IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಹಸಾಂಗ್- 15: ಉತ್ತರ ಕೊರಿಯಾದ ಪ್ರಬಲ ಐಸಿಬಿಎಂ ಕ್ಷಿಪಣಿ ಪರೀಕ್ಷೆ

ಹಸಾಂಗ್- 15: ಉತ್ತರ ಕೊರಿಯಾದ ಪ್ರಬಲ ಐಸಿಬಿಎಂ ಕ್ಷಿಪಣಿ ಪರೀಕ್ಷೆ

ಅತ್ಯಾಧುನಿಕ ಅಣ್ವಸ್ತ್ರ ಸಾಮಥ್ರ್ಯದ ಅಂತರಖಂಡ ಸಿಡಿತಲೆ ಕ್ಷಿಒಣಿ (ಐಸಿಬಿಎಂ) ಹಸಾಂಗ್-15 ಪರೀಕ್ಷಾರ್ಥ ಪ್ರಯೋಗವನ್ನು ಉತ್ತರ ಕೊರಿಯಾ ಯಶಸ್ವಿಯಾಗಿ ನಿರ್ವಹಿಸಿದೆ. ಇದು ಉತ್ತರ ಕೊರಿಯಾದ ಅತ್ಯಂತ ಶಕ್ತಿಶಾಲಿ ಐಸಿಬಿಎಂ ಆಗಿದ್ದು, ಇದು ಅಮೆರಿಕದ ಸಾಗರ ತೀರ ಮತ್ತು ವಾಷಿಂಗ್ಟನ್ ಪ್ರದೇಶವನ್ನು ತಲುಪುವ ಸಾಮಥ್ರ್ಯ ಹೊಂದಿದೆ.

ಐಸಿಬಿಎಂ ಕ್ಷಿಪಣಿಯನ್ನು ಪ್ಯಾಂಗ್ಯಾಂಗ್ ಬಳಿ ಪರೀಕ್ಷಿಸಲಾಗಿದ್ದು, ಇದು ಗರಿಷ್ಠ 4475 ಕಿಲೋಮೀಟರ್ ದೂರವನ್ನು ತಲುಪಿದೆ ಹಾಗು ಇದು ಸಮುದ್ರದಲ್ಲಿ ನಿಖರವಾದ ಗುರಿಯ ಮೇಲೆ ದಾಳಿ ಮಾಡಿದ್ದು, 950 ಕಿಲೋಮೀಟರ್ ದೂರದ ಗುರಿಯನ್ನು ಯಶಸ್ವಿಯಾಗಿ ತಲುಪಿದೆ. ಇದು ಜಪಾನ್ ವಿಶೇಷ ಆರ್ಥಿಕ ವಲಯದ ಒಳಗೆ ಬಿದ್ದಿದ್ದು, ಇದು ಜಪಾನ್ ಮುಖ್ಯ ದ್ವೀಪವಾದ ಹೊಂಶು ದ್ವೀಪದ ಉತ್ತರ ಭಾಗಕ್ಕಿದೆ. ಇದು ಓಮೋರಿ ಪಟ್ಟಣದಿಂದ ಪಶ್ಚಿಮಕ್ಕೆ 250 ಕಿಲೋಮೀಟರ್ ದೂರದಲ್ಲಿದೆ.

ಹೊಸೋಂಗ್-15

ಉತ್ತರ ಕೊರಿಯಾ ಹೇಳಿಕೊಂಡಿರುವಂತೆ ಹೊಸೋಂಗ್-15 ಐಸಿಬಿಎಂ ಕ್ಷಿಪಣಿ ಅತ್ಯಧಿಕ ಸಾಮಥ್ರ್ಯವನ್ನು ಹೊಂದಿದ್ದು, ಹಿಂದಿನ ಎಲ್ಲ ಕ್ಷಿಪಣಿಗಳಿಗಿಂತಲೂ ಪ್ರಬಲವಾಗಿದೆ. ಇದು ಹೊಸೋಂಗ್-14 ಐಸಿಬಿಎಂ ಕ್ಷಿಪಣಿಗಿಂತ ಸುಧಾರಿತ ಅವತರಣಿಕೆಯಾಗಿದೆ. ಇದು ಉತ್ತರ ಕೊರಿಯಾದ ಅಭುತ ಐಸಿಬಿಎಂ ಆಗಿದ್ದು, ಇದಕ್ಕೆ ಅತಿದೊಡ್ಡ ಹಾಗೂ ಭಾರವಾದ ಅಣ್ವಸ್ತ್ರ ಸಿಡಿತಲೆಯನ್ನು ಒಯ್ಯುವ ಸಾಮಥ್ರ್ಯವಿದೆ. ಇದು ಉತ್ತರ ಕೊರಿಯಾ ಅಭಿವೃದ್ಧಿಪಡಿಸಿದ ಪ್ರಪ್ರಥಮ ಅತ್ಯಾಧುನಿಕ ಸಿಡಿತಲೆ ಕ್ಷಿಪಣಿಯಾಗಿದ್ದು, ಸೈದ್ಧಾಂತಿಕವಾಗಿ ಅಮೆರಿಕದ ವಾಷಿಂಗ್ಟನ್ ಡಿಸಿ ಸೇರಿದಂತೆ ಪ್ರಮುಖ ಭೂಭಾಗವನ್ನು ತಲುಪುವ ಸಾಮಥ್ರ್ಯ ಹೊಂದಿದೆ. ಇದರ ಟ್ರೆಜೆಕ್ಟರಿ ಮತ್ತು ಅಂತರದ ಆಧಾರದಲ್ಲಿ, ಕ್ಷಿಪಣಿ 13 ಸಾವಿರ ಕಿಲೋಮೀಟರ್ಗಿಂತ ಅಧಿಕ ದೂರದ ಮೇಲೆ ದಾಳಿ ಮಾಡುವ ಸಾಮಥ್ರ್ಯ ಹೊಮದಿದೆ ಎನ್ನಲಾಗಿದೆ. ಇದು ಭೂಮಿಯ ಬಹುತೇಕ ಎಲ್ಲ ಖಂಡಗಳನ್ನು ತಲುಪುವ ಸಾಮಥ್ರ್ಯ ಹೊಂದಿದೆ. ದಕ್ಷಿಣ ಅಮೆರಿಕ ಮತ್ತು ಅಂಟಾರ್ಟಿಕ ಇದಕ್ಕೆ ಹೊರತಾಗಿದೆ.

ತಜ್ಞರ ಪ್ರಕಾರ, ಉತ್ತರ ಕೊರಿಯಾದ ಪರೀಕ್ಷೆಯಿಂದ ಉತ್ತರ ಕೊರಿಯಾ ಸಮೂಹ ನಾಶದ ಅಣ್ವಸ್ತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಗಣನೀಯ ಪ್ರಗತಿ ಸಾಧಿಸಿದ ಎನ್ನುವುದು ನಿರ್ವಿವಾದ. ಅದರಲ್ಲೂ ಮುಖ್ಯವಾಗಿ ಅಮೆರಿಕದ ಕೇಂದ್ರಭಾಗದ ಮೇಲೂ ಇದು ದಾಳಿ ಮಾಡಬಲ್ಲದು. ಹೊಸೋಂಗ್-15 ಕ್ಷಿಪಣಿಯು ಅದರ ಹಿಂದಿನ ಐಸಿಬಿಎಂನ ಸುಧಾರಿತ ಅವತರಣಿಕೆಯಾಗಿದ್ದು, ಇದರಲ್ಲಿ ಎರಡನೇ ಹಂತದ ವಿಸ್ತø ರೂಪ ಇರುತ್ತದೆ ಎಂದು ಹೇಳಲಾಗಿದೆ.

ಅಂತರಖಂಡ ಸಿಡಿತಲೆ ಕ್ಷಿಪಣಿ (ಐಸಿಬಿಎಂ)

ಅಂತರಖಂಡ ಸಿಡಿತಲೆ ಕ್ಷಿಪಣಿ (ಐಸಿಬಿಎಂ)ಯನ್ನು ಭೂ ಆಧರಿತ ವ್ಯವಸ್ಥೆಯಿಂದ ಉಡಾಯಿಸಲಾಗಿದ್ದು, ಇದು ಅಣ್ವಸ್ತ್ರ ಪೇಲೋಡ್ ಒಯ್ಯುವ ಉದ್ದೇಶದಿಂದ ನಿರ್ಮಿತವಾಗಿದೆ. ಅಂತರಖಂಡ ಸಿಡಿತಲೆ ಕ್ಷಿಪಣಿ (ಐಸಿಬಿಎಂ)

ಆಗಿ ಅರ್ಹತೆ ಪಡೆಯಲು ಕ್ಷಿಪಣಿ ಕನಿಷ್ಠ 5500 ಕಿಲೋಮೀಟರ್ ದೂರವನ್ನು ತಲುಪುವ ಸಾಮಥ್ರ್ಯ ಹೊಂದಿರಬೇಕು. ಅಂತರಖಂಡ ಸಿಡಿತಲೆ ಕ್ಷಿಪಣಿ (ಐಸಿಬಿಎಂ) ಮತ್ತು ಇತರ ಸಿಡಿತಲೆ ಕ್ಷಿಪಣಿಗಳಿಗೆ ಇರುವ ಮಹತ್ವದ ಭಿನ್ನತೆಯೆಂದರೆ ವೇಗ ಹಾಗೂ ಅದು ತಲುಪಬಹುದಾದ ದೂರ. ಇದು ಅತ್ಯಂತ ದೂರದ ದೇಶಗಳ ಮೇಲಿನ ಗುರಿಯನ್ನು ಕನಿಷ್ಠ ಎಚ್ಚರಿಕೆಯೊಂದಿಗೆ ತಲುಪಿ ದಾಳಿ ನಡೆಸಬಲ್ಲದು.

Comment