Universal School Of Administration Integrated Degree college Admission Open for more details contact: 9686664985

ಏಷ್ಯನ್ ಮ್ಯಾರಥಾನ್ ಗೆದ್ದ ಮೊಟ್ಟಮೊದಲ ಓಟಗಾರ ಗೋಪಿ ಥೋನಕಲ್

ಏಷ್ಯನ್ ಮ್ಯಾರಥಾನ್ ಗೆದ್ದ ಮೊಟ್ಟಮೊದಲ ಓಟಗಾರ ಗೋಪಿ ಥೋನಕಲ್

ಭಾರತದ ಗೋಪಿ ಥೋನಕಲ್, ಏಷ್ಯನ್ ಮ್ಯಾರಥಾನ್ ಚಾಂಪಿಯನ್ಶಿಪ್ ಗೆದ್ದ ಮೊಟ್ಟಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಇತಿಹಾಸ ನಿರ್ಮಿಸಿದ್ದಾರೆ. ಚೀನಾದ ಡೊಂಗಾನ್ನಲ್ಲಿ ನಡೆದ 16ನೇ ಸಾಲಿನ ಪ್ರತಿಷ್ಠಿತ ಕೂಟದಲ್ಲಿ ಸಾಧನೆ ಮಾಡಿದ್ದಾರೆ.

ನಿಗದಿತ ದೂರವನ್ನು 2 ಗಂಟೆ 15 ನಿಮಿಷ ಮತ್ತು 48 ಸೆಕೆಂಡ್ಗಳಲ್ಲಿ ಪೂರೈಸಿ ಚಿನ್ನದ ಪದಕ ಗೆದ್ದರು. ಉಜ್ಬೇಕಿಸ್ತಾನದ ಆಂಡ್ರೆ ಪೆಟ್ರೊವ್ ಬೆಳ್ಳಿ ಹಾಗೂ ಮಾಂಗೋಲಿಯಾದ ಬ್ಯಾಮ್ಬಲೇವ್ ಸೆವೀನ್ರವಧನ್ ಕಂಚಿನ ಪದಕ ಗೆದ್ದರು.

ಏಷ್ಯನ್ ಮ್ಯಾರಥಾನ್ ಚಾಂಪಿಯನ್ಶಿಪ್

ಇದು ದ್ವೈವಾರ್ಷಿಕ ಅಂತರರಾಷ್ಟ್ರೀಯ ಸ್ಪರ್ಧೆಯಾಗಿದ್ದು, ಏಷ್ಯನ್ ಅಥ್ಲೆಟಿಕ್ಸ್ಗಾಗಿ ನಡೆಯುವ ರಸ್ತೆ ಓಟದ ಮ್ಯಾರಥಾನ್ ಆಗಿದೆ. ಇದನ್ನು ಏಷ್ಯನ್ ಅಥ್ಲೆಟಿಕ್ ಅಸೋಸಿಯೇಶನ್ ಆಯೋಜಿಸುತ್ತದೆ. ಇದು 1988ರಲ್ಲಿ ಆರಂಭವಾಗಿದೆ. ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ 42.195 ಕಿಲೋಮಿಟರ್ ಓಟದ ಸ್ಪರ್ಧೆಯನ್ನು ಕೈಬಿಟ್ಟ ಬಳಿಕ ಇದನ್ನು ಆರಂಭಿಸಲಾಗಿದೆ. 1985ರಲ್ಲಿ ಮ್ಯಾರಥಾನ್ ದ್ವೈವಾರ್ಷಿಕ ಏಷ್ಯನ್ ಟ್ರ್ಯಾಕ್ ಅಂಡ್ ಫೀಲ್ಡ್ ಚಾಂಪಿಯನ್ಶಿಪ್ ಭಾಗವಾಗಿದ್ದಾಗ ಭಾರತದ ಆಶಾ ಅಗರ್ವಾಲ್ ಮಹಿಳಾ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಬಳಿಕ 1992ರಲ್ಲಿ ಸುನಿತಾ ಗೋದರ ಕೂಡಾ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು.

Comment