Universal School Of Administration Integrated Degree college Admission Open for more details contact: 9686664985

ಬಿಎಸ್‍ಎಫ್ ಧ್ವಜ ದಿನಾಚರಣೆ

ಬಿಎಸ್‍ಎಫ್ ಧ್ವಜ ದಿನಾಚರಣೆ

ಗಡಿಭದ್ರತಾ ಪಡೆಯ (ಬಿಎಸ್ಎಫ್) 52ನೇ ವಾರ್ಷಿಕ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು. ಇದು ಇಡೀ ವಿಶ್ವದಲ್ಲೇ ಅತಿದೊಡ್ಡ ಗಡಿಭದ್ರತಾ ಪಡೆಯಾಗಿದ್ದು, ಪ್ರತಿ ವರ್ಷ ಇದರ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಬಿಎಸ್ಎಫ್ ಹಿರಿಯ ಯೋಧರು ಹಾಗು ಸಿಬ್ಬಂದಿ ಸಂಸ್ಥಾಪನಾ ದಿನ ಸಮಾರಂಭದಲ್ಲಿ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ.

ಬಿಎಸ್ಎಫ್

ಗಡಿಭದ್ರತಾ ಪಡೆ (ಬಿಎಸ್ಎಫ್) ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಗಡಿಗೆ ಭದ್ರತೆ ಒದಗಿಸುವ ಉದ್ದೇಶದಿಂದ ಸ್ಥಾಪನೆಗೊಂಡಿದೆ. ಇದು 1965 ಡಿಸೆಂಬರ್ 1ರಂದು ಅಸ್ತಿತ್ವಕ್ಕೆ ಬಂದಿದೆ. ವಿವಿಧ ರಾಜ್ಯ ಸಶಸ್ತ್ರ ಪೊಲೀಸ್ ಬೆಟಾಲಿಯನ್ಗಳನ್ನು ಸಮನ್ವಯಗೊಳಿಸಿ ಇದನ್ನು ಆರಂಭಿಸಲಾಗಿದೆ. ಶಾಂತಿ ಸಂದರ್ಭದಲ್ಲಿ ದೇಶದ ಗಡಿಯನ್ನು ಕಾಯುವ ಸಲುವಾಗಿ ಮತ್ತು ಪೂರ್ವ ಹಾಗೂ ಪಶ್ಚಿಮ ಭಾಗದ ಗಡಿಯಲ್ಲಿ ಯುದ್ಧ ಸಂದರ್ಭದಲ್ಲಿ ಭಾರತದ ಸಾರ್ವಭೌಮತ್ವವನ್ನು ಕಾಪಾಡುವ  ನಿಟ್ಟಿನಲ್ಲಿ ಗಣನೀಯ ಕೊಡುಗೆ ಸಲ್ಲಿಸುತ್ತಾ ಬಂದಿದೆ.

ಗಡಿಭದ್ರತಾ ಪಡೆಯನ್ನು ಪ್ರಮುಖವಾಗಿ ಭಾರತ- ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ, ಭಾರತ- ಬಾಂಗ್ಲಾದೇಶ ಅಂತರರಾಷ್ಟ್ರೀಯ ಗಡಿ, ವಾಸ್ತವ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲಾಗಿದೆ. ಇದರ ಜತೆಗೆ ಭಾರತೀಯ ಸೇನೆ ಹಾಗೂ ನಕ್ಸಲ್ ನಿರೋಧ ಕಾರ್ಯಾಚರಣೆ ಪಡೆ ಕೂಡಾ ಕಾರ್ಯ ನಿರ್ವಹಿಸುತ್ತದೆ. ಆರಂಭದಿಂದಲೂ ಬಿಎಸ್ಎಫ್ ವಿಶ್ವಾಸಾರ್ಹತೆ ಹಾಗೂ ಯುದ್ಧಕೌಶಲಕ್ಕೆ ಹೆಸರುವಾಸಿಯಾಗಿದೆ. ಹಲವು ಮಿಲಿಟರಿ ವಿರೋಧಿ ಕಾರ್ಯಾಚರಣೆ ಸಂದರ್ಭದಲ್ಲಿ ಮತ್ತು ಗಡಿ ನುಸುಳುವ ಸಂದರ್ಭದಲ್ಲಿ, ಆಂತರಿಕ ಭದ್ರತಾ ಕರ್ತವ್ಯಗಳನ್ನು, ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದೆ.

Comment