Universal School Of Administration Integrated Degree college Admission Open for more details contact: 9686664985

ರಾಷ್ಟ್ರೀಯ ಸಂಕಷ್ಟ ಸ್ಪಂದನೆ ಕೇಂದ್ರಕ್ಕೆ ರಷ್ಯಾ ನೆರವು

ರಾಷ್ಟ್ರೀಯ ಸಂಕಷ್ಟ ಸ್ಪಂದನೆ ಕೇಂದ್ರಕ್ಕೆ ರಷ್ಯಾ ನೆರವು

ಭಾರತದ ಮಹತ್ವಾಕಾಂಕ್ಷಿ ರಾಷ್ಟ್ರೀಯ ಸಂಕಷ್ಟ ನಿರ್ವಹಣಾ ಕೇಂದ್ರ (ಎನ್ಸಿಎಂಸಿ) ಸ್ಥಾಪನೆಗೆ ರಷ್ಯಾ ನೆರವು ನೀಡಲು ಒಪ್ಪಿಕೊಂಡಿದೆ. ವಿಕೋಪ ಮತ್ತು ಇತರ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ರಷ್ಯಾದ ತುರ್ತು ಸ್ಥಿತಿ ಖಾತೆ ಸಚಿವ ವ್ಲಾದಿಮಿರ್ ಪುಚ್ಕೋವ್ ನಡುವೆ ಮಾಸ್ಕೊದಲ್ಲಿ ನಡೆದ ಮಾತುಕತೆಯ ವೇಳೆ ರಷ್ಯಾ ಭರವಸೆ ನೀಡಿದೆ.

ಸಭೆಯ ಮುಖ್ಯಾಂಶಗಳು

ರಷ್ಯಾದ ಇಎಂಇಆರ್ಸಿಓಎಂ ಭಾರತದಲ್ಲಿ ರಾಷ್ಟ್ರೀಯ ಸಂಕಷ್ಟ ನಿರ್ವಹಣಾ ಕೇಂದ್ರ (ಎನ್ಸಿಎಂಸಿ) ಸ್ಥಾಪನೆಗೆ ನೆರವು ನಿಡಲಿದ್ದು, ಎಲ್ಲ ಅಗತ್ಯ ಸಹಕಾರ ಒದಗಿಸಲಿದೆ. ಇದರ ಜತೆಗೆ ಉಭಯ ಮುಖಂಡರು ವಿಕೋಪ ನಿರ್ವಹಣೆಯಲ್ಲಿ ಪರಸ್ಪರ ಸಹಕಾರದ ಬಗ್ಗೆಯೂ ಸುಧೀರ್ಘ ಚರ್ಚೆ ನಡೆಸಿದರು. 2010ರಲ್ಲಿ ಸಹಿ ಮಾಡಿರುವ ವಿಕೋಪ ನಿರ್ವಹಣೆ ಒಪ್ಪಂದದ ಪ್ರಗತಿಯನ್ನು ಕೂಡಾ ಉಭಯ ಮುಖಂಡರು ಪರಾಮರ್ಶಿಸಿದರು.

ವಿಕೋಪ ನಿರ್ವಹಣೆ ಕ್ಷೇತ್ರದ ಉತ್ತಮ ರೂಢಿಗಳನ್ನು ಪರಸ್ಪರ ಹಂಚಿಕೊಳ್ಳುವುದು ಮತ್ತು ಕ್ಷೇತ್ರದಲ್ಲಿ ವಿಶೇಷ ನೈಪುಣ್ಯವನ್ನು ಕಲಿಸುವ ಸಲುವಾಗಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ಪರಸ್ಪರ ಸಹಕಾರ ನೀಡಲು ಕೂಡಾ ಉಭಯ ದೇಶಗಳು ಒಪ್ಪಿಕೊಂಡಿವೆ. ವಿಕೋಪ ನಿರ್ವಹಣೆ ಕ್ಷೇತ್ರದಲ್ಲಿ 2018-19ನೇ ಸಾಲಿಗೆ ಜಂಟಿ ಅನುಷ್ಠಾನ ಯೋಜನೆಗೆ ಕೂಡಾ ಉಭಯ ಮುಖಂಡರು ಸಹಿ ಮಾಡಿದರು.

ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಗೊಳಿಸುವ ಬದ್ಧತೆಯನ್ನು ಕೂಡಾ ಪುನರುಚ್ಚರಿಸಿದರು. 2016 ಅಕ್ಟೋಬರ್ನಲ್ಲಿ ಸಹಿ ಮಾಡಿರುವ ಮಾಹಿತಿ ಭದ್ರತೆ ಒಪ್ಪಂದದ ಅನುಷ್ಠನದ ವಿಚಾರವನ್ನು ಕೂಡಾ ಪರಾಮರ್ಶಿಸಲಾಯಿತು. ಎರಡು ರಾಷ್ಟ್ರೀಯ ಭದ್ರತಾ ಮಂಡಳಿಗಳ ನಡುವಿನ ನಿರಂತರ ಭೇಟಿ ಹಾಗೂ ವಿನಿಮಯ, ಸಹಕಾರವನ್ನು ಕೂಡಾ ಸ್ವಾಗತಿಸಲಾಯಿತು.

Comment