Universal School Of Administration Integrated Degree college Admission Open for more details contact: 9686664985

ಕಥಾಕಾರ್ ಎಂಬ ಕಥೆ ಹೇಳುವ ಹಬ್ಬ

ಕಥಾಕಾರ್ ಎಂಬ ಕಥೆ ಹೇಳುವ ಹಬ್ಬ

ಏಳನೇ ವರ್ಷದ ಅಂತರರಾಷ್ಟ್ರೀಯ ಕಥನ ಹಬ್ಬ 'ಕಥಾಕಾರ್', ನವದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದಲ್ಲಿ ನಡೆಯಿತು. ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಉತ್ಸವವನ್ನು ಉದ್ಘಾಟಿಸಿದರು.

ಮೂರು ದಿನಗಳ ಬಾರಿಯ ಉತ್ಸವದ ಪಾಲುದಾರರೆಂದರೆ, ಸಂಸ್ಕøತಿ ಸಚಿವಾಲಯದ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ, ಗುರಗಾಂವ್ ಹೆರಿಟೇಜ್ ಟ್ರಾನ್ಸ್ಪೋರ್ಟ್ ಮ್ಯೂಸಿಯಂ ಹಾಗೂ ಪ್ರದರ್ಶಕ ಕಲೆಗಳ ರಾಷ್ಟ್ರೀಯ ಕೇಂದ್ರ.

ಕಥಾಕಾರ್

ಕಥಾಕಾರ್ ಎನ್ನುವುದು ವಿಶಿಷ್ಟ ಯೋಜನೆಯಾಗಿದ್ದು, ವಿಶ್ವಾದ್ಯಂತ ಬೆಳೆದುಬಂದಿರುವ ಮೌಖಿಕವಾಗಿ ಕಥೆ ಹೇಳುವ ಸಂಪ್ರದಾಯವನ್ನು ಉಳಿಸಿಕೊಂಡು ಹೋಗುವುದು ಇದರ ಉದ್ದೇಶ. ಇದು ಭಾರತದಲ್ಲಿ ನಡೆಯುವ ಏಕೈಕ ಕಥೆ ಹೇಳುವ ಸ್ಪರ್ಧೆಯಾಗಿದೆ. ಗುಮ್ಮಖಡ್ ನಾರಾಯಣ್ ಪ್ರವಾಸಿ ಸಾಹಿತ್ಯ ಉತ್ಸವದ ಭಾಗವಾಗಿರುವ ಉತ್ಸವ, ಯುನೆಸ್ಕೊ ಆಶ್ರಯದಲ್ಲಿ 2010ರಲ್ಲಿ ಆರಂಭವಾಗಿದೆ. ಇದು ಕಲಾಪ್ರಕಾರವನ್ನು ಉಳಿಸುವ ಹಾಗೂ ಹೊಸ ಪ್ರೇಕ್ಷಕರನ್ನು ಸೃಷ್ಟಿಸುವ ಗುರಿ ಹೊಂದಿದೆ.

Comment