ತದೆ. ಕುಂಭಮೇಳ ಕುರಿತ ಇನ್ನೊಂದು ಲಿಖಿತ ಉಲ್ಲೇಖವು ಚೀನಿ ಯಾತ್ರಿಕ ಹ್ಯೂ ಯೆನ್ ತ್ಸಾಂಗ್ ಕೃತಿಯಲ್ಲಿ ಸಿಗುತ್ತದೆ. ಈತ ಕ್ರಿಸ್ತಶಕ 629- 645 ಅವಧಿಯಲ್ಲಿ ಹರ್ಷನ ಆಡಳಿತಾವಧಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದ. ಸಮುದ್ರಮಥನದ ಘಟನೆಯ£ಲ್ಲೂ ಕುಂಭ ಮೇಳವನ್ನು ಉಲ್ಲೇಖಿಸಲಾಗಿದ್ದು, ಭಾಗವತಪುರಾಣ, ವಿಷ್ಣುಪುರಾಣ, ಮಹಾಭಾರತ ಮತ್ತು ರಾಮಾಯಣದಲ್ಲಿ ಕೂಡಾ ಕುಂಭ ಮೇಳದ ಉಲ್ಲೇಖವಿದೆ.

ಕೇಂದ್ರ ಹಾಗೂ ಉತ್ತರ ಭಾರತದ ನಾಲ್ಕು ಸ್ಥಳಗಳಲ್ಲಿ ಕುಂಭ ಮೇಳ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಅಂದರೆ ಪರ್ಯಾಯವಾಗಿ ಮೂರು ವರ್ಷಗಳಿಗೊಮ್ಮೆ ಕುಂಭಮೇಳ ಭಾರತದಲ್ಲಿ ನಡೆಯುತ್ತದೆ. ಹರಿದ್ವಾರ, ಅಲಹಾಬಾದ್, ನಾಸಿಕ್ ಮತ್ತು ಉಜ್ಜಯಿನಿ ಕುಂಭಮೇಳ ನಡೆಯುವ ಸ್ಳಗಳು. ಅಂದರೆ ಪ್ರತಿ ಸ್ಥಳಗಳಲ್ಲಿ 12 ವರ್ಷಗಳಿಗೊಮ್ಮೆ ಉತ್ಸವ ನಡೆಯುತ್ತದೆ. ಇದರ ಭಾಗಶಃ ರೂಪವಾದ ಅರ್ಧ ಕುಂಭ ಮೇಳ ಹರಿದ್ವಾರ ಹಾಗೂ ಅಲಹಾಬಾದ್ನಲ್ಲಿ ನಡೆಯುತ್ತದೆ.

ನಾಲ್ಕು ಸ್ಥಳಗಳ ನದಿಗಳೆಂದರೆ ಹರಿದ್ವಾರದಲ್ಲಿ ಗಂಗಾ, ಅಲಹಾಬಾದ್ನಲ್ಲಿ ಪ್ರಯಾಗ್ ಸಂಗಮ, ನಾಸಿಕ್ನಲ್ಲಿ ಗೋದಾವರಿ ಹಾಗೂ ಉಜ್ಜಯಿನಿಯಲ್ಲಿ ಶಿಪ್ರಾ. ಅತಿದೊಡ್ಡ ಉತ್ಸವವು ಮೌನಿ ಅಮಾವಾಸ್ಯೆಯಂದು ನಡೆಯುತ್ತದೆ.

ಅದೃಶ್ಯ ಸಾಂಸ್ಕøತಿಕ ಪರಂಪರೆಯ ಪಟ್ಟಿ

ಯುನೆಸ್ಕೊದ ಅದೃಶ್ಯ ಸಾಂಸ್ಕøತಿಕ ಪರಂಪರೆಯ ಪಟ್ಟಿಯನ್ನು ಅದೃಶ್ಯ ಸಾಂಸ್ಕøತಿಕ ಅಂಶವನ್ನು ಪರಿಗಣಿಸಿ ಸಿದ್ಧಪಡಿಸಲಾಗುತ್ತದೆ. ಸಾಂಸ್ಕøತಿಕ ಪರಂಪರೆಯ ವೈವಿಧ್ಯತೆ ಹಾಗು ಅದು ಮೂಡಿಸುವ ಜಾಗೃತಿಯ ಆಧಾರದಲ್ಲಿ ಅದರ ಮಹತ್ವವನ್ನು ನಿರ್ಧರಿಸಲಾಗುತ್ತದೆ. ಪಟ್ಟಿಯನ್ನು 2008ರಲ್ಲಿ ಆರಂಭಿಸಲಾಗಿದ್ದು, ಅದೃಶ್ಯ ಸಂಸ್ಕøತಿಯ ಪರಂಪರೆಯನ್ನು ಸಂರಕ್ಷಿಸುವ ಒಪ್ಪಂದ ಜಾರಿಗೆ ಬಂದ ಬಳಿಕ ಇದು ಜಾತಿಗೆ ಬಂದಿದೆ. ಇದರಲ್ಲಿ ವಿಶ್ವಾದ್ಯಂತ ಪ್ರಮುಖವಾದ ಸಾಂಸ್ಕøತಿಕ ಪರಂಪರೆಗಳು ಸ್ಥಾನ ಪಡೆಯುತ್ತವೆ. ಇದರಲ್ಲಿ ಮುಖ್ಯವಾಗಿ ಎರಡು ಭಾಗಗಳಿವೆ. ಮಾನವತೆಯ ಅದೃಶ್ಯ ಸಾಂಸ್ಕøತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿ ಮತ್ತು ತುರ್ತಾಗಿ ಸಂರಕ್ಷಿಸಬೇಕಾದ ಅದೃಶ್ಯ ಸಾಂಸ್ಕøತಿಕ ಪರಂಪರೆ ಪಟ್ಟಿ.

ಭಾರತದಿಂದ ಪಟ್ಟಿಗೆ ಸೇರಿರುವ ಮಾನವತೆಯ ಅದೃಶ್ಯ ಸಾಂಸ್ಕøತಿಕ ಪರಂಪರೆಗಳು

 • ಕೂಡಿಯಟ್ಟಂ: ಇದು ಕೇರಳದ ಸಾಂಪ್ರದಾಯಿಕ ಸಂಸ್ಕø ರಂಗಕಲೆ.
 • ಮುಡಿಯೆಟ್: ಇದು ಕೇರಳ ಸಾಂಪ್ರದಾತಿಕ ರಂಗಕಲೆ
 • ಸಾಂಪ್ರದಾಯಿಕ ವೇದಪಠಣ ಪರಂಪರೆ
 • ಕಲ್ಬೇಲಿಯಾ: ರಾಜಸ್ಥಾನದ ಜಾನಪದ ಹಾಡು ಹಾಗೂ ನೃತ್ಯ
 • ರಾಮಲೀಲಾ: ರಾಮಾಯಣದ ಸಾಂಪ್ರದಾಯಿಕ ಪ್ರದರ್ಶನ
 • ಸಂಕೀರ್ತನೆ: ಮಣಿಪುರದ ಹಾಡು, ಡ್ರಮ್ ಮತ್ತು ನೃತ್ಯ ಸಂಪ್ರದಾಯ.
 • ರಾಮಮನ: ಹಿಮಾಲಯದ ಗರ್ವಾಲ್ ಪ್ರದೇಶದ ಧಾರ್ಮಿಕ ಹಬ್ಬ ಮತ್ತು ಸಾಂಪ್ರದಾಯಿಕ ರಂಗಕಲೆ.
 • ಸಾಂಪ್ರದಾಐಇಕ ತಾಮ್ರ ಮತ್ತು ಹಿತ್ತಾಳೆ ಪಾತ್ರೆ ಮತ್ತು ಪಗಡೆಗಳ ಕಲೆ: ಪಂಜಾಬ್ ಕಲೆ.
 • ಚಾವು ನೃತ್ಯ: ಭಾರತದ ಪೂರ್ವಭಾಗದ ರಾಜ್ಯಗಳಲ್ಲಿ ಹುಟ್ಟಿದ ಶಾಸ್ತ್ರೀಯ ಭಾರತೀಯ ನೃತ್ಯ.
 • ಲಡಾಕ್ ಬೌದ್ಧ ಪಠಣ: ಬುದ್ಧನ ಬೋಧನೆಗಳ ಸಾಂಪ್ರದಾಯಿಕ ಪಠಣ. ಇದು ಜಮ್ಮು ಮತ್ತು ಕಾಶ್ಮೀರದ ಲಡಾಖ್ ಪ್ರದೇಶದಲ್ಲಿ ನಡೆಯುತ್ತದೆ.
 • ಯೋಗ

Comment