IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಡಿಸೆಂಬರ್ 1: ವಿಶ್ವ ಏಡ್ಸ್ ದಿನ

ಡಿಸೆಂಬರ್ 1: ವಿಶ್ವ ಏಡ್ಸ್ ದಿನ

ವಿಶ್ವ ಏಡ್ಸ್ ದಿನಾಚರಣೆಯನ್ನು ಪ್ರತಿ ವರ್ಷದ ಡಿಸೆಂಬರ್ 1ರಂದು ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಅಕ್ವಯರ್ಡ್ ಇಮ್ಯುನೊ ಡಿಫೀಶಿಯೆನ್ಸಿ ಸಿಂಡ್ರೋಮ್ (ಎಐಡಿಎಸ್) ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶ. ಇದು ಕಾಯಿಲೆಯಿಂದ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಂದರ್ಭವೂ ಆಗಿದೆ.

ವರ್ಷ ವಿಶ್ವ ಆರೋಗ್ಯ ಸಂಸ್ಥೆ ಹಮ್ಮಿಕೊಂಡಿರುವ ತಿರುಳು ಎಂದರೆ, "ಆರೋಗ್ಯದ ಹಕ್ಕು". ಇದರ ಅನ್ವಯ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವಾದ್ಯಂತ ಏಡ್ಸ್ನೊಂದಿಗೆ ಜೀವನ ನಡೆಸುತ್ತಿರುವ 36.7 ದಶಲಕ್ಷ ಜನರ ಆರೋಗ್ಯಕ್ಕೆ ಒತ್ತು ನೀಡುತ್ತದೆ. ಸಾರ್ವತ್ರಿಕ ಆರೋಗ್ಯ ಸೌಲಭ್ಯ ಒದಗಿಸುವ ಗುರಿಯನ್ನು ಸಾಧಿಸಬೇಕಾದರೆ ಮಾರಕ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವವರಿಗೆ ಆದ್ಯತೆಯ ಮೇರೆಗೆ ಸೂಕ್ತ ಚಿಕಿತ್ಸೆಯನ್ನು ನೀಡುವುದು ಸೇರುತ್ತದೆ.

ಇದರೊಂದಿಗೆ ವಿಶ್ವ ಆರೋಗ್ಯ ಸಂಸ್ಥೆಯುಎವೆರಿಬಡಿ ಕೌಂಟ್ಸ್ಎಂಬ ಘೋಷಣೆಯಡಿ, ಸುರಕ್ಷಿತ, ಪರಿಣಾಮಕಾರಿ, ಗುಣಮಟ್ಟದ ಹಾಗೂ ಕೈಗೆಟುಕುವ ಔಷಧಿಗಳು, ರೋಗಲಕ್ಷಣ ಪತ್ತೆ ಮತ್ತು ಇತರ ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ಸುಲಭವಾಗಿ ಕೈಗೆಟುಕುವಂತೆ ಮಾಡುವ ನಿಟ್ಟಿನಲ್ಲೂ ಕಾರ್ಯಯೋಜನೆ ಹಮ್ಮಿಕೊಂಡಿದೆ. ಇದು ಎಲ್ಲ ಜನರಿಗೂ ಆರೋಗ್ಯ ಸೌಲಭ್ಯ ಸೇವೆಯನ್ನು ಖಾತ್ರಿಪಡಿಸುವ ಗುರಿ ಹೊಂದಿದ್ದು, ಹಣಕಾಸು ಅಪಾಯದ ಸಾಧ್ಯತೆಯಿಂದ ಅವರನ್ನು ರಕ್ಷಿಸಲು ಆದ್ಯತೆ ನೀಡುತ್ತದೆ.

ಹಿನ್ನೆಲೆ

ವಿಶ್ವ ಆರೋಗ್ಯ ಸಂಸ್ಥೆಯು ಡಿಸೆಂಬರ್ 1ನ್ನು ವಿಶ್ವ ಏಡ್ಸ್ ದಿನವನ್ನಾಗಿ 1987ರಲ್ಲಿ ಘೋಷಿಸಿದೆ. ಬಳಿಕ ಇದನ್ನು ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ವಾರ್ಷಿಕವಾಗಿ ಆಯೋಜಿಸುವ ಆರು ಅಧಿಕೃತ ಜಾಗತಿಕ ಸಾರ್ವಜನಿಕ ಆರೋಗ್ಯ ಅಭಿಯಾನಗಳಲ್ಲಿ ಇದೂ ಒಂದಾಗಿದೆ.

ಎಚ್ಐವಿ/ ಏಡ್ಸ್

ಎಚ್ಐವಿ/ ಏಡ್ಸ್ ಎನ್ನುವುದು ಸಾಂಕ್ರಾಮಿಕ ರೋಗವಾಗಿದ್ದು, ಇದು ಮನುಷ್ಯನಲ್ಲಿ ರೋಗನಿರೋಧಕ ಶಕ್ತಿಯನ್ನು ಕುಂದಿಸುವ ವೈರಸ್ ದಾಳಿ ಮಾಡುವುದರಿಂದ ಬರುತ್ತದೆ. ಎಚ್ಐವಿ ವೈರಸ್ ನಮ್ಮ ದೇಹದ ರೋಗನಿರೋಧಕ ಶಕ್ತಿಯ ಮೇಲೆ ದಾಳಿ ಮಾಡುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದರೆ, ವ್ಯಕ್ತಿಯ ರೋಗ ನಿರೋಧಕ ಶಕ್ತಿ ಕ್ರಮೇಣ ಸಂಪೂರ್ಣವಾಗಿ ನಾಶವಾಗುತ್ತದೆ. ಏಡ್ಸ್ ಎಂದರೆ ಕೆಲ ಬಗೆಯ ರೋಗಲಕ್ಷಣವಾಗಿದ್ದು, ಎಚ್ಐವಿ ಸೋಂಕಿನ ಕೊನೆಯ ಹಂತಗಳಲ್ಲಿ ಇದು ಬಾಧಿಸುತ್ತದೆ.

ಎಚ್ಐವಿ ಸೋಂಕಿಗೆ ಸಾಮಾನ್ಯ ಕಾರಣಗಳು

  • ಸೋಂಕು ತಗುಲಿದ ವ್ಯಕ್ತಿಯ ಜತೆ ಅಸುರಕ್ಷಿತ ಲೈಂಗಿಕತೆ
  • ಗರ್ಭಿಣಿಯರಾಗಿರುವ ಅವಧಿಯಲ್ಲಿ ತಾಯಿಯಿಂದ ಮಗುವಿಗೆ ಇದು ಹರಡುತ್ತದೆ ಹಾಗೂ ಮೊಲೆಹಾಲು ಉಣಿಸುವ ಅವಧಿಯಲ್ಲೂ ಅಪಾಯವಿದೆ.
  • ರಕ್ತ ಮರುಪೂರಣದ ವೇಳೆ
  • ಸೋಂಕು ತಗುಲಿದ ವ್ಯಕ್ತಿಗೆ ಬಳಸಲಾದ ಚುಚ್ಚುಮದ್ದಿನ ಸೂಜಿಯನ್ನು ಇತರರಿಗೂ ಬಳಸುವುದು ಕೂಡಾ ರೋಗ ಹರಡಲು ಕಾರಣವಾಗುತ್ತದೆ.

Comment