Universal School Of Administration Integrated Degree college Admission Open for more details contact: 9686664985

ರಾಷ್ಟ್ರೀಯ ಪೌಷ್ಟಿಕ ಮಿಷನ್ ಆರಂಭಕ್ಕೆ ಸಂಪುಟ ಅಸ್ತು

ರಾಷ್ಟ್ರೀಯ ಪೌಷ್ಟಿಕ ಮಿಷನ್ ಆರಂಭಕ್ಕೆ ಸಂಪುಟ ಅಸ್ತು

ರಾಷ್ಟ್ರೀಯ ಪೌಷ್ಟಿಕ ಮಿಷನ್ ಆರಂಭಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನಿಡಿದೆ. 2017-18ನೇ ಸಾಲಿನಿಂದ ಇದು ಜಾರಿಗೆ ಬರಲಿದ್ದು, ಮೂರು ವರ್ಷಕ್ಕೆ 9046.17 ಕೋಟಿ ರೂಪಾಯಿಗಳ ಅನುದಾನ ನಿಗದಿಪಡಿಸಲಾಗಿದೆ.

ರಾಷ್ಟ್ರೀಯ ಪೌಷ್ಟಿಕ ಮಿಷನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯ ನಿರ್ವಹಿಸುವ ಅತ್ಯುನ್ನತ ಸಂಸ್ಥೆಯಾಗಿದ್ದು, ಪೌಷ್ಟಿಕಾಂಶಗಳ ಅಗತ್ಯತೆ ಬಗ್ಗೆ ಎಲ್ಲ ಸಚಿವಾಲಯಗಳ ಹಸ್ತಕ್ಷೇಪಕ್ಕೆ, ನಿಗಾ ಇಡುವ, ಮೇಲ್ವಿಚಾರಣೆ ನಡೆಸುವ, ಗುರಿಗಳನ್ನು ನಿರ್ದೇಶಿಸುವ ಮತ್ತು ಮಾರ್ಗದರ್ಶನ ನೀಡುವ ಕಾರ್ಯವನ್ನು ಇದು ನಿರ್ವಹಿಸುತ್ತದೆ. ಅಪೌಷ್ಟಿಕತೆಯನ್ನು ನಿವಾರಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳ ಮೇಲ್ವಿಚಾರಣೆಯನ್ನೂ ರಾಷ್ಟ್ರೀಯ ಪೌಷ್ಟಿಕ ಮಿಷನ್ ನಡೆಸಲಿದೆ.

ಆರು ವರ್ಷಕ್ಕಿಂತ ಕೆಳಗಿನ ಮಕ್ಕಳ, ಗರ್ಭಿಣಿಯರ ಹಾಗೂ ಹಾಲುಣಿಸುವ ತಾಯಂದಿರ ಪೌಷ್ಟಿಕ ಸ್ಥಿತಿ ಮೇಲೆ ನೇರವಾಗಿ ಹಾಗೂ ಪರೋಕ್ಷವಾಗಿ ಪರಿಣಾಮ ಬೀರುವ ಹಲವು ಯೋಜನೆಗಳಿವೆ. ಇವುಗಳ ಹೊರತಾಗಿಯೂ, ದೇಶದಲ್ಲಿ ಅಪೌಷ್ಟಿಕತೆ ಮತ್ತು ಸಂಬಂಧಿತ ಸಮಸ್ಯೆಗಳು ಅತ್ಯಧಿಕವಾಗಿವೆ. ಸಾಕಷ್ಟು ಯೋಜನೆಗಳಿದ್ದರೂ, ಅವುಗಳ ನಡುವೆ ಸಂಪರ್ಕ ಕಲ್ಪಿಸುವ ಹಾಗೂ ಯೋಜನೆಗಳನ್ನು ಸಮನ್ವಯಗೊಳಿಸುವ ವ್ಯವಸ್ಥೆಯ ಕೊರತೆ ಇದಕ್ಕೆ ಮುಖ್ಯ ಕಾರಣ. ಸಾಮಾನ್ಯ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಪೌಷ್ಟಿಕ ಮಿಷನ್ ಇವೆಲ್ಲವನ್ನೂ ಸಮನ್ವಯಗೊಳಿಸುವ ಹಾಗೂ ಪೂರಕ ವಾತಾವರಣವನ್ನು ಸೃಷ್ಟಿಸುವ ಕಾರ್ಯವನ್ನು ಮಾಡುತ್ತದೆ.

ರಾಷ್ಟ್ರೀಯ ಪೌಷ್ಟಿಕ ಮಿಷನ್ ಕಾರ್ಯಗಳು

ಯೋಜನೆಗಳ ನಡುವೆ ಸಮನ್ವಯದ ದೃಷ್ಟಿಯಿಂದ ಐಸಿಟಿ ಆಧರಿತ ಮೇಲ್ವಿಚಾರಣೆ ವ್ಯವಸ್ಥೆಯನ್ನು ಇದು ಜಾರಿಗೆ ತರಲಿದೆ. ಇದು ಗುರಿಗಳನ್ನು ತಲುಪುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಉತ್ತೇಜಕಗಳನ್ನು ನೀಡಲಿದೆ. ಇದರ ಜತೆಗೆ ಮಾಹಿತಿ ತಂತ್ರಜ್ಞಾನ ಆಧರಿತ ಸಾಧನಗಳ ಬಳಕೆಗಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕೂಡಾ ಪ್ರೋತ್ಸಾಹಕಗಳನ್ನು ನೀಡಲಿದೆ. ಇಂಥ ಅಂಗನವಾಡಿ ಕಾರ್ಯಕರ್ತರು ಬಳಸುವ ದಾಖಲೆಗಳನ್ನು ಇದು ಕಿತ್ತುಹಾಕಲಿದೆ.

ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಎತ್ತರವನ್ನು ಅಳೆಯುವ ವ್ಯವಸ್ಥೆಯನ್ನು ಆರಂಭಿಸಲಿದೆ. ಇದು ಸಾಮಾಜಿಕ ಪರಿಶೋಧನೆ ನಿಟ್ಟಿನಲ್ಲಿ ಮಹತ್ವದ ಸಾಧನವಾಗಲಿದೆ. ಇದು ಪೌಷ್ಟಿಕ ಸಂಪನ್ಮೂಲ ಕೇಂದ್ರಗಳನ್ನೂ ಆರಂಭಿಸಲಿದ್ದು, ಜನಾಂದೋಲದ ಮೂಲಕ ಜನಸಮುದಾಯವನ್ನು ತೊಡಗಿಸಕೊಳ್ಳುವಲ್ಲಿ ಮತ್ತು ವೈವಿಧ್ಯಮಯ ಚಟುವಟಿಕೆಗಳ ಮೂಲಕ ಅವರನ್ನು ಪೌಷ್ಟಿಕಾಂಶದ ಆಂದೋಲನದಲ್ಲಿ ತೊಡಗಿಸಿಕೊಳ್ಳುವ ಕಾರ್ಯಯೋಜನೆಯನ್ನೂ ಹೊಂದಿದೆ.

ಅನುಷ್ಠಾನ ತಂತ್ರ ಹಾಗೂ ಗುರಿ

ಇದನ್ನು 2017-18ರಿಂದ 2019-20ರವರೆಗೆ ಮೂರು ಹಂತದಲ್ಲಿ ಜಾರಿಗೆ ತರಲಾಗುತ್ತದೆ. ಇದು ಕುಬ್ಜತೆ, ಅಪೌಷ್ಟಿಕತೆ, ರಕ್ತಹೀನತೆಯನ್ನು ಮಕ್ಕಳಲ್ಲಿ, ಮಹಿಳೆಯರಲ್ಲಿ, ಪ್ರೌಢವಯಸ್ಕ ಹೆಣ್ಣುಮಕ್ಕಳಲ್ಲಿ ಮತ್ತು ಕಡಿಮೆ ತೂಕದ ಸಮಸ್ಯೆಯನ್ನು ಪ್ರತಿವರ್ಷ ಕ್ರಮವಾಗಿ ಶೇಕಡ 2, 2, 3 ಮತ್ತು 2ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಇದರ ಅನುಷ್ಠಾನ ತಂತ್ರವು ತೀವ್ರ ಮೇಲ್ವಿಚಾರಣೆ ಮತ್ತು ಕ್ರಿಯಾಯೋಜನೆಯ ಸಮನ್ವಯಗೊಳಿಸುವಿಕೆಯ ಆಧಾರದಲ್ಲಿದ್ದು, ತಳಹಂತದವರೆಗೂ ಇರುತ್ತದೆ. ರಾಷ್ಟ್ರೀಯ ಪೌಷ್ಟಿಕ ಮಿಷನ್ ಮೂಲಕ ಕುಬ್ಜತೆಯನ್ನು ವಾರ್ಷಿಕ ಶೇಕಡ 2ರಷ್ಟು ಕಡಿಮೆಗೊಳಿಸುವ ಗುರಿ ನಿಗದಿಪಡಿಸಲಾಗುತ್ತದೆ. ಆದರೆ ದೇಶದಲ್ಲಿ ಹಾಲಿ ಇರುವ ಕುಬ್ಜತೆ ಪ್ರಮಾಣವನ್ನು ಶೇಕಡ 38.4ರಿಂದ 2022 ಒಳಗಾಗಿ ಶೇಕಡ 25ಕ್ಕೆ ಇಳಿಸುವ ಗುರಿ ಹಾಕಿಕೊಳ್ಳಲಾಗಿದೆ.

ಪ್ರಮುಖ ಪರಿಣಾಮ

ರಾಷ್ಟ್ರೀಯ ಪೌಷ್ಟಿಕ ಮಿಷನ್, ರಕ್ತಹೀನತೆ, ಕುಬ್ಜತೆ, ಅಪೌಷ್ಟಿಕತೆ ಮತ್ತು ಕಡಿಮೆ ತೂಕದ ಮಕ್ಕಳ ಜನನದ ಸಮಸ್ಯೆಯನ್ನು ಕಡಿಮೆ ಮಾಡಲು ಗುರಿ ನಿಗದಿಪಡಿಸುತ್ತದೆ. ಇದರ ಜತೆಗೆ ಇದು ಗುರಿಗಳನ್ನು ಸಕಾಲಿಕವಾಗಿ ತಲುಪುವ ನಿಟ್ಟಿನಲ್ಲಿ ಸಕಾಲಿಕ ಕ್ರಮ, ಉತ್ತಮ ಮೇಲ್ವಿಚಾರಣೆ ವ್ಯವಸ್ಥೆಯನ್ನೂ ಜಾರಿಗೆ ತರಲಿದೆ. ಮೂಲಕ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಉತ್ತೇಜನ ನೀಡುವುದು, ಎಲ್ಲ ಸಚಿವಾಲಯಗಳು, ರಾಜ್ಯ ಸರ್ಕಾರಗಳು ಗುರಿಗಳನ್ನು ತಲುಪುವಂತೆ ಮೇಲ್ವಿಚಾರಣೆ ಮಾಡುವುದು ಇದರ ಮುಖ್ಯ ಕೆಲಸವಾಗಿರುತ್ತದೆ.

ಫಲಾನುಭವಿಗಳು

ಎಲ್ಲ ರಾಜ್ಯ ಹಾಗೂ ಜಿಲ್ಲೆಗಳನ್ನು ಹಂತಹಂತವಾಗಿ ಯೋಜನೆ ತಲುಪಲಿದೆ. 2018-18ರಲ್ಲಿ 315 ಜಿಲ್ಲೆಗಳಲ್ಲಿ, 2018019ರಲ್ಲಿ 235 ಜಿಲ್ಲೆಗಳಲ್ಲಿ ಹಾಗೂ 2019-20ರಲ್ಲಿ ಎಲ್ಲ ಉಳಿದ ಜಿಲ್ಲೆಗಳಲ್ಲಿ ಯೋಜನೆ ಅನುಷ್ಟಾನವಾಗಲಿದೆ. ಯೋಜನೆಯಿಂದ ಸುಮಾರು 10 ಕೋಟಿಗೂ ಅಧಿಕ ಮಂದಿ ಪ್ರಯೋಜನ ಪಡೆಯುವ ನಿರೀಕ್ಷೆ ಇದೆ.

ಹಣಕಾಸು ನೆರವು

ರಾಷ್ಟ್ರೀಯ ಪೌಷ್ಟಿಕ ಮಿಷನ್ ಒಟ್ಟು 9046.17 ಕೋಟಿ ರೂಪಾಯಿಗಳ ಒಟ್ಟು ಅನುದಾನವನ್ನು ಹೊಂದಿದ್ದು, 2017-18ರಿಂದ ಮೂರು ವರ್ಷಗಳಲ್ಲಿ ಇದು ಜಾರಿಯಾಗಲಿದೆ. ಇದಕ್ಕೆ ಶೇಕಡ 50ರಷ್ಟು ಸರ್ಕಾರಿ ಬಜೆಟ್ ಅನುದಾನ ದೊರೆಯಲಿದ್ದು, ಉಳಿದ ಶೇಕಡ 50ನ್ನು ಇಂಟರ್ನ್ಯಾಷನಲ್ ಬ್ಯಾಂಕ್ ಫಾರ್ ರಿಕನ್ಸ್ಟ್ರಕ್ಷನ್ ಅಂಡ್ ಡೆವಲಪ್ಮೆಂಟ್ ಅಥವಾ ಎಂಡಿಬಿ ಭರಿಸಲಿದೆ. ಸರ್ಕಾರಿ ಅನುದಾನದಲ್ಲಿ ಕೇಂದ್ರ ಹಾಗೂ ರಾಜ್ಯದ ಪಾಲು ಶೇಕಡ

60: 40 ಅನುಪಾತದಲ್ಲಿರುತ್ತದೆ. ಈಶಾನ್ಯ ರಾಜ್ಯಗಳಿಗೆ ಮತ್ತು ಹಿಮಾಲಯನ್ ರಾಜ್ಯಗಳಿಗೆ ಶೇಕಡ 90: 10 ಹಾಗೂ ಶಾಸನಸಭೆಗಳಿಲ್ಲದ ಕೇಂದ್ರಾಡಳಿತ ಪ್ರದೇಶಗಳಿಗೆ ಶೇಕಡ 100 ಅನುದಾನವನ್ನು ಕೇಂದ್ರ ಒದಗಿಸಲಿದೆ. ಅವಧಿಯಲ್ಲಿ ಕೇಂದ್ರ ಸರ್ಕಾರದ ಒಟ್ಟು ಪಾಲು 2849.54 ಕೋಟಿ ರೂಪಾಯಿ ಆಗಿರುತ್ತದೆ.

Comment