Universal School Of Administration Integrated Degree college Admission Open for more details contact: 9686664985

ಮೀರಾಬಾಯಿ ಚಾನುಗೆ ವಿಶ್ವ ವೆಯ್ಟ್ಲಿಫ್ಟಿಂಗ್ ಚಿನ್ನ

ಮೀರಾಬಾಯಿ ಚಾನುಗೆ ವಿಶ್ವ ವೆಯ್ಟ್ಲಿಫ್ಟಿಂಗ್ ಚಿನ್ನ

ಭಾರತದ ಸೈಖೋಮ್ ಮೀರಾಬಾಯಿ ಚಾನು ಅವರು ವಿಶ್ವ ವೆಯ್ಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅಮೆರಿಕದ ಅನಹೀಮ್ನಲ್ಲಿ ನಡೆದ ಚಾಂಪಿಯನ್ಶಿಪ್ 48 ಕೆಜಿ ವಿಭಾಗದಲ್ಲಿ 194 ಕೆಜಿ- 85 ಕೆಜಿ ಸ್ನ್ಯಾಚ್ ಹಾಗೂ 109 ಕೆಜಿ ಕ್ಲೀನ್ ಜೆರ್ಕ್- ಭಾರ ಎತ್ತಿ ನೂತನ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು. ಥಾಯ್ಲೆಂಡಿನ ಸುಕೋರಿಯನ್ ಥುನ್ಯಾ 193 ಕೆಜಿ ಭಾರ ಎತ್ತಿ ಬೆಳ್ಳಿ ಪದಕ ಪಡೆದರು. ಸೆಗುರಾ ಅನಾ ಐರಿಸ್ 182 ಕೆಜಿ ಎತ್ತಿ ಕಂಚಿನ ಪದಕ ಪಡೆದರು.

ಗೆಲುವಿನೊಂದಿಗೆ ಮೀರಾಬಾಯಿ ಚಾನು ಅವರು ಕಳೆದ ಎರಡು ವರ್ಷದಲ್ಲಿ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದ ಮೊಟ್ಟಮೊದಲ ಭಾರತೀಯ ಮಹಿಳೆ ಎನಿಸಿಕೊಂಡರು. ಕರ್ಣಂ ಮಲ್ಲೇಶ್ವರಿ ಅವರು ಸಾಧನೆ ಮಾಡಿದ ಮೊದಲ ಮಹಿಳೆಯಾಗಿದ್ದು, ಬಳಿಕ ವಿಶ್ವ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿರುವ ಕರ್ಣಂ ಮಲ್ಲೇಶ್ವರಿ 1994 ಹಾಗೂ 1995ರಲ್ಲಿ ಚಿನ್ನದ ಪದಕ ಸಾಧನೆ ಮಾಡಿದ್ದರು.

ಸೈಖೋಮ್ ಮೀರಾಬಾಯಿ ಚಾನು

ಸೈಖೋಮ್ ಮೀರಾಬಾಯಿ ಚಾನು ಭಾರತೀಯ ಮಹಿಳಾ ವೈಯ್ಟ್ಲಿಫ್ಟರ್ ಆಗಿದ್ದು, 1994 ಆಗಸ್ಟ್ 8ರಂದು ಜನಿಸಿದರು. ಇವರು ಮೂಲತಃ ಮಣಿಪುರದವರಾಗಿದ್ದು, ಭಾರತೀಯ ರೈಲ್ವೆಯಲ್ಲಿ ಉದ್ಯೋಗದಲ್ಲಿದ್ದಾರೆ. ಇವರು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕಗಳನ್ನು ಗೆದ್ದಿದ್ದರು. ಗಾಸ್ಗೊದಲ್ಲಿ 2014ರಲ್ಲಿ ನಡೆದ 48 ಕೆಜಿ ವಿಭಾಗದಲ್ಲಿ ಬೆಳ್ಳಿಪದಕ ಗೆದ್ದಿದ್ದರು. 2016 ರಿಯೊ ಒಲಿಂಪಿಕ್ಸ್ಗೆ 48 ಕೆಜಿ ವಿಭಾಗದಲ್ಲಿ ಅರ್ಹತೆ ಸಂಪಾದಿಸಿದ್ದರು. ಆದರೆ ಸ್ಪರ್ಧೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಕ್ಲೀನ್ ಮತ್ತು ಜೆರ್ಕ್ ವಿಭಾಗಗಳಲ್ಲಿ ಮೂರೂ ಪ್ರಯತ್ನಗಳಲ್ಲಿ ಭಾರ ಎತ್ತಲು ವಿಫಲರಾಗಿದ್ದರು.

Comment