New KAS prelims batch starts from 6th August 2018 - For registration Contact: 9686664983/9845512052. Admission Open for Universal School of Admission (B.A & B.com with IAS/KAS Integrated Coaching) Contact - 9686664985/080-46568844

ನೌಕಾ ಸಹಕಾರ: ಭಾರತ- ಸಿಂಗಾಪುರ ಒಪ್ಪಂದ

ನೌಕಾ ಸಹಕಾರ: ಭಾರತ- ಸಿಂಗಾಪುರ ಒಪ್ಪಂದ

ಭಾರತ ಹಾಗೂ ಸಿಂಗಾಪುರ ನೌಕಾಪಡೆಗಳ ನಡುವೆ ಪರಸ್ಪರ ಸಹಕಾರವನ್ನು ವೃದ್ಧಿಸುವ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಮಾಡಿವೆ. ಒಪ್ಪಂದದ ಅನ್ವಯ ಭಾರತೀಯ ನೌಕಾಪಡೆ ಲಾಜಿಸ್ಟಿಕ್ ಬೆಂಬಲವನ್ನು ಸಿಂಗಾಪುರದಿಂದ ಪಡೆಎಯಲಿದೆ. ಸಿಂಗಾಪುರದ ಚಾಂಗಿ ನೌಕಾನೆಲೆಯಲ್ಲಿ ಭಾರತೀಯ ನೌಕಾಪಡೆ ಹಡಗುಗಳಿಗೆ ಇಂಧನ ಭರ್ತಿ ವ್ಯವಸ್ಥೆ ಕಲ್ಪಿಸುವುದು ಕೂಡಾ ಇದರಲ್ಲಿ ಸೇರಿದೆ. ವಿವಾದಿತ ದಕ್ಷಿಣ ಚೀನಾ ಸಮುದ್ರದ ಬಳಿ ನೌಕಾ ನೆಲೆ ಇದೆ.

ನವದೆಹಲಿಯಲ್ಲಿ ನಡೆದ ಭಾರತ ಹಾಗೂ ಸಿಂಗಾಪುರ ರಕ್ಷಣಾ ಸಚಿವ ಎರಡನೇ ಸಂವಾದದ ವೇಳೆ ಒಪ್ಪಂದಕ್ಕೆ ಸಹಿ ಮಾಡಿರುವುದನ್ನು ಘೋಷಿಸಲಾಯಿತು.

ಪ್ರಮುಖ ಅಂಶಗಳು

ನೌಕಾಪಡೆಗಳ ನಡುವೆ ಸಹಕಾರ ಹೆಚ್ಚಿಸುವ ದ್ವಿಪಕ್ಷೀಯ ಒಪ್ಪಂದದ ಅನ್ವಯ, ವಿವಾದಿತ ದಕ್ಷಿಣ ಚೀನಾ ಸಮುದ್ರ ಪ್ರದೇಶದ ಮೂಲಕ ಹಾದುಹೋಗುವ ಭಾರತೀಯ ನೌಕಾಪಡೆಯ ಹಡಗುಗಳು ಅಗತ್ಯಬಿದ್ದರೆ ಸಿಂಗಾಪುರದ ಚಾಂಗಿ ನೌಕಾ ನೆಲೆಯಲ್ಲಿ ನಿಲುಗಡೆ ಮಾಡಲು ಅವಕಾಶವಿದೆ. ಭಾರತೀಯ ನೌಕಾಪಡೆಯು ನೇರವಾಗಿ ಸಿಂಗಾಪುರ ಅಧಿಕಾರಿಗಳ ಜತೆ ಮಾತುಕತೆ ನಡೆಸಿ, ಅವರ ಸೌಲಭ್ಯಗಳನ್ನು ಬಳಸಿಕೊಳ್ಳಲು ಇದರಿಂದ ಅವಕಾಶವಾಗಲಿದೆ. ಪ್ರಸ್ತುತ ಇದಕ್ಕೆ ರಾಜಕೀಯ ಕ್ಲಿಯರೆನ್ಸ್ ಪಡೆಯುವುದೂ ಸೇರಿದಂತೆ ಸುಧೀರ್ಘ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತಿದೆ. ಹೊಸ ಒಪ್ಪಂದದ ಅನ್ವಯ ನೀತಿ ಬದಲಾಗಲಿದೆ.

ಮಹತ್ವ

ನೌಕಾ ಸಾಗಾಣಿಕೆ ಒಪ್ಪಂದವು ಪೌರಾತ್ಯ ರಾಷ್ಟ್ರಗಳ ಜತೆ ಭಾರತ ಮಾಡಿಕೊಂಡಿರುವ ಮೊಟ್ಟಮೊದಲ ಒಪ್ಪಂದವಾಗಿದೆ. ಆಯಕಟ್ಟಿನ ಹಾಗೂ ಪ್ರಮುಖ ಮಾರ್ಗವಾದ ಮಲಾಕಾ ಮಾರ್ಗದಲ್ಲಿ ಬರುವ ಪ್ರದೇಶದಲ್ಲಿ ಭಾರತ ಸೌಲಭ್ಯವನ್ನು ಹೊಂದುವುದು ಇದರಿಂದ ಸಾಧ್ಯವಾಗಲಿದೆ. ಸಿಂಗಾಪುರ ಆಯಕಟ್ಟಿನ ಪ್ರದೇಶದಲ್ಲಿದ್ದು, ಪ್ರಮುಖ ಅಂತರರಾಷ್ಟ್ರೀಯ ಸಾಗರ ಮಾರ್ಗದಲ್ಲಿದೆ. ಸ್ಟೈಟ್ಸ್ ಆಫ್ ಸಿಂಗಾಪುರ ಹಾಗು ಮಲಾಕ್ಕಾ ಎರಡು ಪ್ರಮುಖ ಮಾರ್ಗಗಳಾಗಿವೆ. ಇದು ಪೆಸಿಫಿಕ್ ಹಾಗೂ ಹಿಂದೂಮಹಾಸಾಗರವನ್ನು ಸಂಪರ್ಕಿಸುತ್ತದೆ ಹಾಗೂ ಆರ್ಥಿಕವಾಗಿ ಕೂಡಾ ಮಹತ್ವದ ಮಾರ್ಗವಾಗಿದೆ. ಇದು ಅಂತರರಾಷ್ಟ್ರೀಯ ಸಂವಹನ, ಸಾರಿಗೆ ಮತ್ತು ವ್ಯಾಪಾರ ಸೌಲಭ್ಯವನ್ನು ಆಗ್ನೇಯ ಏಷ್ಯಾ ದೇಶಗಳಿಗೆ ಒದಗಿಸುವ ಕೇಂದ್ರವಾಗಿ ಇದು ಕಾರ್ಯನಿರ್ವಹಿಸುತ್ತದೆ. ಭಾರತದ ಅತಿ ಸನಿಹದ ನೆಲೆ ಇರುವುದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ.

ಒಪ್ಪಂದದಿಮದಾಗಿ ಸಾಗರ ಭದ್ರತೆ ವಿಚಾರದಲ್ಲಿ ಉಭಯ ದೇಶಗಳ ನಡುವೆ ಹೆಚ್ಚಿನ ಸಹಕಾರ ಏರ್ಪಡಲಿದ್ದು, ಜಂಟಿ ಕಾರ್ಯಾಚರಣೆ, ಭಾರತ ಹಾಗೂ ಸಿಂಗಾಪುರ ನಡುವೆ ತಾತ್ಕಾಲಿಕ ನಿಯೋಜನೆಯಂಥ ಅಂಶಗಳನ್ನು ಕೂಡಾ ಒಳಗೊಳ್ಳಲಿದೆ. ಚಾಂಗಿ ನೌಕಾ ನೆಲೆಯು ಭಾರತದ ನೌಕಾಪಡೆಯ ಕಾರ್ಯಾಚರಣೆ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಮಹತ್ವದ್ದಾಗಲಿದೆ. ಇದು ನೌಕಾ ಹಡಗುಗಳ ಸಂರಕ್ಷಣೆ, ಸರಬರಾಜು, ರಿಪೇರಿ ವ್ಯವಸ್ಥೆ, ಆಡಳಿತಾತ್ಮಕ ಹಾಗೂ ಲಾಜಿಸ್ಟಿಕ್ ಸೇವೆಗಳನ್ನು ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಇದು ಭಾರತದ ಮಹತ್ವಾಕಾಂಕ್ಷಿ ಪೂರ್ವದತ್ತ ದೃಷ್ಟಿ ಹರಿಸುವ ಯೋಜನೆಗೆ ಪೂರಕವಾಗಿದ್ದು, ಸುರಕ್ಷತೆ, ಸುಭದ್ರತೆ, ಪ್ರಾದೇಶಿಕ ಶಾಂತಿ ಮತ್ತು ಸಾಗರಯಾನ ಸ್ವಾತಂತ್ರ್ಯವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ನೆರವಾಗಲಿದೆ.

Comment