Universal School Of Administration Integrated Degree college Admission Open for more details contact: 9686664985

ಪ್ರಮುಖ ವಲಯಗಳ  ಪ್ರಗತಿ ಶೇಕಡ 4.7ಕ್ಕೆ ಏರಿಕೆ

ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ಎಂಟು ಪ್ರಮುಖ ಉದ್ದಿಮೆಗಳ ಸೂಚ್ಯಂಕದ ಪ್ರಕಾರ, 2017 ಅಕ್ಟೋಬರ್ನಲ್ಲಿ ಶೇಕಡ 4.7ರಷ್ಟು ಪ್ರಗತಿ ದಾಖಲಾಗಿದೆ. ಇದು 2017 ಸೆಪ್ಟೆಂಬರ್ನಲ್ಲಿದ್ದ ಪ್ರಗತಿದರಕ್ಕೆ ಸಮಾನವಾಗಿದ್ದು, ಶೇಕಡ 5.2 ಅಂದಾಜನ್ನು ಪರಿಷ್ಕರಿಸಿ ಶೇಕಡ 4.7 ಎಂದು ನಿಗದಿಪಡಿಸಲಾಗಿತ್ತು.

ಇದು 2017 ಮಾರ್ಚ್ನಿಂದೀಚೆಗೆ ಗರಿಷ್ಠ ಪ್ರಮಾಣದ ಪ್ರಮುಖ ವಲಯದ ಪ್ರಗತಿಯಾಗಿದೆ. ಏಪ್ರಿಲ್ನಿಂದ ಅಕ್ಟೋಬರ್ವರೆಗೆ ಶೇಕಡ 3.5 ಪ್ರಗತಿ ದಾಖಲಾಗಿದ್ದು, ಇದು ಹಿಂದಿನ ವರ್ಷ ಇದ್ದ ಶೇಕಡ 5.6ಕ್ಕೆ ಹೋಲಿಸಿದರೆ ಕಡಿಮೆ.

ಪ್ರಮುಖ ಅಂಶಗಳು

ಪ್ರಮುಖ ಉದ್ದಿಮೆಗಳಲ್ಲಿ ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಶುದ್ಧೀಕರಣ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯತ್ ಸೇರಿದ್ದು, 2017 ಅಕ್ಟೋಬರ್ನಲ್ಲಿ ಇದು ಶೇಕಡ 4.7ರನ್ನು ತಲುಪಿದೆ. 2016 ಅಕ್ಟೋಬರ್ನಲ್ಲಿ ಪ್ರಮಾಣ ಶೇಕಡ 7.1ನ್ನು ತಲುಪಿತ್ತು. ಆದಾಗ್ಯೂ 2016 ಅಕ್ಟೋಬರ್ನಲ್ಲಿ, ಸಮರ್ಪಕ ಪ್ರಮುಖ ವಲಯ ನಿಧಾನ ಪ್ರವೃತ್ತಿಯ ಬೆಳವಣಿಗೆ ಕಂಡಿತ್ತು. ಇದಕ್ಕೆ ಸಿಮೆಂಟ್, ಉಕ್ಕು ಮತ್ತು ಶುದ್ಧೀಕರಣ ಘಟಕದ ಹಿನ್ನಡೆ ಕಾರಣವಾಗಿತ್ತು.

ವಲಯವಾರು ಪ್ರಗತಿ

ಉಕ್ಕು ಉತ್ಪಾದನೆ ಪ್ರಗತಿ ಶೇಕಡ 8.4ಕ್ಕೆ ಹೆಚ್ಚಿದ್ದರೆ, ರಿಫೈನರಿ ಉತ್ಪನ್ನಗಳ ಪ್ರಗತಿ ಪ್ರಮಾಣ 7.5ರಷ್ಟಿದೆ. ಕಲ್ಲಿದ್ದಲು ಉತ್ಪಾದನೆ 2017 ಅಕ್ಟೊಬರ್ನಲ್ಲಿ 3.9 ಪ್ರಗತಿ ಕಂಡಿದ್ದರೆ, 2017 ಸೆಪ್ಟೆಂಬರ್ನಲ್ಲಿ ಪ್ರಮಾಣ 10.4 ಆಗಿತ್ತು. ಸಿಮೆಂಟ್ ಉತ್ಪಾದನೆ 2017 ಸೆಪ್ಟೆಂಬರ್ನಲ್ಲಿ ಶೇಕಡ 0.1 ಇದ್ದುದು ಇದೀಗ ಶೇಕಡ 2.7ರಷ್ಟು ಇಳಿಕೆ ದಾಖಲಿಸಿದೆ. ಕಚ್ಚಾ ತೈಲ ಉತ್ಪಾದನೆ ಕೂಡಾ 2017 ಅಕ್ಟೋಬರ್ನಲ್ಲಿ ಶೇಕಡ 0.4ರಷ್ಟು ಇಳಿಕೆ ಕಂಡಿದೆ.

ಪ್ರಬಲವಾದ ಪ್ರಮುಖ ವಲಯಗಳ ಪ್ರಗತಿಯು, ಅಧಿಕ ಕೈಗಾರಿಕಾ ಉತ್ಪಾದನೆಯನ್ನು 2017 ಅಕ್ಟೋಬರ್ನಲ್ಲಿ ಸೂಚಿಸುತ್ತದೆ. ಇದು ದೇಶದ ಆರ್ಥಿಕತೆ ವೇಗ ಪಡೆಯುತ್ತಿರುವುದನ್ನು ಸೂಚಿಸುತ್ತದೆ ಹಾಗೂ ಮೊದಲ ತ್ರೈಮಾಸಿಕದ ನಿರಾಶಾದಾಯಕ ಫಲಿತಾಂಶವನ್ನು ಮರೆಯಲು ಸಹಕಾರಿಯಾಗಲಿದೆ.

ಪ್ರಮುಖ ಕೈಗಾರಿಕಾ ವಲಯ

ಪ್ರಮುಖ ವಲಯದ ಉದ್ದಿಮೆಗಳನ್ನು ಮಹತ್ವದ ಕೈಗಾರಿಕೆಗಳು ಎಂದು ಪರಿಗಣಿಸಬಹುದು. ಬಹುತೇಕ ದೇಶಗಳಲ್ಲಿ, ಕೆಲ ನಿರ್ದಿಷ್ಟ ಉದ್ದಿಮೆಗಳು ಇತರ ಎಲ್ಲ ಕೈಗಾರಿಕೆಗಳ ಬೆನ್ನೆಲುಬು ಆಗಿರುತ್ತದೆ. ಇಂಥ ಉದ್ದಿಮೆಗಳು ಪ್ರಮುಖ ಕೈಗಾರಿಕೆಗಳು ಎನಿಸಿಕೊಳ್ಳುತ್ತವೆ. ಭಾರತದಲ್ಲಿ ಪ್ರಮುಖ ವಲಯದ ಕೈಗಾರಿಕೆಗಳೆಂದರೆ ಕಲ್ಲಿದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ, ಶುದ್ಧೀಕರಣ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್.

ವಿದ್ಯುತ್ ಕ್ಷೇತ್ರಕ್ಕೆ ಗರಿಷ್ಠ ಒತ್ತು (ಶೇಕಡ 10.32) ನೀಡಲಾಗುತ್ತದೆ. ಉಳಿದಂತೆ ಉಕ್ಕು (6.68), ಪೆಟ್ರೋಲಿಯಂ ರಿಫೈನರಿ (5.95), ಕಚ್ಚಾ ತೈಲ ಉತ್ಪಾದನೆ (5.22), ಕಲ್ಲಿದ್ದಲು ಉತ್ಪಾದನೆ (4.38), ಸಿಮೆಂಟ್ (2.41), ನೈಸರ್ಗಿಕ ಅನಿಲು ಉತ್ಪಾದನೆ (1.71) ಹಾಗೂ ರಸಗೊಬ್ಬರ ಉತ್ಪಾದನೆ ಕ್ಷೇತ್ರಕ್ಕೆ (1.25) ಒತ್ತು ನೀಡಲಾಗುತ್ತದೆ. ಎಂಟು ಪ್ರಮುಖ ಕೈಗಾರಿಕೆಗಳು ಶೇಕಡ 38ರಷ್ಟು ಒತ್ತನ್ನು ಪಡೆಯುತ್ತವೆ ಹಾಗೂ ಕೈಗಾರಿಕಾ ಉತ್ಪಾದನಾ ಸೂಚ್ಯಂಕಕ್ಕೆ ಇದನ್ನು ಪರಿಗಣಿಸಲಾಗುತ್ತದೆ.

Comment