IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಗೋವಾದಲ್ಲಿ 48ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

ಗೋವಾದಲ್ಲಿ 48ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

48ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‍ಎಫ್‍ಐ) ಗೋವಾದ ರಾಜಧಾನಿ ಪಣಜಿಯಲ್ಲಿ ನಡೆಯಿತು. ಬಂಬೋಲಿಮ್‍ನಲ್ಲಿರುವ ಶ್ಯಾಮ್‍ಪ್ರಸಾದ್ ಮುಖರ್ಜಿ ಕ್ರಿಡಾಂಗಣದಲ್ಲಿ ಸಮರೋಪ ಸಮಾರಂಭ ನಡೆಯಿತು.

ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರಿಗೆ 2017ನೇ ಸಾಳಿನ ಅತ್ಯುತ್ತಮ ಭಾರತೀಯ ಚಿತ್ರನಟ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಖ್ಯಾತ ಕೆನಡಾ ಚಿತ್ರ ನಿರ್ಮಾಪಕ ಆಟಂ ಎಗೊಯಾನ್ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಲಾಯಿತು.

 ಇತರ ಪ್ರಶಸ್ತಿಯ ವಿವರಗಳು 

ಉತ್ತಮ ಚಿತ್ರ ಪ್ರಶಸ್ತಿ: 120 ಬೀಟ್ಸ್ ಪರ್ ಮಿನಿಟ್ (ಫ್ರಾನ್ಸ್ ಚಿತ್ರ), ನಿರ್ದೇಶನ- ರುಬಿನ್ ಕ್ಯಾಂಪುಲ್ಲೊ.

ಉತ್ತಮ ನಿರ್ದೇಶಕ ಪ್ರಶಸ್ತಿ: ಚೀನಾದ ವಿವಿಯನ್ ಆವ್ (ಏಂಜೆಲ್ಸ್ ವೇರ್ ವೈಟ್).

ತೀರ್ಪುಗಾರರ ವಿಶೇಷ ಪ್ರಶಸ್ತಿ: ಟೇಕ್ ಆಫ್ (ಮಲೆಯಾಳಂ ಚಿತ್ರ- ಭಾರತ)

ಉತ್ತಮ ನಟಿ ಪ್ರಶಸ್ತಿ: ಪಾರ್ವತಿ

ಉತ್ತಮ ನಟ ಪ್ರಶಸ್ತಿ: ನಾಹುಲ್ ಪೆರೇಜ್ ಬಿಸ್ಕಯಾರ್ತ್ (120 ಬೀಟ್ಸ್ ಪರ್ ಮಿನಿಟ್)

ಉತ್ತಮ ಚೊಚ್ಚಲ ಚಿತ್ರ ನಿರ್ದೇಶಕ ಪ್ರಶಸ್ತಿ: ಕಿರೊ ರಸ್ಸೊ (ಸ್ಪಾನಿಷ್ ಚಿತ್ರ ಡಾರ್ಕ್ ಸ್ಕಲ್)

ಐಸಿಎಫ್‍ಟಿ-ಯುನೆಸ್ಕೊ ಗಾಂಧಿ ಪದಕ: ಮನೋಜ್ ಕದಮತ್ ನಿರ್ದೇಶನದ ಕ್ಷಿತಿಜ್ ಎ ಹಾರಿಜಾನ್ ಮರಾಠಿ ಚಿತ್ರ.

ಇರಾನಿ ಚಿತ್ರ ನಿರ್ಮಾಪಕ ಮಜೀದ್ ಮಜೀದಿ ನಿರ್ದೇಶನದ ಬಿಯಾಂಡ್ ದ ಕ್ಲೌಡ್ ಈ ವರ್ಷದ ಆರಂಭಿಕ ಚಿತ್ರವಾಗಿ ಪ್ರದರ್ಶನಗೊಂಡಿತು. ಪಾಬ್ಲೋ ಸೀಸರ್ ನಿರ್ದೇಶನದ ಇಂಡೋ- ಅರ್ಜೆಂಟೀನಿ ಚಿತ್ರ ಥಿಂಕಿಂಗ್ ಆಫ್ ಹಿಮ್ ಸಮಾರೋಪ ಚಿತ್ರವಾಗಿ ಪ್ರದರ್ಶನಗೊಂಡಿತು. 82 ದೇಶಗಳ 200ಕ್ಕೂ ಹೆಚ್ಚು ಚಿತ್ರಗಳನ್ನು ಒಂಬತ್ತು ದಿನಗಳ ಉತ್ಸವದಲ್ಲಿ ಪ್ರದರ್ಶಿಸಲಾಯಿತು.

ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ಎಫ್ಐ)

ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‍ಎಫ್‍ಐ), ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಚಲನಚಿತ್ರೋತ್ಸವ ನಿರ್ದೇಶನಾಲಯ ಮತ್ತು ಗೋವಾ ಸರ್ಕಾರ ಆಯೋಜಿಸುವ ಅತಿದೊಡ್ಡ ಚಲನಚಿತ್ರೋತ್ಸವವವಾಗಿದೆ. 1952ರಲ್ಲಿ ಇದನ್ನು ಆರಂಭಿಸಲಾಯಿತು. ಆ ಬಳಿಕ ಗೋವಾದಲ್ಲಿ ಪ್ರತಿ ವರ್ಷ ನಡೆಯುತ್ತಿದೆ.

ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‍ಎಫ್‍ಐ)ದ ಮುಖ್ಯ ಉದ್ದೇಶವೆಂದರೆ, ವಿಶ್ವದ ಅತ್ಯುತ್ತಮ ಚಿತ್ರಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಡುವುದು. ಇದು ಚಿತ್ರಸಂಸ್ಕøತಿಯ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಹಾಗೂ ಅದನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ನೆರವಾಗುವುದು ಕೂಡಾ ಇದರ ಉದ್ದೇಶ. ವಿವಿಧ ದೇಶಗಳ ಚಿತ್ರಸಂಸ್ಕøತಿಯ ವಿನಿಮಯಕ್ಕೆ ಕೂಡಾ ಇದು ವೇದಿಕೆ ಒದಗಿಸುತ್ತದೆ. ಇದರ ಸಾಮಾಜಿಕ ಮತ್ತು ಸಾಂಸ್ಕøತಿಕ ಅಂಶಗಳ ಮೂಲಕ ವಿಶ್ವದ ಜನರ ನಡುವೆ ಸ್ನೇಹ ಹಾಗೂ ಸಹಕಾರವನ್ನು ಅಭಿವೃದ್ಧಿಪಡಿಸುವುದು ಇದರ ಉದ್ದೇಶ.

Comment