Universal School Of Administration Integrated Degree college Admission Open for more details contact: 9686664985

ಚೀನಾದಿಂದ ದೂರಸಂವೇದಿ ಉಪಗ್ರಹಗಳ ಯಶಸ್ವಿ ಉಡಾವಣೆ

ಚೀನಾದಿಂದ ದೂರಸಂವೇದಿ ಉಪಗ್ರಹಗಳ ಯಶಸ್ವಿ ಉಡಾವಣೆ

ವಿದ್ಯುತ್ಕಾಂತೀಯ ಸಂಶೋಧನೆಗಳನ್ನು ನಡೆಸಲು ಅನುಕೂಲವಾಗುವ ಹಾಗೂ ಇತರ ಪ್ರಯೋಗಗಳಿಗೆ ನೆರವಾಗುವ ದೂರಸಂವೇದಿ ಉಪಗ್ರಹಗಳನ್ನು ಚೀನಾ ಯಶಸ್ವಿಯಾಗಿ ಉಡಾಯಿಸಿದೆ.

ಎಷ್ಟು ಸಂಖ್ಯೆಯ ಉಪಗ್ರಹಗಳನ್ನು ಉಡಾಯಿಸಲಾಗಿದೆ ಎಂದು ನಿರ್ದಿಷ್ಟವಾಗಿ ಹೇಳಿಲ್ಲವಾದರೂ, ಇವುಗಳನ್ನು ಮಾರ್ಚ್-2ಸಿ ರಾಕೆಟ್ ಮೂಲಕ ಆಗ್ನೇಯ ಸಿಂಚುವಾನ್ ಪ್ರಾಂತ್ರದ ಕ್ಸಿಚಾಂಗ್ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾಯಿಸಲಾಗಿದೆ.

ಪ್ರಮುಖ ಅಂಶಗಳು

ಉಪಗ್ರಹವನ್ನು ಲಾಂಗ್ ಮಾರ್ಚ್-6 ರಾಕೆಟ್ ಕಕ್ಷೆಗೆ ಒಯ್ದಿದ್ದು, ಇದು ಹೊಸ ಪೀಳಿಗೆಯ ದ್ರವ ಇಂಧನ ರಾಕೆಟ್ ಆಗಿದೆ. ಚೀನಾದ ಏರೋಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿ ಕಾರ್ಪೊರೇಷನ್ ಇದನ್ನು ಅಭಿವೃದ್ಧಿಪಡಿಸಿದೆ. ಉಡಾವಣೆಯು ಚೀನಾದ ಲಾಂಗ್ ಮಾರ್ಚ್ ರಾಕೆಟ್ ಕುಟುಂಬದ 256ನೇ ರಾಕೆಟ್ ಉಡಾವಣೆಯಾಗಿದೆ.

ಉಪಗ್ರಹವು ಯಶಸ್ವಿಯಾಗಿ ತಮ್ಮ ಪೂರ್ವನಿರ್ಧರಿತ ಕಕ್ಷೆಗಳನ್ನು ಸೇರಿದ್ದು, ಇವುಗಳು ವಿದ್ಯುತ್ಕಾಂತೀಯ ಸಂಶೋಧನೆಗಳನ್ನು ನಡೆಸಲು ಅನುಕೂಲವಾಗುವ ಹಾಗೂ ಇತರ ಪ್ರಯೋಗಗಳಿಗೆ ನೆರವಾಗಲಿವೆ. ಚೀನಾ ಮುನ್ನ ಮೂರು ದೂರಸಂವೇದಿ ಉಪಗ್ರಹಗಳನ್ನು ಕಕ್ಷೆಗೆ ಕಳುಗಿಸಿದ್ದು, ಇದು ಚೀನಾದ ವೀಕ್ಷಣಾ ಸಾಮಥ್ರ್ಯವನ್ನು ಸುಧಾರಿಸಲು ಮತ್ತು ದೂರಸಂವೇದಿ ಉದ್ಯಮವನ್ನು ವಾಣಿಜ್ಯ ಬಳಕೆಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

Comment