Universal School Of Administration Integrated Degree college Admission Open for more details contact: 9686664985

ಯೋನೋ: ಎಸ್ಬಿಐನಿಂದ ಏಕೀಕೃತ ಡಿಜಿಟಲ್ ಪ್ಲಾಟ್ಫಾರಂ

 ಯೋನೋ: ಎಸ್ಬಿಐನಿಂದ ಏಕೀಕೃತ ಡಿಜಿಟಲ್ ಪ್ಲಾಟ್ಫಾರಂ

ದೇಶದ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ಎನಿಸಿದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ದೇಶದ ಮೊಟ್ಟಮೊದಲ ಏಕೀಕೃತ ಜೀವನಶೈಲಿ ಮತ್ತು ಬ್ಯಾಂಕಿಂಗ್ ಡಿಜಿಟನ್ ಸೇವೆ ಪ್ಲಾಟ್ಫಾರಂ "ಯೋನೊ" ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಯೋನೋ ಎಂದರೆ ಯೂ ಓನ್ಲಿ ನೀಡ್ ವನ್ ಎನ್ನುವುದರ ಸಂಕ್ಷಿಪ್ತ ರೂಪವಾಗಿದೆ.

ಯೋನೋ ಮೊಟ್ಟಮೊದಲ ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್ಫಾರಂ ಆಗಿದ್ದು, ಇದು ಗ್ರಾಹಕರು ಜೀವನಶೈಲಿ ಅಗತ್ಯತೆಗಳನ್ನು ಪೂರೈಸಲು ಅನುವು ಮಾಡಿಕೊಡಲಿದೆ. ಇದಕ್ಕಾಗಿ 14 ವರ್ಗಗಳ ಸೇವೆ ಕಾರ್ಡ್ ಮೂಲಕ ಲಭ್ಯವಾಗಲಿದೆ. ಅವುಗಳಲ್ಲಿ ಬಾಡಿಗೆ ಕ್ಯಾಬ್ ಕಾಯ್ದಿರಿಸುವುದು, ಮನೋರಂಜನೆ, ಊಟ, ಪ್ರವಾಸ ಮತ್ತು ವಾಸ್ತವ್ಯದಂಥ ವಿವಿಧ ಸೇವೆಗಳನ್ನು ಪಡೆಯಬಹುದಾಗಿದೆ.

ಪ್ರಮುಖ ಅಂಶಗಳು

ಭಾರತೀಯ ಸ್ಟೇಟ್ಬ್ಯಾಂಕಿನ ಯೋನೋ ಎನ್ನುವುದು ವಿಶಿಷ್ಟ ಹಾಗೂ ಸಮಗ್ರವಾದ ಡಿಜಿಟಲ್ ಉತ್ಪನ್ನವಾಗಿದ್ದು, ವಿಶ್ವದ ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನವಾದ ಕೃತಕ ಬುದ್ಧಿಮತ್ತೆ, ಅಂದಾಜಿಸುವಿಕೆ ಮತ್ತು ವಿಶ್ಲೇಷಣೆ ಮತ್ತು ಮೆಷಿನ್ ಕಲಿಕೆಯನ್ನು ಇದರಲ್ಲಿ ಬಳಸಿಕೊಳ್ಳಲಾಗಿದೆ.

ಏಕೀಕೃತ ಓಮ್ಲಿ ಚಾನಲ್ ಡಿಜಿಟಲ್ ಪ್ಲಾಟ್ಫಾರಂ ವೈವಿಧ್ಯಮಯ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಲನ್ನು ಒದಗಿಸುತ್ತದೆ. ಇವುಗಳನ್ನು ಮೊಬೈಲ್ ಫೋನ್ ಮೂಲಕ ಪಡೆಯಲು ಅವಕಾಶವಿದೆ. ಎಂಡ್ರಾಯ್ಡ್ ಮತ್ತು ಐಓಎಸ್ ಮೂಲಕ ಇದು ಲಭ್ಯವಿದ್ದು, ಬ್ರೌಸರ್ ಮೂಲಕ ವೆಬ್ಪೋರ್ಟೆಲ್ನಲ್ಲೂ ಸೇವೆ ಪಡೆಯಬಹುದಾಗಿದೆ. ಇದು ಗ್ರಾಹಕರಿಗೆ ಸ್ಮಾರ್ಟ್ ಫೋನ್ ಮೂಲಕ, ಮೂಲ ಬ್ಯಾಂಕಿಂಗ್ ಸೇವೆಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಡಲಿದೆ. ಸೀಮಿತ ಸೌಲಭ್ಯಗಳ ಖಾತೆಯನ್ನು ತೆರೆಯುವುದು ಹಾಗೂ ಕಂತುಗಳನ್ನು ಪಾವತಿಸಲು ಕೂಡಾ ಇದು ನೆರವಾಗಲಿದೆ. ವಿವಿಧ ಆನ್ಲೈನ್ ಸ್ಟೋರ್ಗಳಲ್ಲಿ ಖರೀದಿಸಲು ಕೂಡಾ ಇದು ಉಪಯೋಗಕ್ಕೆ ಬರಲಿದೆ.

ಎಸ್ಬಿಐ ತನ್ನ ಕಾರ್ಡ್ಗಳನ್ನು ವಿತರಿಸಲು ಕೂಡಾ ಪ್ಲಾಟ್ಫಾರಂ ಬಳಸುತ್ತಿದ್ದು, ಇದರ ಜತೆಗೆ ಜೀವ ವಿಮೆ ಹಾಗೂ ಸಾಮಾನ್ಯ ವಿಮೆ, ಮ್ಯೂಚುವಲ್ ಫಂಡ್ಗಳನ್ನು ಕೂಡಾ ಮಾರಾಟ ಮಾಡುತ್ತಿದೆ. ಇದು ಪ್ಲಾಟ್ಫಾರಂ ಮೂಲಕವೇ ಚಿಲ್ಲರೆ ಸಾಲವನ್ನು ಅನುಮೋದಿಸಲು ಕೂಡಾ ಚಿಂತನೆ ನಡೆಸಿದೆ. ಎಸ್ಬಿಐ ಉದ್ದೇಶಕ್ಕಾಗಿ 60 ವ್ಯಾಪಾರ ವಲಯಗಳ ಜತೆ ಒಪ್ಪಂದ ಮಾಡಿಕೊಂಡಿದ್ದು, ಆರೋಗ್ಯ ಸೇವೆ, ಜೀವನಶಥಲಿ, ಆತಿಥ್ಯ, ಆಟೊಮೊಬೈಲ್ ಮತ್ತಿತರ ಸೇವೆಗಳಿಗೆ ಯೋನೋ ಬಳಕೆಯಾಗಲಿದೆ.

Comment