Universal School Of Administration Integrated Degree college Admission Open for more details contact: 9686664985

ಎಫ್‍ಎಸ್‍ಎಸ್‍ಎಐನಿಂದ ಆಹಾರ ಉತ್ಪನ್ನಗಳನ್ನು ವಾಪಾಸು ಪಡೆಯಲು ಮಾರ್ಗಸೂಚಿ

ಎಫ್‍ಎಸ್‍ಎಸ್‍ಎಐನಿಂದ ಆಹಾರ ಉತ್ಪನ್ನಗಳನ್ನು ವಾಪಾಸು ಪಡೆಯಲು ಮಾರ್ಗಸೂಚಿ

ಭಾರತದ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ), ಅಸುರಕ್ಷಿತ ಎನಿಸಿದ ಆಹಾರ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ವಾಪಾಸು ಪಡೆಯುವ ಪ್ರಕ್ರಿಯೆಗೆ ಸೂಕ್ತ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಿ ಪ್ರಕಟಿಸಿದೆ.

ಮಾರ್ಗಸೂಚಿಯು ಇಂಥ ವಸ್ತುಗಳನ್ನು ವಾಪಾಸು ಪಡೆಯುವ ಹೊಣೆಯನ್ನು ಉತ್ಪಾದಕರು ಹಾಗೂ ಸರಬರಾಜುದಾರರಿಗೆ ಬಿಟ್ಟುಬಿಟ್ಟಿದೆ. ಇಂಥ ಅಸುರಕ್ಷಿತ ಆಹಾರ ಪದಾರ್ಥಗಳೆಂದು ಕಂಡುಬಂದ ಸಂದರ್ಭದಲ್ಲಿ, ಉತ್ಪನ್ನಗಳನ್ನು ವಾಪಾಸು ಪಡೆಯಲು ಕಂಪನಿಗಳು ಸೂಕ್ತವಾದ ಯೋಜನೆಯನ್ನು ರೂಪಿಸುವಂತೆ ಸಲಹೆ ಮಾಡಿದೆ.

ಪ್ರಮುಖ ಅಂಶಗಳು

ಇಂಥ ಮಾರ್ಗಸೂಚಿಯ ಪ್ರಮುಖವಾದ ಉದ್ದೇಶವೆಂದರೆ, ಆಹಾರ ವಹಿವಾಟು ಕಾರ್ಯನಿರ್ವಹಿಸುವವರಿಗೆ ಸೂಕ್ತ ನೆರವು ನೀಡುವುದು ಹಾಗೂ ಉತ್ಪನ್ನಗಳನ್ನು ವಾಪಾಸು ಪಡೆದುಕೊಳ್ಳಲು ಅಗತ್ಯವಾದ ಚೌಕಟ್ಟು ನಿರ್ಮಿಸಿಕೊಡುವುದು. ಇದರ ಅನ್ವಯ, ಆಹಾರ ಉತ್ಪನ್ನಗಳ ವಾಪಸಾತಿಯನ್ನು ಆಹಾರ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ವಾಪಾಸು ಪಡೆಯುವುದು ಎಂದು ವ್ಯಾಖ್ಯಾನಿಸಲಾಗಿದೆ. ಯಾವುದೇ ಹಂತದಲ್ಲಿ ಆಹಾರ ಸರಣಿಯನ್ನು ಗ್ರಾಹಕರಿಗೆ ಸುರಕ್ಷಿತವಾಗುವಂತೆ ನೋಡಿಕೊಳ್ಳುವುದು ಹಾಗೂ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವುದು ಹಾಗೂ ಆಹಾರ ಸುರಕ್ಷಾ ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು.

ಆಹಾರ ಮರುಪಡೆಯುವುದು, ಮಾರುಕಟ್ಟೆಯಿಂದ ದೋಷಯುಕ್ತ ಉತ್ಪನ್ನಗಳನ್ನು ರದ್ದುಮಾಡುವ ಅತ್ಯುತ್ತಮ ಹಾಗೂ ಸಮರ್ಪಕ ವಿಧಾನವಾಗಿದ್ದು, ನಿಯಂತ್ರಣ ಸಂಸ್ಥೆಗಳು ರೂಪಿಸಿದ ನಿಯಮಾವಳಿಗಳ ಅನ್ವಯ ಅಸುರಕ್ಷಿತ ಎಂದು ಪರಿಗಣಿಸಲ್ಪಟ್ಟ ವಸ್ತುಗಳನ್ನು ಮಾರುಕಟ್ಟೆಯಿಂದ ವಾಪಾಸು ಪಡೆಯಬೇಕಾಗುತ್ತದೆ. ಮಾರ್ಗಸೂಚಿಯ ಅನ್ವಯ, ಎಫ್ಎಸ್ಎಸ್ಎಐ ಅಂಥ ಆಹಾರ ಕಂಪನಿಗಳ ಲೈಸನ್ಸ್ ನವೀಕರಿಸುವ ಮುನ್ನ ಆರೋಗ್ಯಕ್ಕೆ ಅಪಾಯಕಾರಿಯಾದ ಆಹಾರ ವಸ್ತುಗಳನ್ನು ವಾಪಾಸು ಪಡೆಯುವುದು ಕಡ್ಡಾಯವಾಗಿರುತ್ತದೆ.

ಹೀಗೆ ವಶಪಡಿಸಿಕೊಂಡ ಉತ್ಪನ್ನಗಳನ್ನು ಇತರ ಆಹಾರ ಉತ್ಪನ್ನಗಳಿಗಿಂತ ಭಿನ್ನವಾದ ಸ್ಥಳದಲ್ಲಿ ದಾಸ್ತಾನು ಮಾಡಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ನಿಖರವಾದ ದಾಖಲೆಗಳನ್ನು ಇಡಬೇಕಾಗುತ್ತದೆ. ವಶಪಡಿಸಿಕೊಂಡ ಉತ್ಪನ್ನಗಳು ಹಾಗೂ ಬ್ಯಾಚ್ ಸಂಕೇತವನ್ನು ಕೂಡಾ ದಾಖಲಿಸಬೇಕಾಗುತ್ತದೆ. ಅಸುರಕ್ಷಿತ ಉತ್ಪನ್ನಗಳನ್ನು ಉತ್ಪಾದಿಸುವ ಕಂಪನಿಗಳು, ಇಂಥ ಮಾಲು ವಾಪಾಸು ಪಡೆಯುವ ಜತೆಗೆ ಭವಿಷ್ಯದಲ್ಲಿ ಇದು ಮರುಕಳಿಸದಂತೆ ಎಚ್ಚರ ವಹಿಸಬೇಕಾಗುತ್ತದೆ.

ಭಾರತದ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ)

ಭಾರತದ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಎನ್ನುವುದು ಶಾಸನಬದ್ಧ ಸಂಸ್ಥೆಯಾಗಿದ್ದು, ದೇಶದಲ್ಲಿ ಆಹಾರ ಉತ್ಪನ್ನಗಳನ್ನು ಮಾನವ ಬಳಕೆಗೆ ಸೂಕ್ತವಾಗಿ ಇರುವಂತೆ ನೋಡಿಕೊಳ್ಳುವ ಹೊಣೆ ಹೊಂದಿದೆ. ಜನಾರೋಗ್ಯವನ್ನು ಉತ್ತೇಜಿಸುವ ಮೂಲಕ ಮತ್ತು ಸಂರಕ್ಷಿಸುವ ಮೂಲಕ ದೇಶಾದ್ಯಂತ ಆಹಾರ ಸುರಕ್ಷತೆಯ ಮೇಲ್ವಿಚಾರಣೆ ಹಾಗೂ ನಿಯಂತ್ರಣದ ಜವಾಬ್ದಾರಿಯನ್ನು ಹೊಂದಿರುತ್ತದೆ.

ಇದನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ- 2006 ಅನ್ವಯ ಆರಂಭಿಸಲಾಗಿದ್ದು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

Comment