Universal School Of Administration Integrated Degree college Admission Open for more details contact: 9686664985

ಭಾರತಕ್ಕೆ 20 ಶತಕೋಟಿ ಡಾಲರ್ ಸಾಲ ನೀಡಲು ಎಡಿಬಿ ಒಪ್ಪಿಗೆ

ಭಾರತಕ್ಕೆ 20 ಶತಕೋಟಿ ಡಾಲರ್ ಸಾಲ ನೀಡಲು ಎಡಿಬಿ ಒಪ್ಪಿಗೆ

ಭಾರತಕ್ಕೆ ಮುಂದಿನ ವರ್ಷದಿಂದ ಹಾಲಿ ಇರುವ 2.7 ಶತಕೋಟಿ ಡಾಲರ್ ಬದಲಾಗಿ ವಾರ್ಷಿಕ 400 ಕೋಟಿ ಡಾಲರ್ ಸಾಲ ಒದಗಿಸಲು ಬದ್ಧ ಎಂದು ಬಹುಪಕ್ಷೀಯ ಸಾಲ ನೀಡಿಕೆ ಸಂಸ್ಥೆಯಾದ ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಘೋಷಿಸಿದೆ. ಎಲ್ಲರ ಸೇರ್ಪಡೆಯ ಆರ್ಥಿಕ ವರ್ಗಾವಣೆಗೆ ಉತ್ತೇಜನ ನಿಡುವ ಸಲುವಾಗಿ ಕ್ರಮಕ್ಕೆ ಎಡಿಬಿ ಮುಂದಾಗಿದೆ.

ಎಡಿಬಿಯ ದೇಶ ಪಾಲುದಾರಿಕೆ ಕಾರ್ಯತಂತ್ರ 2018-22ರಡಿ ಬಹುಪಕ್ಷೀಯ ಸಾಲನೀಡಿಕೆ ಸಂಸ್ಥೆಯು ಭಾರತಕ್ಕೆ ವಾರ್ಷಿಕವಾಗಿ ನಾಲ್ಕು ಶತಕೋಟಿ ಡಾಲರ್ವರೆಗೆ ನೆರವು ನಿಡಲು ಮುಂದಾಗಿದೆ. ಇದರಲ್ಲಿ ನಾನ್ ಸವರಿನ್ ಹಾಗೂ ಖಾಸಗಿ ಸಾಲ ಕೂಡಾ ಸೇರಿದ್ದು, 2018-22 ಅವಧಿಯಲ್ಲಿ ಸಾಲ ಲಭ್ಯವಾಗಲಿದೆ. ಕ್ರೋಢೀಕೃತವಾಗಿ ಭಾರತ ಅತಿ ದೊಡ್ಡ ಮೊತ್ತದ ಸಾಲ ಪಡೆಯುವ ದೇಶವಾಗಲಿದ್ದು, ಐದು ವರ್ಷಗಳ ಅವಧಿಗೆ 20 ಶತಕೋಟಿ ಡಾಲರ್ ನೆರವು ಪಡೆಯಲಿದೆ.

ಪ್ರಮುಖ ಅಂಶಗಳು

ಕಾರ್ಯತಂತ್ರದಡಿ ಎಡಿಬಿಯ ವಾರ್ಷಿಕ ಸೊವರಿನ್ ಸಾಲವು ಭಾರತಕ್ಕೆ 200 ಕೋಟಿ ಡಾಲರ್ನಿಂದ 300 ಕೋಟಿ ಡಾಲರ್ಗೆ ಹೆಚ್ಚಳವಾಗಲಿದೆ. ಅಂತೆಯೇ ಖಾಸಗಿ ನೆರವು 100 ಕೋಟಿ ಡಾಲರ್ಗೆ ದ್ವಿಗುಣವಾಗಲಿದೆ. ಕಾರ್ಯತಂತ್ರದ ಇತರ ಪ್ರಧಾನ ಸ್ತಂಭಗಳೆಂದರೆ, ಕಡಿಮೆ ಆದಾಯದ ರಾಜ್ಯಗಳಿಗೆ ಮತ್ತು ಹವಾಮಾನ ಬದಲಾವಣೆ ತಡೆ ಪ್ರಯತ್ನಗಳಿಗೂ ನೆರವು ನೀಡುವುದು.

ಎಡಿಬಿಯ ಭಾರತ ನಿರ್ದೇಶಿತ ಯೋಜನೆಗಳು ದೇಶದ ಆರ್ಥಿಕ ಸ್ಪರ್ಧಾತ್ಮಕತೆಯನ್ನು ಉತ್ತೇಜಿಸುವ, ಉತ್ತಮ ವೇತನ ಇರುವ ಉದ್ಯೋಗಗಳನ್ನು ಸೃಷ್ಟಿಸುವ, ಮೂಲಸೌಕರ್ಯ ಮತ್ತು ಸೇವೆಗಳ ಲಭ್ಯತೆಯನ್ನು ಸುಧಾರಿಸುವ, ಹವಾಮಾನ ಬದಲಾವಣೆ ಸಮಸ್ಯೆಗೆ ಪರಿಹಾರ ಕಾಣಿಸುವ ಮತ್ತು ಹವಾಮಾನದ ಉತ್ತಮತೆಯನ್ನು ಐದು ವರ್ಷಗಳಲ್ಲಿ ಮುಂದುವರಿಸಿಕೊಂಡು ಹೋಗುವ ಗುರಿ ಹೊಂದಿದೆ.

ಏಷ್ಯನ್ ಅಭಿವೃದ್ಧಿ ಬ್ಯಾಂಕ್

ಎಡಿಬಿ ಒಂದು ಪ್ರಾದೇಶಿಕ ಅಭಿವೃದ್ಧಿ ಬ್ಯಾಂಕ್ ಆಗಿದ್ದು, ಇದು ಏಷ್ಯಾದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಇದು 1966ರಲ್ಲಿ ಆರಂಭವಾಗಿದೆ. ಇದರ ಕೇಂದ್ರ ಕಚೇರಿ ಫಿಲಿಫೀನ್ಸ್ ಮನಿಲಾದಲ್ಲಿದೆ. ಪ್ರಸ್ತುತ ಇದಕ್ಕೆ 67 ಸದಸ್ಯ ದೇಶಗಳಿದ್ದು, ಪೈಕಿ 48 ಏಷ್ಯನ್ ದೆಶಗಳು ಹಾಗೂ 19 ಪೆಸಿಫಿಕ್ ಹಾಗೂ ಹೊರಗಿನ ದೇಶಗಳಾಗಿವೆ.

ಎಡಿಬಿಯನ್ನು ವಿಶ್ವಬ್ಯಾಂಕ್ ಮಾದರಿಯಲ್ಲೇ ರೂಪಿಸಲಾಗಿದೆ. ವಿಶ್ವಬ್ಯಾಂಕ್ ವ್ಯವಸ್ಥೆಗೆ ಅನುಗುನವಾಗಿಯೇ ಮತದ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಸದಸ್ಯದೇಶಗಳ ಬಂಡವಾಳಕ್ಕೆ ಅನುಗುನವಾಗಿ ದೇಶಗಳ ಮತಹಕ್ಕು ನಿಗದಿಯಾಗುತ್ತದೆ. 2014 ವರೆಗೆ ಜಪಾನ್ ಅತಿಹೆಚ್ಚು ಪಾಲು ಬಂಡವಾಳವನ್ನು ಹೊಂದಿದ್ದು, ಶೇಕಡ 15.7ರಷ್ಟು ಷೇರುಗಳನ್ನು ಹೊಂದಿದೆ. ಉಳಿದಂತೆ ಅಮೆರಿಕ (15.60, ಚೀನಾ (6.5), ಭಾರತ (6.4) ಮತ್ತು ಆಸ್ಟ್ರೇಲಿಯಾ (5.8) ಪಾಲು ಹೊಂದಿವೆ.

Comment