Universal School Of Administration Integrated Degree college Admission Open for more details contact: 9686664985

ಎಫ್ಎಸ್ಡಿಸಿ ಉಪ ಸಮಿತಿಯಿಂದ ಹಣಕಾಸು ಘಟನಾವಳಿಗಳ ಪರಾಮರ್ಶೆ

ಎಫ್ಎಸ್ಡಿಸಿ ಉಪ ಸಮಿತಿಯಿಂದ ಹಣಕಾಸು ಘಟನಾವಳಿಗಳ ಪರಾಮರ್ಶೆ

ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿ (ಎಫ್ಎಸ್ಡಿಸಿ) ದೇಶದ ಹಣಕಾಸು ಸ್ಥಿರತೆಯ ಮೇಲೆ ಪ್ರಭಾವ ಬೀರಬಹುದಾದ ಪ್ರಮುಖ ಜಾಗತಿಕ ಹಾಗೂ ದಏಶೀಯ ಅಭಿವೃದ್ಧಿಗಳ ಬಗ್ಗೆ ಇತ್ತೀಚೆಗೆ ಪರಾಮರ್ಶೆ ನಡೆಸಿತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಊರ್ಜಿತ್ ಪಟೇಲ್ ಉಪಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖ ಅಂಶಗಳು

ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿ (ಎಫ್ಎಸ್ಡಿಸಿ) ಉಪಸಮಿತಿ ಇದರ ಜತೆಗೆ ರಾಷ್ಟ್ರೀಯ ಹಣಕಾಸು ಶಿಕ್ಷಣ ಕೇಂದ್ರವನ್ನು ಆರಂಭಿಸುವ ಬಗ್ಗೆಯೂ ಚರ್ಚೆ ನಡೆಸಿದೆ. ಐಬಿಬಿಐ ನೋಂದಾಯಿಸಿರುವ ಮಾಹಿತಿಗಳನ್ನು ಕಾರ್ಯಾಚರಣೆಗೆ ಸಜ್ಜುಗೊಳಿಸುವುದು, ಲೀಗಲ್ ಎಂಟಿಟಿ ಐಡೆಂಟಿಫೈಯರ್ ಅನುಷ್ಠಾನ, ನಿಯಂತ್ರಕ ಸಂಸ್ಥೆಗಳ ನಡುವೆ ಮಾಹಿತಿ ವಿನಿಮಯ ಮತ್ತಿತರ ಅಂಶಗಳ ಬಗ್ಗೆಯೂ ಚರ್ಚೆ ನಡೆಯಿತು.

ಇದಲ್ಲದೇ, ಹಲವು ತಾಂತ್ರಿಕ ಗುಂಪುಗಳ ಮತ್ತು ರಾಜ್ಯಮಟ್ಟದ ಸಮನ್ವಯ ಸಮಿತಿಗಳ ಚಟುವಟಿಕೆಗಳನ್ನು ಕೂಡಾ ಪರಾಮರ್ಶಿಸಲಾಯಿತು. ಫಿನ್ಟೆಕ್ ಮತ್ತು ಡಿಜಿಟಲ್ ಇನ್ನೊವೇಶನ್ಸ್, ಶ್ಯಾಡೊ ಬ್ಯಾಂಕಿಂಗ್ ಇಂಪ್ಲಿಮೆಂಟೇಶನ್ ಗ್ರೂಪ್ ಹಾಗೂ ಸ್ವಿವರ್ಡ್ಶಿಪ್ ಕೋಡ್ ಬಗೆಗೆ ಮಾಡಿರುವ ಶಿಫಾರಸ್ಸುಗಳ ಬಗ್ಗೆಯೂ ಸಭೆ ಚರ್ಚಿಸಿತು.

ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿ (ಎಫ್ಎಸ್ಡಿಸಿ)

ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿ (ಎಫ್ಎಸ್ಡಿಸಿ), ಹಣಕಾಸು ವಲಯವನ್ನು ನಿಯಂತ್ರಿಸುವ ಸೂಪರ್ ನಿಯಂತ್ರಣ ಸಂಸ್ಥೆಯಾಗಿದ್ದು, ಆರ್ಥಿಕತೆಯಲ್ಲಿ ಆರೋಗ್ಯಕರ ಮತ್ತು ದಕ್ಷ ಹಣಕಾಸು ವ್ಯವಸ್ಥೆಯನ್ನು ತರುವ ನಿಟ್ಟಿನಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ಇದರ ಮುಖ್ಯ ಕಾರ್ಯಸೂಚಿಯೆಂದರೆ, ಹಣಕಾಸು ಸ್ಥಿರತೆಯನ್ನು ನಿರ್ವಹಹಿಸುವ ಸಲುವಾಗಿ ವ್ಯವಸ್ಥೆಯನ್ನು ಬಲಗೊಳಿಸುವುದು ಹಾಗೂ ಸಾಂಸ್ಥೀಕರಣಗೊಳಿಸುವುದು, ಹಣಕಾಸು ವಲಯ ಅಭಿವೃದ್ಧಿ, ಅಂತರ ನಿಯಂತ್ರಣ ಸಂಸ್ಥೆಗಳ ಸಮನ್ವಯ ಹಾಗೂ ಆರ್ಥಿಕತೆಯ ಮಟ್ಟದಲ್ಲಿ ನಿಯಂತ್ರಣ.

ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿ (ಎಫ್ಎಸ್ಡಿಸಿ) ಅಧ್ಯಕ್ಷರಾಗಿ ಕೇಂದ್ರ ಹಣಕಾಸು ಸಚಿವರು ಕಾರ್ಯ ನಿರ್ವಹಿಸುತ್ತಾರೆ. ಇದರ ಸದಸ್ಯರೆಂದರೆ ಹಣಕಾಸು ವಲಯದ ನಿಯಂತ್ರಣ ಸಂಸ್ಥೆಗಳಾದ ಆರ್ಬಿಐ, ಎಸ್ಇಬಿಐ, ಐಆರ್ಡಿಎ, ಪಿಎಫ್ಆರ್ಡಿಎ ಮುಖ್ಯಸ್ಥರು, ಹಣಕಾಸು ಕಾರ್ಯದರ್ಶಿ ಅಥವಾ ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ, ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ ಮತ್ತು ಮುಖ್ಯ ಆರ್ಥಿಕ ಸಲಹೆಗಾರರು.

Comment