Universal School Of Administration Integrated Degree college Admission Open for more details contact: 9686664985

ಭಾರತ- ಫಿಲಿಫೀನ್ಸ್ ಕಸ್ಟಮ್ಸ್ ಒಪ್ಪಂದಕ್ಕೆ ಸಂಪುಟ ಒಪ್ಪಿಗೆ

ಭಾರತ- ಫಿಲಿಫೀನ್ಸ್ ಕಸ್ಟಮ್ಸ್ ಒಪ್ಪಂದಕ್ಕೆ ಸಂಪುಟ ಒಪ್ಪಿಗೆ

ಕಸ್ಟಮ್ಸ್ ವಿಚಾರದಲ್ಲಿ ಪರಸ್ಪರ ಸಹಕಾರ ಮತ್ತು ಸಹಾಯ ಕುರಿತಂತೆ ಭಾರತ ಹಾಗೂ ಫಿಲಿಫೀನ್ಸ್ ಮಾಡಿಕೊಂಡಿರುವ ದ್ವಿಪಕ್ಷೀಯ ಒಪ್ಪಂದವನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಒಪ್ಪಂದವು ಉಭಯ ದೇಶಗಳ ನಡುವೆ ಕಸ್ಟಮ್ಸ್ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಮತ್ತು ಅವುಗಳ ತನಿಖೆ ವಿಚಾರದಲ್ಲಿ ಸೂಕ್ತ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ.

ಒಪ್ಪಂದವು ವ್ಯಾಪಾರಕ್ಕೆ ಕೂಡಾ ಪೂರಕವಾಗಿದ್ದು, ಉಭಯ ದೇಶಗಲ ನಡುವೆ ನಡೆಸುವ ಸರಕುಗಳ ವಹಿವಾಟಿಗೆ ತಕ್ಷಣ ಕ್ಲಿಯರೆನ್ಸ್ ನೀಡುವಲ್ಲೂ ಇದು ಸಹಕಾರಿಯಾಗಿದೆ. ಉಭಯ ದೇಶಗಳು ಇದಕ್ಕೆ ಅಗತ್ಯವಾದ ರಾಷ್ಟ್ರೀಯ ಕಾನೂನು ಅಗತ್ಯತೆಗಳನ್ನು ಹಾಗೂ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಒಪ್ಪಂದ ಅನುಷ್ಠಾನಕ್ಕೆ ಬರಲಿದೆ.

ಪ್ರಮುಖ ಅಂಶಗಳು

ಒಪ್ಪಂದವು ಭಾರತ ಹಾಗೂ ಫಿಲಿಫೀನ್ಸ್ ದೇಶಗಳ ಕಸ್ಟಮ್ಸ್ ಅಧಿಕಾರಿಗಳ ನಡುವೆ ಮಾಹಿತಿ ಮತ್ತು ಗುಪ್ತಚರ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಕಾನೂನು ಚೌಕಟ್ಟನ್ನು ಒದಗಿಸಲಿದೆ. ಇದು ಸೂಕ್ತವಾದ ಕಸ್ಟಮ್ಸ್ ಕಾನೂನುಗಳನ್ನು ಅನ್ವಯಿಸಲು, ಕಸ್ಟಮ್ಸ್ ಅಪರಾಧಗಳ ತನಿಖೆ ಮತ್ತು ಕಸ್ಟಮ್ಸ್ ಅಪರಾಧಗಳ ತಡೆ, ಕಾನೂನುಬದ್ಧ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಡುವುದು ಮತ್ತಿತರ ವಿಚಾರಗಳಲ್ಲಿ ಇದು ಎರಡೂ ದೇಶಗಳಿಗೆ ಅನುಕೂಲವಾಗಲಿದೆ.

ಒಪ್ಪಂದವನ್ನು ಉಭಯ ದೇಶಗಳ ಆಡಳಿತ ವ್ಯವಸ್ಥೆಯ ಒಪ್ಪಿಗೆಯೊಂದಿಗೆ ಅಂತಿಮಪಡಿಸಲಾಗುತ್ತದೆ. ಇದು ಭಾರತದ ಕಸ್ಟಮ್ಸ್ ಕಳಕಳಿ ಮತ್ತು ಅಗತ್ಯತೆಗಳನ್ನು ಅದರಲ್ಲೂ ಮುಖ್ಯವಾಗಿ ಮಾಹಿತಿ ವಿನಿಮಯದ ವಿಚಾರದಲ್ಲಿ ಅಗತ್ಯ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ನೆರವಾಗಲಿದೆ. ಘೋಷಿಸಿಕೊಂಡ ಕಸ್ಟಮ್ಸ್ ಮೌಲ್ಯ ಮತ್ತು ದೃಢೀಕರಣ ಪತ್ರಗಳ ಅಧಿಕೃತತೆಯ ವಿಚಾರದಲ್ಲಿ ಕೂಡಾ ಇದು ನೆರವಾಗಲಿದೆ. ಎರಡು ದೇಶಗಳ ನಡುವೆ ವಹಿವಾಟು ನಡೆಸುವ ಸರಕುಗಳ ಮೂಲದ ಬಗ್ಗೆ ಕೂಡಾ ಮಾಹಿತಿಯನ್ನು ಹಂಚಿಕೊಳ್ಳಲು ಇದು ನೆರವಾಗಲಿದೆ.

Comment