Universal School Of Administration Integrated Degree college Admission Open for more details contact: 9686664985

ಹರ್ಯಾಣದಲ್ಲಿ ಅಂತರರಾಷ್ಟ್ರೀಯ ಗೀತಾ ಮಹೋತ್ಸವ ಉದ್ಘಾಟನೆ

ಹರ್ಯಾಣದಲ್ಲಿ ಅಂತರರಾಷ್ಟ್ರೀಯ ಗೀತಾ ಮಹೋತ್ಸವ ಉದ್ಘಾಟನೆ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಹರ್ಯಾಣದ ಕುರುಕ್ಷೇತ್ರದಲ್ಲಿ 2017ನೇ ಸಾಲಿನ ಅಂತರರಾಷ್ಟ್ರೀಯ ಗೀತಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಮಹೋತ್ಸವ ಆಯೋಜಿಸಿರುವ ಪ್ರಮುಖ ಉದ್ದೇಶವೆಂದರೆ ಗೀತೆಯ ಸಂದೇಶವನ್ನು ವಿಶ್ವಕ್ಕೆ ರವಾನಿಸುವುದು. ಇದು ಎರಡನೇ ಆವೃತ್ತಿಯ ಗೀತಾ ಮಹೋತ್ಸವವಾಗಿದ್ದು, ಹರ್ಯಾಣ ಸರ್ಕಾರ ಇದನ್ನು ಆಯೋಜಿಸಿದೆ. ಮಾರಿಷಿಯಸ್ ಉತ್ಸವದ ಪಾಲುದಾರ ದೇಶವಾಗಿದ್ದು, ಉತ್ತರ ಪ್ರದೇಶ ಪಾಲುದಾರ ರಾಜ್ಯವಾಗಿದೆ.

ಪ್ರಮುಖ ಅಂಶಗಳು

ರಾಷ್ಟ್ರಪತಿಗಳು ಇದೇ ಸಂದರ್ಭದಲ್ಲಿ ಬ್ರಹ್ಮ ಸರೋವರ ಮತ್ತು ಜ್ಯೋತಿಸಾರ್ನಲ್ಲಿ ನಡೆದ ಗೀತಾಯಜ್ಞ ಮತ್ತು ಗೀತಾ ಪೂಜನ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡಿದ್ದರು. ಇದು ಭಗವದ್ಗೀತೆಯ ಜನ್ಮಸ್ಥಳ ಎನ್ನಲಾಗಿದೆ. ಇವರು ಕುರುಕ್ಷೇತ್ರ ವಿಶ್ವವಿದ್ಯಾನಿಲಯದಲ್ಲಿ ಅಂತರರಾಷ್ಟ್ರೀಯ ಭಗವದ್ಗೀತೆ ವಿಚಾರ ಸಂಕಿರಣವನ್ನೂ ಉದ್ಘಾಟಿಸಿದರು. ಬೃಹತ್ ಉತ್ಸವದಲ್ಲಿ 25 ರಿಂದ 30 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. 2017ರಲ್ಲಿ ನಡೆದ ಮೊದಲ ಆವೃತ್ತಿಯ ಗೀತಾ ಮಹೋತ್ಸವದಲ್ಲಿ 20 ಲಕ್ಷ ಮಂದಿ ಪಾಲ್ಗೊಂಡಿದ್ದರು. 35 ದೇಶಗಳ ಜನ ಗೀತಾ ಮಹೋತ್ಸವ- 2016ರಲ್ಲಿ ಪಾಲ್ಗೊಂಡಿದ್ದರು. ಹಲವು ಸಾಂಸ್ಕøತಿಕ, ಆಧ್ಯಾತ್ಮಿಕ, ಶೈಕ್ಷಣಿಇಕ ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳು ಚಿತ್ರಕಲೆ, ರಂಗೋಲಿ, ಛಾಯಾಚಿತ್ರ ಸ್ಪರ್ಧೆ, ಗೀತಾ ಪುಸ್ತಕ ಮೇಳದಂಥ ವೈವಿಧ್ಯಮಯ ವಸ್ತುಪ್ರದರ್ಶಗಳನ್ನು ಹಮ್ಮಿಕೊಂಡಿದ್ದವು.

ಭಗವದ್ಗೀತೆ

ಭಗವದ್ಗೀತೆಎಯು 700 ಶ್ಲೋಕಗಳನ್ನು ಒಳಗೊಂಡಿರುವ, ಸಂಸ್ಕø ಭಾಷೆಯಲ್ಲಿ ಇರುವ ಧರ್ಮಗ್ರಂಥವಾಗಿದೆ ಇದು ಹಿಂದೂ ಪುರಾಣವಾದ ಮಹಾಭಾರತದ ಒಂದು ಭಾಗ. ಇದನ್ನು ಪಾಂಡವರಾಜ ಅರ್ಜನ ಮತ್ತು ಆತನ ಮಾರ್ಗದರ್ಶಕ ಹಾಗೂ ಸಾರಥಿ ಕೃಷ್ಣನ ನಡುವಿನ ಸಂವಾದ ಎಂದು ಬಿಂಬಿಸಲಾಗಿದೆ. ಭಗವದ್ಗೀತೆಯು ಧರ್ಮ, ಆಧ್ಯಾತ್ಮ, ಭಕ್ತಿ, ಯೋಗದಂಥ ಪರಿಕಲ್ಪನೆಗಳನ್ನು ಮೋಕ್ಷದ ದಾರಿಯಾಗಿ ವರ್ಣಿಸಿದೆ. ಇದನ್ನು ಜ್ಞಾನ, ಭಕ್ತಿ, ಕರ್ಮ ಮತ್ತು ರಾಜಯೋಗದ ಮೂಲಕ ಸಾಧಿಸಬಹುದು ಎಂದು ಹೇಳಲಾಗಿದ್ದು, ಇದು ಸಾಂಖ್ಯ ಸಿದ್ಧಾಂತವಾಗಿದೆ

Comment