IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಆದಿತ್ಯ ಎಲ್1 ಮಿಷನ್: ಇಸ್ರೋದ ಮೊಟ್ಟಮೊದಲ ಸೂರ್ಯಶಿಕಾರಿ

ಆದಿತ್ಯ ಎಲ್1 ಮಿಷನ್: ಇಸ್ರೋದ ಮೊಟ್ಟಮೊದಲ ಸೂರ್ಯಶಿಕಾರಿ

ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮೊಟ್ಟಮೊದಲ ಸೋಲಾರ್ ಮಿಷನ್ ಆದಿತ್ಯ-ಎಲ್ 1 ಗೆ 2019ರಲ್ಲಿ ಚಾಲನೆ ನೀಡಲು ಸಿದ್ಧತೆ ನಡೆಸಿದೆ. ಇದು ಸೂರ್ಯನ ಅಧ್ಯಯನಕ್ಕಾಗಿ ಭಾರತದ ನಡೆಸುತ್ತಿರುವ ಮೊಟ್ಟಮೊದಲ ವೈಜ್ಞಾನಿಕ ಸಂಶೋಧನಾ ಪ್ರಯತ್ನವಾಗಿದೆ.

ಮಿಷನ್ನಲ್ಲಿ 1500 ಕೆಜಿ ತೂಕದ ಕ್ಲಾಸ್ ಆದಿತ್ಯ-ಎಲ್1 ಉಪಗ್ರಹವನ್ನು ಹ್ಯಾಲೊ ಕಕ್ಷೆಗೆ ಲಗ್ರಾನಗ್ಲೆನ್ ಪಾಯಿಂಟ್ ಎಲ್1 ಸುತ್ತ ಹಾರಿಬಿಡುವ ಉದ್ದೇಶ ಹೊಂದಲಾಗಿದೆ. ಇದು ಸೂರ್ಯ ಹಾಗೂ ಭೂಮಿ ನಡುವೆ ಇರುವ ಕಕ್ಷೆಯಾಗಿದೆ. ಇದು ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರದಲ್ಲಿದೆ.

ಪ್ರಮುಖ ಅಂಶಗಳು

ಮಿಷನ್ ಇಸ್ರೋ ಹಾಗೂ ಭಾರತದ ವಿವಿಧ ವೈಜ್ಞಾನಿಕ ಸಂಸ್ಥೆಗಳಾದ ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಆಸ್ಟ್ರೋಫಿಸಿಕ್ಸ್ (ಬೆಂಗಳೂರು), ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟರ್ ರೀಸರ್ಚ್ (ಮುಂಬೈ), ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರೋನಮಿ ಅಂಡ್ ಆಸ್ಟ್ರೋಫಿಸಿಕ್ಸ್ (ಪುಣೆ) ಮತ್ತಿತರ ಸಂಘ ಸಂಸ್ಥೆಗಳ ಭೌತವಿಜ್ಞಾನಿಗಳ ಜಂಟಿ ಸಹಭಾಗಿತ್ವದ ಯೋಜನೆಯಾಗಿದೆ. ಪಿಎಸ್ಎಲ್ವಿ 15 ಲಾಂಚರ್ ಸಹಾಯದಿಂದ ಉಪಗ್ರಹವನ್ನು ಹಾರಿ ಬಿಡಲಾಗುತ್ತದೆ. ಮುಂದಿನ ಸೌರ ಆವೃತ್ತದ ಆರಂಭಿಕ ಹಂತದಲ್ಲಿ ಇದನ್ನು ಉಡಾಯಿಸಲಾಗುತ್ತದೆ. ಉಪಗ್ರಹವನ್ನು ಎಲ್1 ಕಕ್ಷೆಯ ಕೇಂದ್ರಕ್ಕೆ ಮತ್ತು ಸೂರ್ಯನ ಗುರುತ್ವಾಕರ್ಷಣೆ ಕ್ಷೇತ್ರದ ಚಿತ್ರ ಸೆರೆ ಹಿಡಿಯುವ ಸಲುವಾಗಿ ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತಿದೆ. ಕೇಂದ್ರದಿಂದ ಸೂರ್ಯನ ಅತ್ಯಂತ ನಿಕಟವಾದ ಚಿತ್ರಗಳನ್ನು ಸೆರೆಹಿಡಿಯುವುದು ಸಾಧ್ಯವಾಗಲಿದೆ ಎಂಬ ವಿಶ್ವಾಸವನ್ನು ವಿಜ್ಞಾನಿಗಳು ಹೊಂದಿದ್ದಾರೆ. ಹಲವು ವರ್ಷಗಳ ಕಾಲ ಗ್ರಹಣಗಳಿಂದ ಕೂಡಾ ಇದಕ್ಕೆ ತೊಂದರೆಯಾಗುವ ಸಾಧ್ಯತೆಗಳಿಲ್ಲ.

ಮಿಷನ್ ಗುರಿಗಳು

* ಸೂರ್ಯನ ಅತ್ಯಂತ ಹೊರ ಪದರ ಕ್ರಿಯಾತ್ಮಕ ಸ್ವರೂಪದ ಬಗ್ಗೆ ಅಧ್ಯಯನ ಮಾಡುವುದು ಹಾಗೂ ಇದರ ಜತೆಗೆ ಕೊರೊನಾ ಮತ್ತು ಕ್ರೊಮೊಸ್ಪಿಯರ್ ಅಧ್ಯಯನ ನಡೆಸುವುದು ಮತ್ತು ಕೊರೊನಲ್ ಮಾಸ್ ಇಜೆಕ್ಷನ್ ಬಗ್ಗೆ ಅಂಕಿ ಅಂಶಗಳನ್ನು ಸಂಗ್ರಹಿಸುವುದು.

* ಸೌರ ಗಾಳಿಯ ಬಗ್ಗೆ ಅಧ್ಯಯನ ಮಾಡುವುದು ಮತ್ತು ಅವುಗಳ ಪಥದ ಬಗ್ಗೆ ಅಂತರ ಗ್ರಹ ಬಾಹ್ಯಾಕಾಶ ವ್ಯವಸ್ಥೆ ಮೂಲಕ ಸೂರ್ಯನಿಂದ ಭೂಮಿಯ ವರೆಗೆ ಅಧ್ಯಯನ ಕೈಗೊಳ್ಳುವುದು.

* ಅಧ್ಯಯನವು ಬಾಹ್ಯಾಕಾಶದ ಹವಾಮಾನ ಅಂದಾಜಿಸುವಿಕೆ ಬಗೆಗಿನ ಮಾಹಿತಿ ಸಂಗ್ರಹದ ನಿಟ್ಟಿನಲ್ಲೂ ಗಮನ ಹರಿಸಲಿದೆ.

ಮಿಷನ್ ಪೇಲೋಡ್ಗಳು

ಆದಿತ್ಯ-ಎಲ್ ಮಿಷನ್ ಏಳು ಪೇಲೋಡ್ಗಳನ್ನು ಹೊಂದಿದೆ.

* ಗೋಚರವಾಗುವ ಎಮಿಷನ್ ಲೈನ್ ಕೊರೊನಾಗ್ರಾಫ್ (ವಿಇಎಲ್ಜಿ): ಇದು ಆದಿತ್ಯ-1 ಉಪಗ್ರಹದ ಅತಿದೊಡ್ಡ ಪೇಲೋಡ್ ಅಥವಾ ಸಾಧನವಾಗಿದೆ. ಇದು ಸೂರ್ಯನ ಕೊರೊನಾದ ಡಯಾಗ್ನೋಸ್ಟಿಕ್ ಮಾನದಂಡಗಳನ್ನು ಅಧ್ಯಯನ ಮಾಡಲಿದೆ ಹಾಗು ಕೊರೊನಲ್ ಮಾಸ್ ಇಜೆಕ್ಷನ್ ಮೂಲದ ಬಗ್ಗೆ ಅಧ್ಯಯನ ಮಾಡಲಿದೆ. ಇದರ ಜತೆಗೆ ಸೂರ್ಯನ ಕೊರೊನಾ ಭಾಗದ ಆಯಸ್ಕಾಂತೀಯ ಕ್ಷೇತ್ರದ ಬಗ್ಗೆಯೂ ಮಾಪನ ಮಾಡಲಿದೆ.

* ಸೋಲಾರ್ ಲೋ ಎನರ್ಜಿ ಎಕ್ಸ್-ರೇ ಸ್ಪೆಕ್ಟೋಮೀಟರ್ (ಎಸ್ಓಎಲ್ಇಎಕ್ಸ್ಎಸ್): ಇದನ್ನು ಎಕ್ಸ್-ರೇ ಫ್ಲೇರ್ಸ್ (1-30 ಕೆಇವಿ) ಮೇಲ್ವಿಚಾರಣೆಗಾಗಿ ಬಳಸಿಕೊಳ್ಳಲಾಗುತ್ತದೆ. ಇದು ಸೋಲಾರ್ ಕೊರೋನಾದ ಶಾಖ ವ್ಯವಸ್ಥೆಯ ಬಗೆಗಿನ ಅಧ್ಯಯನಕ್ಕೆ ಸಹಕಾರಿಯಾಗಲಿದೆ.

* ಹೈ ಎನರ್ಜಿ ಎಲ್1 ಆರ್ಬಿಟಿಂಗ್ ಎಕ್ಸ್ರೇ ಸ್ಪೆಕ್ಟೋಮೀಟರ್ (ಎಚ್ಇಎಲ್10ಎಸ್)"ಇದನ್ನು ಸೂರ್ಯನ ಬೆಂಬಕಿಕ ಇಂಪಲ್ಸಿವ್ ಹಂತದಲ್ಲಿ 10ಕೆಇವಿಯಿಂದ 150 ಕೆಇವಿ ವರೆಗಿನ ಒರಟು ಎಕ್ಸ್ರೇ ವಿಕಿರಣದ ಅಧ್ಯಯನಕ್ಕೆ ಬಳಸಲಾಗುತ್ತದೆ.

* ಸೌರ ಅತಿನೇರಳೆ ಚಿತ್ರದ ಟೆಲೆಸ್ಕೋಪ್ (ಎಸ್ಯುಐಟಿ): ಇದು ಸೋಲಾರ್ ಫೋಟೊಸ್ಪಿಯರ್ ಮತ್ತು ಕ್ರೊಮೊಸ್ಪಿಯರ್ ಚಿತ್ರಗಳನ್ನು ಅತಿನೇರಳೆ ಭಾಗದಲ್ಲಿ ಸೆರೆಹಿಡಿಯುವುದು ಮಾತ್ರವಲ್ಲದೇ ಸೌರಶಕ್ತಿಯ ವ್ಯತ್ಯಯವನ್ನು ಕೂಡಾ ಅಧ್ಯಯನ ಮಾಡಲಿದೆ.

* ಆದಿತ್ಯದ ಪ್ಲಾಸ್ಮಾ ವಿಶ್ಲೇಷಣೆ ಪ್ಯಾಕೇಜ್ (ಪಿಎಪಿಎ): ಇದು ಸೂರ್ಯನ ಗಾಳಿಯ ಸಂಯೋಜನೆಯನ್ನು ಅಧ್ಯಯನ ಮಾಡಲಿದೆ ಮತ್ತು ಮಿಷನ್ ಜೀವಿತಾವಧಿಯಲ್ಲಿ ಇಂಧನ ವಿತರಣೆಗೆ ಕೂಡಾ ಇದು ಸಹಕಾರಿಯಾಗಲಿದೆ.

* ಆದಿತ್ಯ ಸೌರ ಗಾಳಿ ಕಣಗಳ ಪ್ರಯೋಗ (ಎಎಸ್ಪಿಇಎಕ್ಸ್): ಇದು ಸೂರ್ಯನ ಗಾಳಿಯ ಗುಣಕ್ಷಣಗಳ ವ್ಯತ್ಯಯ, ಹಂಚಿಕೆ ಮತ್ತು ಗುಚ್ಛ ಗುಣಲಕ್ಷಣಗಳನ್ನು ಅಧ್ಯಯನ ಮಾಡಲಿದೆ.

ಮಾಗ್ನೋಮೀಟರ್: ಇದನ್ನು ಅಂತರ ಗ್ರಹ ಆಯಸ್ಕಾಂತೀಯ ಕ್ಷೇತ್ರದ ಸ್ವರೂಪ ಹಾಗೂ ತೀವ್ರತೆಯನ್ನು ಅಳೆಯಲು ಬಳಸಲಾಗುತ್ತದೆ.

ಲಾಗ್ರೇಂಜ್ ಪಾಯಿಂಟ್

ಲಾಗ್ರೇಂಜ್ ಪಾಯಿಂಟ್ ಎನ್ನುವುದು ಬಾಹ್ಯಾಕಾಶದ ಒಂದು ಕೇಂದ್ರವಾಗಿದ್ದು, ಎರಡು ದೊಡ್ಡ ದ್ರವ್ಯರಾಶಿಗಳ ಗುರುತ್ವದ ಬಲಗಳು ಸಂಧಿಸುವ ಪ್ರದೇಶ. ಉದಾಹರಣೆಗೆ ಸೂರ್ಯ ಮತ್ತು ಭೂಮಿ ಅಥವಾ ಭೂಮಿ ಮತ್ತು ಸೂರ್ಯ ಮತ್ತಿತರ ದ್ರವ್ಯರಾಶಿಗಳು. ಇದರ ಜತೆಗೆ ಮೂರನೇ ಸಣ್ಣ ವಸ್ತುವಿನ ಸಮಾನ ಕೇಂದ್ರೀಕೃತ ಬಲ ಸಂಧಿಸುವ ಪ್ರದೇಶವೂ ಆಗಿರುತ್ತದೆ. ಬಲಗಳ ಸಂಯೋಗದಿಂದ ಸಮತೋಲನದ ಕೇಂದ್ರ ಸೃಷ್ಟಿಯಾಗುತ್ತದೆ. ಕೇಂದ್ರದಲ್ಲಿ ಬಾಹ್ಯಾಕಾಶ ಣೌಕೆಯನ್ನು ವೀಕ್ಷಣೆಗಾಗಿ ನಿಲುಗಡೆಗೊಳಿಸಲು ಸಾಧ್ಯವಾಗುತ್ತದೆ.

ಕೇಂದ್ರಗಳಿಗೆ 18ನೇ ಶತಮಾನದ ಖ್ಯಾತ ಗಣಿತಶಾಸ್ತ್ರಜ್ಞ ಜೋಸೆಫ್ ಲೂಯಿಸ್ ಲಾಗ್ರೇಂಜ್ ಎಂದು ಹೆಸರಿಸಲಾಗಿದೆ. ಭೂಮಿ ಹಾಗೂ ಸೂರ್ಯನ ಮಧ್ಯೆ ಐದು ಇಂಥ ಕೇಂದ್ರಗಳಿದ್ದು, ಎಲ್-1, ಎಲ್-2, ಎಲ್-3, ಎಲ್-4 ಮತ್ತು ಎಲ್-5 ಆಗಿದೆ. ಕಕ್ಷೆಗಳಲ್ಲಿ ಉಪಗ್ರಹಕ್ಕೆ ತನ್ನ ಕಕ್ಷೆಯನ್ನು ನಿರ್ವಹಿಸಿಕೊಳ್ಳಲು ತೀರಾ ಕಡಿಮೆ ಇಂಧನದ ಅಗತ್ಯತೆ ಇರುತ್ತದೆ. ಜತೆಗೆ ಇದು ಸೂರ್ಯನಿಂದ ಗ್ರಹಣಕ್ಕ ಒಳಗಾಗುವುದಿಲ್ಲ.

ಕೆಲ ಬಾಹ್ಯಾಕಾಶ ಏಜೆನ್ಸಿಗಳು ಯಶಸ್ವಿಯಾಗಿ ತಮ್ಮ ಉಪಗ್ರಹಗಳನ್ನು ಸ್ಥಳಕ್ಕೆ ಕಳುಹಿಸಿದ್ದು, ಸೋಲಾರ್ ಮತ್ತು ಹೆಲಿಯೊಸ್ಪಾರಿಕ್ ವೀಕ್ಷಣಾಲಯ (ಎಸ್ಓಎಚ್) ಎಂಬ ನಾಸಾ- ಇಎಸ್ ಸಹಭಾಗಿತ್ವದ ಉಪಗ್ರಹ ಸೇರಿದೆ. ಇದು ಸೂರ್ಯನ ಬಗ್ಗೆ ಹಾಗೂ ಸೂರ್ಯನ ಬಾಹ್ಯಾಕಾಶದ ವಾತಾವರಣದ ಬಗ್ಗೆ ಅಧ್ಯಯನ ಮಾಡುವ ಗುರಿ ಹೊಂದಿವೆ.

Comment