IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಆರೋಗ್ಯ ವಲಯ ಸಹಕಾರ ಒಪ್ಪಂದಕ್ಕೆ ಭಾರತ- ಇಟೆಲಿ ಸಹಿ

ಆರೋಗ್ಯ ವಲಯ ಸಹಕಾರ ಒಪ್ಪಂದಕ್ಕೆ ಭಾರತ- ಇಟೆಲಿ ಸಹಿ

ಆರೋಗ್ಯ ಕ್ಷೇತ್ರದಲ್ಲಿ ಸಹಕಾರವನ್ನು ವಿಸ್ತರಿಸುವ ಕುರಿತ ಒಪ್ಪಂದಕ್ಕೆ ಭಾರತ ಹಾಗೂ ಇಟೆಲಿ ಸಹಿ ಮಾಡಿವೆ. ಒಪ್ಪಂದದ ಮುಖ್ಯ ಉದ್ದೇಶವೆಂದರೆ ಉಭಯ ದೇಶಗಳ ಆರೋಗ್ಯ ಕ್ಷೇತ್ರದಲ್ಲಿ ಸಮಗ್ರ ಅಂತರ ಸಚಿವಾಲಯ ಮತ್ತು ಅಂತರ ಸಂಸ್ಥೆಗಳ ಸಹಕಾರವನ್ನು ಅಭಿವೃದ್ಧಿಪಡಿಸುವುದು. ಇದಕ್ಕಾಗಿ ವೈಜ್ಞಾನಿಕ, ತಾಂತ್ರಿಕ, ಹಣಕಾಸು ಹಾಗೂ ಮಾನವ ಸಂಪನ್ಮೂಲಗಳನ್ನು ಕ್ರೋಢೀಕರಿಸುವುದು ಇದರ ಉದ್ದೇಶವಾಗಿದೆ.

ಇದರ ಅಂತಿಮ ಗುರಿ ಎಂದರೆ ಆರೋಗ್ಯ ಕ್ಷೇತ್ರದಲ್ಲಿ ಒಳಗೊಂಡಿರುವ ಮಾನವ ಸಂಪನ್ಮೂಲ, ಭೌತಿಕ ಮತ್ತು ಮೂಲಸೌಕರ್ಯ ಸಂಪನ್ಮೂಲಗಳ ಗುಣಮಟ್ಟ ಹಾಗೂ ವ್ಯಾಪ್ತಿಯನ್ನು ಮೇಲ್ದರ್ಜೆಗೇರಿಸುವುದು. ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ತರಬೇತಿ, ಸಂಶೋಧನೆಯನ್ನು ಉಭಯ ದೇಶಗಳಲ್ಲಿ ಉತ್ತೇಜಿಸುವುದು ಇದರ ಉದ್ದೇಶವಾಗಿದೆ.

ಸಹಕಾರದ ಮುಖ್ಯ ಕ್ಷೇತ್ರಗಳು

  • ವೈದ್ಯಕೀಯ ಚಿಕಿತ್ಸಾ ವೈದ್ಯರು, ಅಧಿಕಾರಿಗಳು ಮತ್ತು ಇತರ ಆರೋಗ್ಯ ವೃತ್ತಿಪರರು ಹಾಗೂ ತಜ್ಞರಿಗೆ ತರಬೇತಿ ನೀಡುವ ವ್ಯವಸ್ಥೆಯನ್ನು ವಿನಿಮಯ ಮಾಡಿಕೊಲ್ಳುವುದು. ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸೂಕ್ತ ನೆರವು ನೀಡುವುದು ಹಾಗೂ ಉತ್ತಮ ಆರೋಗ್ಯ ಸೇವಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು.
  • ಫಾರ್ಮಸ್ಯೂಟಿಕಲ್, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯ ಸಾಧನಗಳ ನಿಯಂತ್ರಣ ಹಾಗೂ ಮಾಹಿತಿ ವಿನಿಮಯ. ಆರೋಗ್ಯ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ಅಲ್ಪಾವಧಿ ತರಬೇತಿಯನ್ನು ನೀಡುವುದಾಗಿದೆ.
  • ಜೆನರಿಕ್ ಮತ್ತು ಅಗತ್ಯ ಔಷಧಿಗಳ ಖರೀದಿ ಮತ್ತು ಔಷಧಗಳ ಪೂರೈಕೆಯ ಮೂಲಗಳಿಗೆ ನೆರವು ನೀಡುವುದು. ವೈದ್ಯಕೀಯ ಸಾಧನಗಳು ಹಾಗೂ ಫಾರ್ಮಸ್ಯೂಟಿಕಲ್ ಉತ್ಪನ್ನಗಳ ಖರೀದಿ. ವ್ಯಾಪಾರ ಅಭಿವೃದ್ಧಿ ಅವಕಾಶಗಳ ಉತ್ತೇಜನಕ್ಕೆ ಸಹಕಾರ ನಿಡುವುದು.
  • ಸಾಂಕ್ರಾಮಿಕವಲ್ಲದ ರೋಗಗಳಾದ ಹೃದ್ರೋಗ, ಸಿಓಪಿಡಿ, ಮಾನಸಿಕ ಆರೋಗ್ಯ, ಕ್ತಾನ್ಸರ್, ಡೆಮೆನ್ಷಿಯಾ ಮತ್ತಿತರ ರೋಗಗಳ ನಿಯಮತ್ರಣಕ್ಕೆ ಒತ್ತು ನೀಡಿ, ಸುಸ್ಥಿರ ಅಭಿವೃದ್ಧಿ ಗುರಿ-3 ಉದ್ದೇಶಗಳನ್ನು ಈಡೇರಿಸಲು ನೆರವಾಗುವುದು. ಇದಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಗಮನ ಹರಿಸುವುದು. ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಸಹಭಾಗಿತ್ವವನ್ನು ಸ್ಥಾಪಿಸುವುದು ಹಾಗೂ ಸಾಂಕ್ರಾಮಿಕ ರೋಗ ಮತ್ತು ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಎಚ್ಚರ ವಹಿಸುವುದು.
  • ಎಸ್ಡಿಜಿ2 ಹಿನ್ನೆಲೆಯಲ್ಲಿ ಪೌಷ್ಟಿಕ ಅಂಶಗಳಾದ ಆಹಾರ ಸೇವನೆ, ಅಪೌಷ್ಟಿಕತೆ (ಅಧಿಕ ಪೌಷ್ಟಿಕತೆ ಹಾಗೂ ಪೌಷ್ಟಿಕತೆಯ ಕೊರತೆ)ಯನ್ನು ತಡೆಯುವುದು, ಹಾಗೂ ಪೌಷ್ಟಿಕ ಸೇವೆಗಳಿಗೆ ಸೂಕ್ತವಾದ ಸಾಂಸ್ಥಿಕ ರೂಪವನ್ನು ನೀಡುವುದು.
  • ಉತ್ಪಾದನೆಯ ಸುರಕ್ಷತೆ, ವರ್ಗಾವಣೆ ಮತ್ತು ವಿತರಣೆ ಹಾಗೂ ಆಹಾರ ವಿತರಣೆ ಸಂಶೋಧನೆಯ ಜತೆಗೆ ಆಹಾರ ಉದ್ದಿಮೆ ಕಾರ್ಯಾಚರಣೆಯವರಿಗೆ ಸೂಕ್ತ ತರಬೇತಿಯನ್ನು ನೀಡುವುದು. ನಾಗರಿಕರಿಗೆ ನೈರ್ಮಲ್ಯ ಮತ್ತು ಆಹಾರ ಸುರಕ್ಷೆ ಮತ್ತು ಆರೋಗ್ಯಕರ ತಿನಸು ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ಮಾಹಿತಿ ಮತ್ತು ಸಂವಹನವನ್ನು ನೀಡುವುದು.

Comment