Universal School Of Administration Integrated Degree college Admission Open for more details contact: 9686664985

ಅಂತರರಾಜ್ಯ ಮಂಡಳಿಯ 12ನೇ ಸ್ಥಾಯಿಸಮಿತಿ ಸಭೆ

ಅಂತರರಾಜ್ಯ ಮಂಡಳಿಯ 12ನೇ ಸ್ಥಾಯಿಸಮಿತಿ ಸಭೆ

ಅಂತರರಾಜ್ಯ ಮಂಡಳಿಯ 12ನೇ ಸ್ಥಾಯಿಸಮಿತಿ ಸಭೆ ನವದೆಹಲಿಯಲ್ಲಿ ಇತ್ತೀಚೆಗೆ ನಡೆಯಿತು. ಇದರ ಮುಖ್ಯ ಉದ್ದೇಶವೆಂದರೆ, ಪುಂಚಿ ಸಮಿತಿಯ ಶಿಫಾರಸ್ಸುಗಳನ್ನು ಚರ್ಚಿಸುವುದು. ಕೇಂದ್ರ ಹಾಗೂ ರಾಜ್ಯ ನಡುವಿನ ಸಂಬಂಧ ವಿಷಯದಲ್ಲಿ ಪುಂಚಿ ಆಯೋಗ ಶಿಫಾರಸ್ಸು ಮಾಡಿದ್ದು, ಸಭೆಯಲ್ಲಿ ವರದಿಯನ್ನು ವಿಸ್ತøತವಾಗಿ ಚರ್ಚಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ವಹಿಸಿದ್ದರು.

12ನೇ ಸ್ಥಾಯಿ ಸಮಿತಿ ಸಭೆಯ ಸದಸ್ಯರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ ಅರುಣ್ ಜೇಟ್ಲಿ, ರಸ್ತೆ, ಸಾರಿಗೆ, ಹೆದ್ದಾರಿ, ಶಿಪ್ಪಿಂಗ್, ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಖಾತೆ ಸಚಿವ ನಿತಿನ್ ಗಡ್ಕರಿ, ಸಮಾಜ ಕಲ್ಯಾಣ ಮತ್ತು ಸಬಲೀಕರಣ ಖಾತೆಎ ಸಚಿವ ಥಾವರ್ಸಿಂಗ್ ಗೆಹ್ಲೋಟ್ ಸೇರಿದ್ದರು. ಸ್ಥಾಯಿಸಮಿತಿ ಸದಸ್ಯರಾಜ್ಯಗಳಾದ ಆಂಧ್ರಪ್ರದೇಶ, ಛತ್ತೀಸ್ಗಢ, ಒಡಿಶಾ, ಪಂಜಾಬ್, ರಾಜಸ್ಥಾನ, ತ್ರಿಪುರಾ, ಉತ್ತರ ಪ್ರದೇಶ ಮುಖ್ಯಮಂತ್ರಿಗಳೂ ಸಭೆಯಲ್ಲಿ ಭಾಗವಹಿಸಿದ್ದರು.

ಸ್ಥಾಯಿ ಸಮಿತಿಯ 12ನೇ ಸಭೆಯಲ್ಲಿ ಮುಖ್ಯವಾಗಿ ಸಂಪುಟ 3,4 ಮತ್ತು 5ರಲ್ಲಿರುವ 118 ಶಿಫಾರಸ್ಸುಗಳ ಬಗ್ಗೆ ಚರ್ಚೆ ನಡೆಸಲಾಯಿತು ಹಾಗೂ ಶಿಫಾರಸ್ಸುಗಳನ್ನು ಅಂತಿಮಪಡಿಸಲಾಯಿತು. ಇದರಲ್ಲಿ ಮುಖ್ಯವಾಗಿ ಕೇಂದ್ರ- ರಾಜ್ಯ ಸಂಬಂಧ, ಜಿಎಸ್ಟಿ, ಕೇಂದ್ರದಿಂದ ರಾಜ್ಯಕ್ಕೆ ಹಣಕಾಸು ವರ್ಗಾವಣೆ, ನೀತಿ ಸುಧಾರಣೆಗಳು ಮತ್ತು ವಲಸೆ ವಿಷಯಗಳು ಸೇರಿವೆ.

ಶಿಫಾರಸ್ಸಿನ 1 ಮತ್ತು 2ನೇ ಸಂಪುಟದ ಬಗ್ಗೆ 2017 ಏಪ್ರಿಲ್ನಲ್ಲಿ ನಡೆದ ಸ್ಥಾಯಿಸಮಿತಿಯ 11ನೇ ಸಭೆಯಲ್ಲಿ ಚರ್ಚಿಸಲಾಗಿತ್ತು. ಸಂಪುಟ 6 ಮತ್ತು 7 ಬಗ್ಗೆ ಚರ್ಚೆಗಳು ಮುಂದಿನ ಸ್ಥಾಯಿ ಸಮಿತಿ ಸಭೆಯಲ್ಲಿ ನಡೆಯಲಿವೆ.

ಅಂತಿಮವಾಗಿ ಪುಂಚಿ ಆಯೋಗದ ವರದಿಗಳ ಸ್ಥಾಯಿ ಸಮಿತಿ ಸಿಫಾರಸ್ಸನ್ನು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷರಾಗಿರುವ ಅಂತರ ರಾಜ್ಯ ಮಂಡಳಿಗೆ ಸಲ್ಲಿಸಲಾಗುತ್ತದೆ.

ಅಂತರರಾಜ್ಯ ಮಂಡಳಿ ಬಗ್ಗೆ

ಅಂತರ ರಾಜ್ಯಮಂಡಳಿಯನ್ನು ಸಂವಿಧಾನದ 263ನೇ ವಿಧಿ ಅನ್ವಯ ರಚಿಸಲಾಗಿದೆ. ಇದನ್ನು 1990 ಮೇ 28 ರಾಷ್ಟ್ರಪತಿಗಳ ಆದೇಶದ ಅನ್ವಯ ರಚಿಸಲಾಗಿದೆ. ಸರ್ಕಾರಿಯಾ ಆಯೋಗದ ಶಿಫಾರಸ್ಸಿನಂತೆ ಮಂಡಳಿಯನ್ನು ರಚಿಸಲಾಗಿತ್ತು. ಅಂತರರಾಜ್ಯ ಮಂಡಳಿಯ ಮುಖ್ಯ ಉದ್ದೇಶವೆಂದರೆ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಸಮನ್ವಯ ಸಾಧಿಸುವುದು.

ಅಂತರರಾಜ್ಯ ಮಂಡಳಿ ಸಂಯೋಜನೆ

* ದೇಶದ ಪ್ರಧಾನಿ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ.

* ಇವರಲ್ಲದೇ ಎಲ್ಲ ರಾಜ್ಯಗಳು ಮತ್ತು ಶಾಸನಸಭೆ ಇರುವ ಎಲ್ಲ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಇದರ ಸದಸ್ಯರಾಗಿರುತ್ತಾರೆ.

* ಆರು ಮಂದಿ ಸಂಪುಟ ದರ್ಜೆ ಸಚಿವರನ್ನು ಪ್ರಧಾನಿ ಇದಕ್ಕೆ ಸದಸ್ಯರನ್ನಾಗಿ ನೇಮಕ ಮಾಡುತ್ತಾರೆ.

ಅಂತರರಾಜ್ಯ ಮಮಡಳಿಯ ಸ್ಥಾಯಿ ಸಮಿತಿ ಬಗ್ಗೆ

ಅಂತರರಾಜ್ಯ ಮಮಡಳಿಯ ಸ್ಥಾಯಿ ಸಮಿತಿಯನ್ನು ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ನೇಮಕ ಮಾಡಲಾಗಿತ್ತು. ಕೇಂದ್ರ ಗೃಹಸಚಿವರಲ್ಲದೇ ಸಮಿತಿಯಲ್ಲಿ ಐದು ಮಂದಿ ಕೇಂದ್ರ ಸಚಿವರು ಹಾಗೂ ಒಂಬತ್ತು ಮಂದಿ ಮುಖ್ಯಮಂತ್ರಿಗಳು ಇದ್ದಾರೆ.

ಸ್ಥಾಯಿ ಸಮಿತಿಯ ಪ್ರಮುಖ ಕಾರ್ಯಗಳು ಕೆಳಗಿನಂತಿವೆ.

* ಅಂತರರಾಜ್ಯ ಮಂಡಳಿ ಯಾವುದೇ ಶಿಫಾರಸ್ಸುಗಳ ವಿಚಾರದಲ್ಲಿ ತೆಗೆದುಕೊಮಡ ನಿರ್ಧಾರಗಳ ಅನುಷ್ಠಾನದ ಮೇಲ್ವಿಚಾರಣೆ ನಡೆಸುವುದು.

* ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧ ಕುರಿತಾದ ಎಲ್ಲ ವಿಷಯಗಳನ್ನು ಪರಿಗಣಿಸಲು ಅಂತರರಾಜ್ಯ ಮಂಡಳಿಗೆ ತರುವುದು.

* ಅಂತರರಾಜ್ಯ ಮಂಡಳಿ ಅಥವಾ ಅಧ್ಯಕ್ಷರು ನೀಡುವ ಇತರ ಯಾವುದೇ ಕಾರ್ಯಸೂಚಿ

ಪುಂಚಿ ಆಯೋಗದ ಬಗ್ಗೆ

ಪುಂಚಿ ಆಯೋಗವನ್ನು ಭಾರತ ಸರ್ಕಾರ 2007 ಏಪ್ರಿಲ್ 27ರಂದು ನೇಮಕ ಮಾಡಿದೆ. ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಮದನ್ಮೋಹನ್ ಪುಂಚಿಯವರ ಅಧ್ಯಕ್ಷತೆಯಲ್ಲಿ ಅಯೋಗವನ್ನು ನೇಮಿಸಲಾಗಿದ್ದು, ಬದಲಾಗುತ್ತಿರುವ ರಾಜಕೀಯ ಹಾಗೂ ಆರ್ಥಿಕ ವಾತಾವರಣದಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧಗಳ ಬಗ್ಗೆ ಇದು ಅಧ್ಯಯನ ಮಾಡುವ ಹೊಣೆಗಾರಿಕೆ ಹೊಂದಿದೆ. ಪುಂಚಿ ಆಯೋಗವು 2010ರಲ್ಲಿ 273 ಶಿಫಾರಸ್ಸುಗಳನ್ನು 7 ಸಂಪುಟಗಳಲ್ಲಿ ಸಲ್ಲಿಸಿದೆ.

Comment