Universal School Of Administration Integrated Degree college Admission Open for more details contact: 9686664985

ಸ್ವಚ್ಛಸಮುದ್ರ: ಕೋಸ್ಟ್ಗಾರ್ಡ್ನಿಂದ ತೈಲ ಮಾಲಿನ್ಯ ಸ್ಪಂದನೆ ಕಾರ್ಯಾಚರಣೆ

ಸ್ವಚ್ಛಸಮುದ್ರ: ಕೋಸ್ಟ್ಗಾರ್ಡ್ನಿಂದ ತೈಲ ಮಾಲಿನ್ಯ ಸ್ಪಂದನೆ ಕಾರ್ಯಾಚರಣೆ

ಇಂಡಿಯನ್ ಕೋಸ್ಟ್ಗಾರ್ಡ್ ವತಿಯಿಂದ ಪ್ರಾದೇಶಿಕ ಮಟ್ಟದ ಸಾಗರ ತೈಲ ಮಾಲಿನ್ಯ ಸ್ಪಂದನೆ ಕಾರ್ಯಾಚರಣೆ, 'ಕ್ಲೀನ್ ಸೀ-2017' ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪೋರ್ಟ್ಬ್ಲೇರ್ ಬಳಿ ನಡೆಯಿತು.

ಕಾರ್ಯಾಚರಣೆಯ ಮುಖ್ಯ ಉದ್ದೇಶವೆಂದರೆ, ಭಾರತೀಯ ಕರಾವಳಿ ಕಾವಲು ಪಡೆಯನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿ ಇಡುವುದು. ಸಂಪನ್ಮೂಲ ಏಜೆನ್ಸಿಗಳು ಹಾಗೂ ಇತರ ಹಕ್ಕುದಾರರು ದೊಡ್ಡ ಪ್ರಮಾಣದ ತೈಲ ಸೋರಿಕೆಯಾದ ಸಂದರ್ಭದಲ್ಲಿ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಮಾಡುವುದು ಇದರ ಉದ್ದೇಶ. ರಾಷ್ಟ್ರೀಯ ತೈಲ ಸೋರಿಕೆ ವಿಕೋಪ ತುರ್ತು ಯೋಜನೆ (ಎನ್ಓಎಸ್-ಡಿಸಿಪಿ)ಯಡಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಚರಣೆಯ ಅಗತ್ಯತೆ

ನಿಕೋಬಾರ್ ದ್ವೀಪ ಮತ್ತು ಉತ್ತರ ಸುಮಾತ್ರಾ ನಡುವಿನ ಗ್ರೇಟ್ ಚಾನೆಲ್ ಮುಂದೆ ಹೈಸೀಯ ಮಲಾಕ್ಕಾ ಸ್ಟ್ರೈಟ್ಗೆ ಸಂಪರ್ಕ ಕಲ್ಪಿಸುತ್ತದೆ. 160 ಕಿಲೋಮೀಟರ್ ಉದ್ದದ ಕಾಲುವೆಯಲ್ಲಿ 200ಕ್ಕೂ ಹೆಚ್ಚು ಹಡಗುಗಳು ಓಡಾಡುತ್ತವೆ ಹಾಗೂ ಇದು ವಿಶ್ವದ ಅತ್ಯಂತ ಸಂಚಾರ ದಟ್ಟಣೆಯ ಸಾಗರ ಮಾರ್ಗ ಎನಿಸಿಕೊಂಡಿದೆ. ಮಾರ್ಗದಲ್ಲಿ ದೊಡ್ಡ ಪ್ರಮಾಣದಲ್ಲಿ ತೈಲ ಟ್ಯಾಂಕರ್ಗಳ ಸಾಗಾಟ ಇರುವುದರಿಂದ ತೈಲ ಸೋರಿಕೆ ಸಾಧ್ಯತೆ ಮಾರ್ಗದಲ್ಲಿ ಅತ್ಯಧಿಕ. ಹಿನ್ನೆಲೆಯಲ್ಲಿ ತೈಲ ಸೋರಿಕೆ ಸ್ಪಂದನೆಯ ರಾಷ್ಟ್ರೀಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಅನಿವಾರ್ಯವಾಗಿದೆ.

ಕ್ಲೀನ್ಸೀ-2017 ಪ್ರಮುಖ ಅಂಶಗಳು

ಕಾರ್ಯಾಚರಣೆಯ ಮುಖ್ಯ ಉದ್ದೇಶವೆಂದರೆ ತೈಲ ಸೋರಿಕೆಯಂಥ ದುರಂತಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಬಳಿ ಸಂಭವಿಸಿದಲ್ಲಿ ಅದಕ್ಕೆ ತುರ್ತು ಸ್ಪಂದನೆ ನೀಡಲು ನಮ್ಮ ಕರಾವಳಿ ಕಾವಲು ಪಡೆ ಎಷ್ಟರಮಟ್ಟಿಗೆ ಸಜ್ಜಾಗಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಕಾರ್ಯಾಚರಣೆಯ ಮುಖ್ಯ ಉದ್ದೇಶ. ಕಾರ್ಯಾಚರಣೆಯನ್ನು ಎರಡು ಹಂತಗಳಲ್ಲಿ ಕೈಗೊಳ್ಳಲಾಗಿದ್ದು, ಎಲ್ಲ ಹಕ್ಕುದಾರ ಸಂಸ್ಥೆಗಳ ಬೆಂಬಲ ಮತ್ತು ಸಹಕಾರವನ್ನು ಪಡೆಯುವುದು ಇದರ ಉದ್ದೇಶ. ಪರಿಸರಾತ್ಮಕವಾಗಿ ಸೂಕ್ಷ್ಮ ಪ್ರದೇಶದಲ್ಲಿ ತೈಲ ಸೋರಿಕೆಯಂಥ ಅಪಘಾತಗಳನ್ನು ತಡೆಯುವುದು ಇದರ ಪ್ರಮುಖ ಗುರಿಯಾಗಿದೆ.

ಕಾರ್ಯಾಚರಣೆಯಲ್ಲಿ ಕರಾವಳಿ ಕಾವಲು ಪಡೆಯ ಮಾಲಿನ್ಯ ನಿಯಂತ್ರಣ ಹಡಗು ಮತ್ತು ಐಸಿಜಿ ಡೋರ್ನಿಯರ್/ ಚೇತಕ್ ವಿಮಾನವನ್ನು ತೈಲ ಸೋರಿಕೆ ವಿಕೋಪನಿರ್ವಹಣೆ ವ್ಯವಸ್ಥೆಗೆ ಬಳಸಲಾಗಿದೆ. ತೈಲ ಸೋರಿಕೆಯ ಪ್ರಮಾಣ ಹಾಗೂ ತೀವ್ರತೆಯನ್ನು ಮೌಲ್ಯಮಾಪನ ಮಾಡುವ ಸಲುವಾಗಿ ವೈಮಾನಿಕ ಸಮೀಕ್ಷೆ ನಡೆಸುವುದು ಕೂಡಾ ಇದರಲ್ಲಿ ಸೇರಿದೆ.

ಹಿನ್ನೆಲೆ

ಭಾರತೀಯ ಕರಾವಳಿ ಕಾವಲು ಪಡೆಎಯು ರಕ್ಷಣಾ ಸಚಿವಾಲಯದಡಿ ಕಾರ್ತ ನಿರ್ವಹಿಸುತ್ತಿದ್ದು, ದೇಶದ ಸಾಗರ ಪರಿಸರ ಸಂರಕ್ಷಣೆಯ ಗುರಿಯನ್ನು ಹೊಂದಿದೆ. ಇದು ಭಾರತೀಯ ಜಲಪ್ರದೇಶದಲ್ಲಿ ತೈಲ ಸೋರಿಕೆಗೆ ತುರ್ತು ಸ್ಪಂದನೆಗೆ ವ್ಯವಸ್ಥೆ ಮಾಡುವುದು ಇದರ ಮುಖ್ಯ ಕಾರ್ಯವಾಗಿದೆ. ಇದನ್ನು ರಾಷ್ಟ್ರೀಯ ತೈಲ ಸೋರಿಕೆ ವಿಕೋಪ ತುರ್ತು ಯೋಜನೆಯಡಿ ರೂಪಿಸಲಾಗಿದ್ದು, ಮುಂಬೈ, ಚೆನ್ನೈ ಹಾಗೂ ಪೋರ್ಟ್ಬ್ಲೇರ್ನಲ್ಲಿ ಮೂರು ಮಾಲಿನ್ಯ ಸ್ಪಂದನೆ ಕೇಂದ್ರಗಳನ್ನು ರಚಿಸಲಾಗಿದೆ.

Comment