Universal School Of Administration Integrated Degree college Admission Open for more details contact: 9686664985

ಪ್ರಧಾನಿ ನರೇಂದ್ರ ಮೋದಿ, ಇವಾಂಕ ಟ್ರಂಪ್ ಅವರಿಂದ ಜಾಗತಿಕ ಹೂಡಿಕೆದಾರರ ಶೃಂಗ

ಪ್ರಧಾನಿ ನರೇಂದ್ರ ಮೋದಿ, ಇವಾಂಕ ಟ್ರಂಪ್ ಅವರಿಂದ ಜಾಗತಿಕ ಹೂಡಿಕೆದಾರರ ಶೃಂಗ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಹಾಗೂ ಸಲಹೆಗಾರ್ತಿ ಇವಾಂಕಾ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು 8ನೇ ವಾರ್ಷಿಕ ಜಾಗತಿಕ ಹೂಡಿಕೆದಾರರ ಶೃಂಗ (ಜಿಇಎಸ್-2017)ವನ್ನು ತೆಲಂಗಾಣದ ಹೈದರಾಬಾದ್ನಲ್ಲಿ ಉದ್ಘಾಟಿಸಿದರು.

ಮೆಗಾ ಸಮಾರಂಭವನ್ನು ನೀತಿ (ನ್ಯಾಷನಲ್ ಇನ್ಸ್ಟಿಟ್ಯೂಷನ್ ಫಾರ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ) ಆಯೋಗ, ಅಮೆರಿಕ ಸರ್ಕಾರ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳು ಸಂಯುಕ್ತವಾಗಿ ಹೈದರಾಬಾದ್ನಲ್ಲಿ ಆಯೋಜಿಸಿವೆ.

ಜಿಇಎಸ್-2017 ಪ್ರಮುಖ ಅಂಶಗಳು

ಜಾಗತಿಕ ಹೂಡಿಕೆದಾರರ ಶೃಂಗವು ಉದ್ಯಮಶೀಲ ವ್ಯಕ್ತಿಗಳ ವಾರ್ಷಿಕ ಶೃಂಗವಾಗಿದ್ದು, 1000ಕ್ಕೂ ಅಧಿಕ ಮಂದಿ ಉದಯೋನ್ಮುಖ ಉದ್ಯಮಿಗಳು, ಹೂಡಿಕೆದಾರರು ಹಾಗೂ ವಿಶ್ವಾದ್ಯಂತ ವಿವಿಧ ದೇಶಗಳಿಂದ ಬರುವ ಉದ್ಯಮ ಬೆಂಬಲಿಗರು ಭಾಗವಹಿಸುತ್ತಾರೆ. ಇದನ್ನು 2010ರಿಂದೀಚೆಗೆ ಪ್ರತಿ ವರ್ಷ ಆಚರಿಸಲಾಗುತ್ತಿದೆ. ದಕ್ಷಿಣ ಏಷ್ಯಾದಲ್ಲಿ ಶೃಂಗಸಭೆ ನಡೆಯುತ್ತಿರುವುದು ಇದೇ ಮೊದಲು.

2017 ಜಿಇಎಸ್ ತಿರುಳು, "ವುಮನ್ ಫಸ್ಟ್, ಪ್ರಾಸ್ಪೆರಿಟಿ ಫಾರ್ ಆಲ್" ಎಂದಾಗಿದೆ. ಎಲ್ಲ ಬಲ, ವೈವಿಧ್ಯತೆ ಮತ್ತು ಪರಿಪೂರ್ಣತೆಯ ಮೂಲಕ ಉದ್ಯಮಶೀಲತೆಯನ್ನು ಬೆಳೆಸುವುದು ಇದರ ಉದ್ದೇಶ. 160 ದೇಶಗಳ 1500 ಮಂದಿ ಪ್ರತಿನಿಧಿಗಳು 2017 ಜಿಇಎಸ್ನಲ್ಲಿ ಭಾಗವಹಿಸಿದ್ದಾರೆ.

ಜಿಇಎಸ್-2017 ಮುಖ್ಯ ಉದ್ದೇಶವೆಂದರೆ, ಭಾರತೀಯ ಉದ್ಯಮಶೀಲರನ್ನು ಸಬಲೀಕರಿಸುವುದು. ಇದಕ್ಕಾಗಿ ಅವರ ಹೊಸ ಯೋಚನೆಗಳನ್ನು ಬೆಂಬಲಿಸುವುದು, ಪಾಲುದಾರಿಕೆಯನ್ನು ಅಭಿವೃದ್ಧಿಪಡಿಸುವುದು, ಹಣಕಾಸು ನೆರವು, ವಿನೂತನ ಉತ್ಪನ್ನಗಳ ಸೃಷ್ಟಿ ಮತ್ತು ಸೇವೆಗಳ ಮೂಲಕ ಸಮಾಜವನ್ನು ಉನ್ನತಿಗೆ ಒಯ್ಯುವ ನಿಟ್ಟಿನಲ್ಲಿ ಬೆಂಬಲ ನೀಡುವುದು. ಇದು ಜಾಗತಿಕ ಮಟ್ಟದ ಅತ್ಯುತ್ತಮ ಕಾರ್ಯವಿಧಾನಗಳನ್ನು ಭಾರತಕ್ಕೆ ತರುವುದು ಮಾತ್ರವಲ್ಲದೇ ಜಾಗತಿಕ ಉದ್ಯಮಶೀಲ ಪರಿಸರದಲ್ಲಿ ಭಾರತಕ್ಕೆ ಅದ್ವಿತೀಯ ಸ್ಥಾನವನ್ನು ಸ್ಥಾಪಿಸಿಕೊಡುವ ಗುರಿಯನ್ನು ಹೊಂದಿದೆ.

ಜಿಇಎಸ್-2017 ನಾಲ್ಕು ಪ್ರಮುಖ ಗಮನ ಹರಿಸುವ ಕ್ಷೇತ್ರಗಳೆಂದರೆ, ಡಿಜಿಟಲ್ ಆರ್ಥಿಕತೆ ಮತ್ತು ಹಣಕಾಸು ತಂತ್ರಜ್ಞಾನ, ಆರೋಗ್ಯ ಕ್ಷೇತ್ರ ಮತ್ತು ಜೀವವಿಜ್ಞಾನ, ವಿದ್ಯುತ್ ಮತ್ತು ಮೂಲಸೌಕರ್ಯ ಹಾಗೂ ಮಾಧ್ಯಮ ಮತ್ತು ಮನೋರಂಜನೆ. ಶೃಂಗಸಭೆಯಲ್ಲಿ ನಾಲ್ಕು ಪ್ರಮುಖ ವಲಯಗಳ ಬಗ್ಗೆ ಚರ್ಚೆ ಹಾಗೂ ಸಂವಾದಗಳು ನಡೆಯಲಿವೆ. ಇದು ಉದ್ಯಮಶೀಲತೆಯ ಪ್ರಮುಖ ಆಯಾಮಗಳ ಬಗ್ಗೆ ಗಮನ ಹರಿಸಲಿದ್ದು, ಗಣ್ಯರು ಮತ್ತು ಪ್ರೇಕ್ಷಕರ ನಡುವಿನ ಸಂವಾದಕ್ಕೂ ಅವಕಾಶ ಕಲ್ಪಿಸಿದೆ.

Comment