Universal School Of Administration Integrated Degree college Admission Open for more details contact: 9686664985

ಅಜೇಯ ವಾರಿಯರ್-2017: ಭಾರತ- ಬ್ರಿಟನ್ ಜಂಟಿ ಕಾರ್ಯಾಚರಣೆ

ಅಜೇಯ ವಾರಿಯರ್-2017: ಭಾರತ- ಬ್ರಿಟನ್ ಜಂಟಿ ಕಾರ್ಯಾಚರಣೆ

ಭಾರತ ಹಾಗೂ ಬ್ರಿಟನ್ ಸೇನೆಗಳ ನಡುವಿನ ಜಂಟಿ ಸೇನಾ ಕಾರ್ಯಾಚರಣೆ ಅಜೇಯ ವಾರಿಯರ್- 2017 ರಾಜಸ್ಥಾನದ ಬಿಕನೇರ್ನಲ್ಲಿರುವ ಮಹಾಜನ ಫೀಲ್ಡ್ ಫೈರಿಂಗ್ ರೇಂಜ್ನಲ್ಲಿ ನಡೆಯಿತು. ಇದು ಭಾರತ ಹಾಗೂ ಬ್ರಿಟನ್ ನಡುವಿನ ಮೂರನೇ ಜಂಟಿ ಮಿಲಿಟರಿ ಕಾರ್ಯಾಚರಣೆಯಾಗಿದೆ. ಮೊಟ್ಟಮೊದಲ ಜಂಟಿ ಕಾರ್ಯಾಚರಣೆ ಬೆಳಗಾವಿಯಲ್ಲಿ ಹಾಗೂ 2015 ಜಂಟಿ ಕಾರ್ಯಾಚರಣೆ ಬ್ರಿಟನ್ನಲ್ಲಿ ನಡೆದಿತ್ತು.

ಪ್ರಮುಖ ಅಂಶಗಳು

ಕಾರ್ಯಾಚರಣೆಯ ಪ್ರಮುಖ ಉದ್ದೇಶವೆಂದರೆ ಜಂಟಿ ಸಹಭಾಗಿತ್ವ ಮತ್ತು ಪರಸ್ಪರ ದೇಶಗಳ ನಡುವೆ ಸಹಕಾರವನ್ನು ಹೆಚ್ಚಿಸುವುದು. ಎರಡೂ ದೇಶಗಳ ಸೇನೆಗಳು ತಮ್ಮ ಅನುಭವ ಮತ್ತು ಕಲಿಕೆಯನ್ನು ಪರಸ್ಪರ ಹಂಚಿಕೊಳ್ಳಲು ಇದು ಅವಕಾಶ ಮಾಡಿಕೊಡುತ್ತದೆ. ಎರಡೂ ದೇಶಗಳ ಸೇನೆಗಳಿಂದ ಸುಮಾರು 120 ಸಿಬ್ಬಂದಿ ಇದರಲ್ಲಿ ಪಾಲ್ಗೊಂಡಿದ್ದಾರೆ. ಭಾರತೀಯ ಸೇನಾ ಪಡೆಯ 20 ರಜಪೂತನ ರೈಫಲ್ ಘಟಕಗಳು ಹಾಗೂ ಬ್ರಿಟನ್ ಸೇನೆಯ ರಾಯಲ್ ಆಂಗ್ಲಿಯನ್ ರಿಜಿಮೆಂಟ್ ಮೊದಲ ಬೆಟಾಲಿಯನ್ ಯೋಧರು ಇದರಲ್ಲಿ ಪಾಲ್ಗೊಂಡಿದ್ದಾರೆ.

20 ರಜಪೂತನ ರೈಫಲ್ಸ್ ಉಗ್ರಗಾಮಿ ನಿಗ್ರಹ ಕ್ಷೇತ್ರದಲ್ಲಿ ವಿಶೇಷ ಅನುಭವ ಹಾಗೂ ಪರಿಣತಿಯನ್ನು ಹೊಂದಿದ್ದು, ಆಪರೇಶನ್ ಪವನ್ ಹಾಗೂ ಆಪರೇಶನ್ ಜಮ್ಮು- ಕಾಶ್ಮೀರದಲ್ಲಿ ವಿಶೇಷ ಅನುಭವ ಹೊಂದಿವೆ. ಬ್ರಿಟನ್ ಸೇನೆಯ ರಾಯಲ್ ಆಂಗ್ಲಿಯನ್ ರೆಜಿಮೆಂಟ್ ಮೊದಲ ಬೆಟಾಲಿಯನ್, ಅಪ್ಘಾನಿಸ್ತಾನ ಹಾಗೂ ಇರಾಕ್ನಲ್ಲಿ ಯುದ್ಧಕೌಶಲದ ಅನುಭವವನ್ನು ಹೊಂದಿದೆ.

14 ದಿನಗಳ ಜಂಟಿ ಕಾರ್ಯಾಚರಣೆಯಲ್ಲಿ, ಎರಡು ದೇಶಗಳ ತುಕಡಿಗಳ ನಡುವೆ ಪ್ರತಿ ಹಂತದಲ್ಲೂ ಸಮನ್ವಯ ಹಾಗೂ ಸಹಕಾರವನ್ನು ಸಾಧಿಸುವ ಮಾದರಿಗೆ ಒತ್ತು ನೀಡಿದೆ. ಕಾರ್ಯಾಚರಣೆಯಲ್ಲಿ ಕ್ಷೇತ್ರ ಕಮಾಂಡರ್ಗಳು ಮತ್ತು ತುಕಡಿಗಳು ಪರಸ್ಪರ ವೃತ್ತಿಪರ, ಸಾಮಾಜಿಕ ಹಾಗೂ ಸಾಂಸ್ಕøತಿಕ ವಿಚಾರಗಳ ಬಗ್ಗೆ ಕೂಡಾ ಸಂವಾದವನ್ನು ನಡೆಸಲು ಅವಕಾಶ ಮಾಡಿಕೊಟ್ಟಿದೆ.

Comment