Universal School Of Administration Integrated Degree college Admission Open for more details contact: 9686664985

ನೌಕಾಪಡೆಗೆ ಹೊಸ ರೇಡಿಯೊ ತಂತ್ರಜ್ಞಾನಕ್ಕೆ ಒಪ್ಪಿಗೆ

ನೌಕಾಪಡೆಗೆ ಹೊಸ ರೇಡಿಯೊ ತಂತ್ರಜ್ಞಾನಕ್ಕೆ ಒಪ್ಪಿಗೆ

ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯವು 260 ಸಾಫ್ಟ್ವೇರ್ ವ್ಯಾಖ್ಯಾನಿತ ರೇಡಿಯೊಗಳನ್ನು ಖರೀದಿ ಮಾಡಲು ನೌಕಾಪಡೆಗೆ ಅನುಮೋದನೆ ನಿಡಿದೆ. ಸುಮಾರು 490 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಇದನ್ನು ಖರೀದಿಸಲಾಗುತ್ತಿದ್ದು, ಇದು ಸಮುದ್ರದ ಉನ್ನತ ಭಾಗದಲ್ಲಿ ನಿಗಾ ವ್ಯವಸ್ಥೆಯ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಲಿದೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಡಿಎಸಿ ಎನ್ನುವುದು ರಕ್ಷಣಾ ಸಚಿವಾಲಯದ ಅತ್ಯುನ್ನತ ನಿರ್ಧಾರಗಳನ್ನು ಕೈಗೊಳ್ಳುವ ಸಂಸ್ಥೆಯಾಗಿದೆ.

ಪ್ರಮುಖ ಅಂಶಗಳು

ಒಟ್ಟು 260 ಸಾಫ್ಟ್ವೇರ್ ವ್ಯಾಖ್ಯಾನಿತ ರೇಡಿಯೊಗಳನ್ನು ಖರೀದಿ ವರ್ಗದಲ್ಲಿ ಪಡೆಯಲಾಗುತ್ತದೆ. ಇದನ್ನು ಭಾರತದಲ್ಲೇ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ ಮತ್ತು ಉತ್ಪಾದಿಸಲಾಗುತ್ತದೆ. ಇದು ದೇಶೀಯವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ ಮೊಟ್ಟಮೊದಲ ಸಾಫ್ಟ್ವೇರ್ ವ್ಯಾಖ್ಯಾನಿತ ರೇಡಿಯೊ ಸೆಟ್ ಆಗಿದ್ದು, ಇದನ್ನು ಯಾವುದೇ ಮೂರು ಸೇವೆಗಳು ಕೂಡಾ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದು ಹಾಲಿ ಇರುವ ಯುದ್ಧನೌಕೆ ವ್ಯವಸ್ಥೆಯನ್ನು ಬದಲಿಸಿ, ಸುಧಾರಿಸುವಲ್ಲಿ ಮಹತ್ವದ್ದಾಗಲಿದೆ.

ಸಾಫ್ಟ್ವೇರ್ ವ್ಯಾಖ್ಯಾನಿತ ರೇಡಿಯೊಗಳ ಅಭಿವೃದ್ಧಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ರಕ್ಷಣಾ ಎಲೆಕ್ಟ್ರಾನಿಕ್ಸ್ ಮತ್ತು ಅಪ್ಲಿಕೇಶನ್ ಪ್ರಯೋಗಾಲಯ (ಡಿಇಎಲ್) ಮಾಡಿದೆ. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಇದರ ಉತ್ಪಾದನಾ ಏಜೆನ್ಸಿಯಾಗಿದೆ. ಸಾಫ್ಟ್ವೇರ್ ವ್ಯಾಖ್ಯಾನಿತ ರೇಡಿಯೊ ತಂತ್ರಜ್ಞಾನವು, ಸುಧಾರಿತ ಮಾಹಿತಿ ಹಂಚಿಕೆ ಮತ್ತು ಸುಸ್ಥಿರ ಜಾಗೃತಿಯನ್ನು ಒದಗಿಸಲಿದ್ದು, ಧ್ವನಿ ಸಂವಹನ ಮತ್ತು ಡಾಟಾ ವರ್ಗಾವಣೆ ಸಾಮಥ್ರ್ಯದ ವಿಚಾರದಲ್ಲಿ ಇದು ಮಹತ್ವದ ಬೆಳವಣಿಕೆಯಾಗಿದೆ.

ಸಾಫ್ಟ್ವೇರ್ ವ್ಯಾಖ್ಯಾನಿತ ರೇಡಿಯೊ ತಂತ್ರಜ್ಞಾನ

ಸಾಫ್ಟ್ವೇರ್ ವ್ಯಾಖ್ಯಾನಿತ ರೇಡಿಯೊ ಎನ್ನುವುದು ರೇಡಿಯೊ ಸಂವಹನ ವ್ಯವಸ್ಥೆಯಾಗಿದ್ದು, ಸಾಮಾನ್ಯವಾಗಿ ಹಾರ್ಡ್ವೇರ್ ಮೂಲಕ ನಿರ್ವಹಿಸುವ ವ್ಯವಸ್ಥೆಯನ್ನು ಕಂಪ್ಯೂಟರ್ ಮೂಲಕ ಸಾಫ್ಟ್ವೇರ್ ವ್ಯವಸ್ಥೆಯಡಿ ನಿರ್ವಹಿಸುತ್ತದೆ.

Comment