IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ರಾಷ್ಟ್ರ ರಾಜಧಾನಿ ವಲಯಕ್ಕೆ ಶಾಮಲೀ

ರಾಷ್ಟ್ರ ರಾಜಧಾನಿ ವಲಯಕ್ಕೆ ಶಾಮಲೀ

ಉತ್ತರ ಪ್ರದೇಶದ ಶಾಮಲೀ ಜಿಲ್ಲೆಯನ್ನು ರಾಷ್ಟ್ರ ರಾಜಧಾನಿ ವಲಯ (ಎನ್‍ಸಿಆರ್) ಕ್ಕೆ ಸೇರ್ಪಡೆ ಮಾಡಲಾಗಿದೆ. ಈ ಮೂಲಕ, ಈ ವಲಯಕ್ಕೆ ಒಟ್ಟಾರೆ 23 ಜಿಲ್ಲೆಗಳು ಸೇರ್ಪಡೆಯಾದಂತಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ರಾಷ್ಟ್ರ ರಾಜಧಾನಿ ವಲಯ ಯೋಜನಾ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎನ್‍ಸಿಆರ್‍ಗೆ ಸೇರ್ಪಡೆಯಾಗುವ ನಗರಗಳಲ್ಲಿ ಮೂಲಸೌಕರ್ಯ ಕ್ಷೇತ್ರದ ಅಭಿವೃದ್ಧಿಗೆ ಆಕರ್ಷಕ ಬಡ್ಡಿದರಗಳ ಹಣಕಾಸು ಸೌಲಭ್ಯ ಒದಗಿಸಲಾಗುತ್ತದೆ. ದೆಹಲಿ ಹೊರತುಪಡಿಸಿ ಪ್ರಸ್ತುತ, 22 ಜಿಲ್ಲೆಗಳು ಎನ್‍ಸಿಆರ್‍ನಲ್ಲಿವೆ. ಇವುಗಳಲ್ಲಿ 13 ಹರಿಯಾಣ, 7 ಉತ್ತರ ಪ್ರದೇಶ, 2 ರಾಜಸ್ತಾನ ರಾಜ್ಯಗಳಿಗೆ ಸೇರಿದ ಜಿಲ್ಲೆಗಳಾಗಿವೆ.

ಎನ್‍ಸಿಆರ್‍ಗೆ ಸೇರ್ಪಡೆಯಾಗುವ ರಾಜ್ಯಗಳು ಆಯಾ ಜಿಲ್ಲೆಗಳಿಗೆ ಸಂಬಂಧಿಸಿದ ಉಪವಲಯ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಹಾಗೂ 2018ರ ಮಾರ್ಚ್ ಒಳಗೆ ಅವುಗಳನ್ನು ಪೂರ್ಣಗೊಳಿಸಬೇಕೆಂದು ಸಭೆಯಲ್ಲಿ ನಿರ್ಧರಿಸಲಾಯಿತು. 

1985ರಲ್ಲಿ ರಾಷ್ಟ್ರ ರಾಜಧಾನಿ ವಲಯ ಯೋಜನಾ ಮಂಡಳಿ ಸ್ಥಾಪಿತವಾಗಿದ್ದು, ರಾಜಧಾನಿಗೆ ಸಾಮೀಪ್ಯ ಹೊಂದಿರುವ ಪ್ರದೇಶಗಳ ಭೂಮಿ ಮೇಲೆ ನಿಯಂತ್ರಣ ಹೊಂದಲು ನೀತಿ ರೂಪಿಸುವುದು, ಮೂಲಸೌಕರ್ಯ ಅಭಿವೃದ್ಧಿ ಉತ್ತೇಜಿಸುವುದು ಇದರ ಪ್ರಮುಖ ಕೆಲಸ.
 

Comment