IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಆರು ಉನ್ನತ ಶಿಕ್ಷಣ ಕೇಂದ್ರಗಳ ಸಂಶೋಧನಾ ಮೂಲಸೌಕರ್ಯ ಹೆಚ್ಚಳಕ್ಕೆ ಅನುಮೋದನೆ

ಆರು ಉನ್ನತ ಶಿಕ್ಷಣ ಕೇಂದ್ರಗಳ ಸಂಶೋಧನಾ ಮೂಲಸೌಕರ್ಯ ಹೆಚ್ಚಳಕ್ಕೆ ಅನುಮೋದನೆ

ಹೈಯರ್ ಎಜ್ಯುಕೇಶನ್ ಫಂಡಿಂಗ್ ಏಜೆನ್ಸಿ (ಎಚ್ಇಎಫ್) 2066 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಆರು ಉನ್ನತ ಶಿಕ್ಷಣ ಸಂಸ್ಥೆಗಳ ಸಂಶೋಧನಾ ಮೂಲಸೌಕರ್ಯವನ್ನು ಹೆಚ್ಚಿಸುವ ಮತ್ತು ಜಾಗತಿಕಮಟ್ಟಕ್ಕೆ ಅದನ್ನು ಏರಿಸುವ ಯೋಜನೆಗೆ ಅನುಮೋದನೆ ನೀಡಿದೆ. ಆರು ಸಂಸ್ಥೆಗಳೆಂದರೆ, ಮುಂಬೈ, ದೆಹಲಿ, ಮದ್ರಾಸ್, ಖರಗಪುರ, ಕಾನ್ಪುರ ಐಐಟಿ ಹಾಗೂ ಸುರತ್ಕಲ್ ಎನ್ಐಟಿಕೆ.

ಕುರಿತ ನಿರ್ಧಾರವನ್ನು ಎಚ್ಇಎಫ್ 2ನೇ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಮಂಜೂರಾತಿ ನೀಡಲಾಗಿರುವ ವಿಶೇಷ ಅನುದಾನವು, ಸರ್ಕಾರ ಈಗಾಗಲೇ ಐಐಟಿ ಸಂಸ್ಥೆಗಳಿಗೆ ನೀಡುತ್ತಿರುವ ಅನುದಾನದ ಜತೆಗೆ ಹೆಚ್ಚುವರಿ ಅನುದಾನವಾಗಿರುತ್ತದೆ.

ಎಚ್ಇಎಫ್

ಉನ್ನತ ಶಿಕ್ಷಣ ಅನುದಾನ ಏಜೆನ್ಸಿ (ಎಚ್ಇಎಫ್) 2016 ಸೆಪ್ಟೆಂಬರ್ನಲ್ಲಿ ಆರಂಭವಾಗಿದೆ. ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೀಡುವ ಮಾಮೂಲಿ ಅನುದಾನದ ಜತೆಗೆ ಹೆಚ್ಚುವರಿ ಅನುದಾನವನ್ನು ಒದಗಿಸುವ ಸಲುವಾಗಿ ವಿಶೇಷ ಸಂಸ್ಥೆಯನ್ನು ಆರಂಭಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಇದು 2000 ಕೋಟಿ ರೂಪಾಯಿಗಳ ಅಧಿಕೃತ ಬಂಡವಾಳವನ್ನು ಹೊಂದಿದ್ದು, 1000 ಕೋಟಿ ರೂಪಾಯಿ ಸರ್ಕಾರಿ ಪಾಲು ಇದರಲ್ಲಿದೆ.

ಇದು ಲಾಭರಹಿತ ಸಂಸ್ಥೆಯಾಗಿದ್ದು, ಮಾರುಕಟ್ಟೆಯಿಂದ ಅನುದಾನವನ್ನು ಕ್ರೋಢೀಕರಿಸಿ, ಇದಕ್ಕೆ ಪೂರಕವಾಗಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ದೇಣಿಗೆಗಳನ್ನಯ ಪಡೆದು ಕಾರ್ಯ ನಿರ್ವಹಿಸುತ್ತದೆ. ಅನುದಾನವನ್ನು ದೇಶದ ಅತ್ಯುನ್ನತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ನೆರವು ನೀಡಲು ಬಳಸಲಾಗುತ್ತದೆ.

ಎಚ್ಇಎಫ್ ಕಾರ್ಯವಿಧಾನ

ಎಚ್ಇಎಫ್ ಎನ್ನುವುದು ವಿನೂತನ ಅನುದಾನ ನೀಡಿಕೆ ಸಂಸ್ಥೆಯಾಗಿದ್ದು, ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಒದಗಿಸುತ್ತದೆ ಹಾಗೂ ಇಂಥ ಹರಿವು ಸರಾಗವಾಗಿರುವಂತೆ ನೋಡಿಕೊಳ್ಳುವುದು ಇದರ ಉದ್ದೇಶ. ಯೋಜನೆಯಡಿ, ಎಲ್ಲ ಸಂಸ್ಥೆಗಳು ಆಂತರಿಕವಾಗಿ ಗಳಿಸಿದ ಸಂಪನ್ಮೂಲದ ಒಂದು ಭಾಗವನ್ನು ಸಂಶೋಧನೆ ಮೂಲಸೌಕರ್ಯ ಅಭಿವೃದ್ಧಿಗೆ ಮೀಸಲಿಡಬೇಕಾಗುತ್ತದೆ.

ಇದು ಸಾಲ ಪಡೆಯಲು ಮೂಲವನ್ನು ಒದಗಿಸಲಿದ್ದು, ಸಂಶೋಧನಾ ಆಸ್ತಿಗಳನ್ನು ಸೃಷ್ಟಿಸುವ ಸಲುವಾಗಿ ಅಗತ್ಯ ಬಂಡವಾಳವನ್ನು ಇದು ಒದಗಿಸಲಿದೆ. ಇದರ ಮುಖ್ಯ ಭಾಗವು ಕೇಂದ್ರಗಳು ನೀಡುವ ಹಣ ಮತ್ತು ಸರ್ಕಾರದ ಮೊತ್ತದ ಮೇಲಿನ ಬಡ್ಡಿ ಆಗಿರುತ್ತದೆ. ಉದಾಹರಣೆಗೆ ಸಂಸ್ಥೆಯು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಬಡ್ಡಿರಹಿತ ಸಾಲವನ್ನು ಒದಗಿಸುತ್ತದೆ ಹಾಗೂ ವಿಶ್ವದರ್ಜೆಯ ಸಂಶೋಧನಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ನೆರವಾಗುತ್ತದೆ.

ಎಚ್ಇಎಫ್ ಕಾರ್ಯಾಚರಣೆ

ಎಚ್ಇಎಫ್ ಕಂಪನಿಗಳ ಕಾಯ್ದೆಯಡಿ ಸೆಕ್ಷನ್-8 ಕಂಪನಿಯಾಗಿ 2017 ಮೇ ತಿಂಗಳಲ್ಲಿ ನೋಂದಣಿಯಾಗಿದೆ. ಕಂಪನಿಯನ್ನು ಆರಂಭಿಸಲು ಕೆನರಾ ಬ್ಯಾಂಕನ್ನು ಪಾಲುದಾರ ಸಂಸ್ಥೆಯಾಗಿ ನಿಯೋಜಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಇದಕ್ಕೆ ಆರ್ಬಿಐ ಕಾಯ್ದೆಯ ಅನ್ವಯ ಬ್ಯಾಂಕೇತರ ಹಣಕಾಸು ಕಂಪನಿಯಾಗಿ ಕಾರ್ಯ ನಿರ್ವಹಿಸಲು 2017 ನವೆಂಬರ್ನಲ್ಲಿ ಅನುಮತಿ ನೀಡಿದೆ. ಜತೆಗೆ ಷೇರು ಮೂಲಕ ಬಂಡವಾಳ ಕ್ರೋಢಿಕರಿಸಲು ಮತ್ತು ಮಾರುಕಟ್ಟೆ ಅಗತ್ಯತೆಗಳಿಗೆ ಅನುಗುಣವಾಗಿ ಷೇರು ಮಾರುಕಟ್ಟೆಯಲ್ಲಿ ಕಾರ್ಯ ನಿರ್ವಹಿಸಲು ಇದು ಪೂರಕವಾಗಿ ಕೆಲಸ ಮಾಡಲಿದೆ.

Comment