IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಆರೋಗ್ಯ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ಭಾರತ- ಕ್ಯೂಬಾ ಒಪ್ಪಂದ

ಆರೋಗ್ಯ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ಭಾರತ- ಕ್ಯೂಬಾ ಒಪ್ಪಂದ

ಆರೋಗ್ಯ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ಭಾರತ ಹಾಗೂ ಕ್ಯೂಬಾ ಒಪ್ಪಂದ ಮಾಡಿಕೊಂಡಿವೆ. ಇದು ಆರೋಗ್ಯ ಕ್ಷೇತ್ರದಲ್ಲಿ ಪರಸ್ಪರ ಜ್ಞಾನ ವಿನಿಮಯಕ್ಕೆ ಅವಕಾಶ ಮಾಡಿಕೊಡುತ್ತದೆ. ಎರಡು ದೇಶಗಳ ನಡುವೆ ಆರೋಗ್ಯ ಕ್ಷೇತ್ರದಲ್ಲಿ ಪರಸ್ಪರ ಸಹಕಾರದ ಚೌಕಟ್ಟು ರೂಪಿಸುವಲ್ಲಿ ಇದು ಮಹತ್ವದ್ದಾಗಿದೆ. ಒಪ್ಪಂದದ ಮುಖ್ಯ ಉದ್ದೇಶವೆಂದರೆ, ಸಮಗ್ರವಾದ ಅಂತರ ಸಚಿವಾಲಯ ಮತ್ತು ಅಂತರ ಸಾಂಸ್ಥಿಕ ಸಹಕಾರವನ್ನು ಆರೋಗ್ಯಕ್ಷೇತ್ರದಲ್ಲಿ ವಿನಿಮಯ ಮಾಡಿಕೊಳ್ಳುವುದು.

ಮುಖ್ಯ ಸಹಕಾರ ಕ್ಷೇತ್ರಗಳು

ಇದರ ಮುಖ್ಯ ಉದ್ದೇಶವೆಂದರೆ, ವೈದ್ಯರಿಗೆ, ಅಧಿಕಾರಿಗಳಿಗೆ, ಇತರ ಆರೋಗ್ಯ ಕಾರ್ಯಕರ್ತರಿಗೆ ಮತ್ತು ತಜ್ಞರಿಗೆ ತರಬೇತಿ ನೀಡುವುದು ಹಾಗೂ ಮಾಹಿತಿ ವಿನಿಮಯ ಮಾಡಿಕೊಳ್ಳುವುದು. ಇದು ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಆರೋಗ್ಯ ಸೇವೆ ಮತ್ತು ಆರೋಗ್ಯ ಕಾಳಜಿ ಸೌಲಭ್ಯವನ್ನು ಅಭಿವೃದ್ಧಿಪಡಿಸುವುದು ಇದರ ಉದ್ದೇಶ.

ಇದು ಔಷಧ ಕ್ಷೇತ್ರ, ವೈದ್ಯಕೀಯ ಸಾಧನಗಳು ಮತ್ತು ಮಾಹಿತಿಗಳ ವಿನಿಮಯಕ್ಕೆ ಕೂಡಾ ಅವಕಾಶ ಮಾಡಿಕೊಡುತ್ತದೆ. ಇದು ಔಷಧ ಉತ್ಪಾದನೆ ಮತ್ತು ಇತರ ಗುರುತಿಸಲ್ಪಟ್ಟ ಪ್ರದೇಶದಲ್ಲಿ ವಹಿವಾಟು ಅಭಿವೃದ್ಧಿ ಅವಕಾಶಗಳ ಉತ್ತೇಜನಕ್ಕೆ ಕೂಡಾ ಸಹಕಾರಿಯಾಗಿದೆ. ಒಪ್ಪಂದ ಜೀವರಕ್ಷಕ ಮತ್ತು ಅಗತ್ಯ ಔಷದಿಗಳ ಖರೀದಿ ಹಾಗೂ ಔಷಧ ಪೂರೈಕೆ ಮೂಲಗಳಿಗೆ ನೆರವು ನೀಡುವ ವ್ಯವಸ್ಥೆಯನ್ನು ಕೂಡಾ ಒಳಗೊಂಡಿರುತ್ತದೆ.

ಸಾಂಕ್ರಾಮಿಕವಲ್ಲದ ರೋಗಗಳ ತಡೆಗೆ ಸಹಭಾಗಿತ್ವವನ್ನು ಅಭಿವೃದ್ಧಿಪಡಿಸುವುದು ಹಾಗೂ ಪರಸ್ಪರ ಆಸಕ್ತಿಯ ವಿಷಯಗಳಲ್ಲಿ ಉಭಯ ದೇಶಗಳಿಗೆ ಲಾಭವಾಗುವಂತೆ ಕ್ರಮಗಳನ್ನು ಕೈಗೊಳ್ಳುವುದು ಇದರ ಉದ್ದೇಶ. ಹೃದ್ರೋಗ, ಕ್ಯಾನ್ಸರ್, ಮಾನಸಿಕ ಆರೋಗ್ಯ ಹಾಗೂ ಮರೆಗುಳಿತನದಂಥ ಸುಸ್ಥಿರ ಅಭಿವೃದ್ಧಿ ಗುರಿಯ ಅಂಶಗಳಿಗೆ ಒತ್ತು ನೀಡುವುದು ಸೇರಿದೆ. ಇದು ಹವಾಮಾನ ಬದಲಾವಣೆ ಪರಿಣಾಮವು ಸಾಂಕ್ರಾಮಿಕ ಹಾಗೂ ಇತರ ಸೊಳ್ಳೆಗಳಿಂದ ಹರಡುವ ರೋಗದ ಬಗ್ಗೆ ಒತ್ತು ನೀಡುವುದು ಒಪ್ಪಂದದ ಇನ್ನೊಂದು ಪ್ರಮುಖ ಅಂಶವಾಗಿದೆ.

ಉತ್ಪಾದನೆಯಲ್ಲಿ ಸುರಕ್ಷತೆ, ವರ್ಗಾವಣೆ, ವಿತರಣೆ ಮತ್ತು ಆಹಾರ ವಿತರಣೆಯಲ್ಲಿ ಸುರಕ್ಷತೆಗೆ ಇದು ಒತ್ತು ನೀಡಲಿದೆ. ನೈರ್ಮಲ್ಯ ಮತ್ತು ಆಹಾರ ಸುರಕ್ಷೆ ಬಗ್ಗೆ ನಾಗರಿಕರಿಗೆ ಮಾಹಿತಿ ಮತ್ತು ಸಂವಹನವನ್ನು ಒದಗಿಸುವುದು ಹಾಗೂ ಆರೋಗ್ಯಕರ ಆಹಾರ ಸೇವನೆ ಹವ್ಯಾಸಗಳನ್ನು ಜನಸಾಮಾನ್ಯರಲ್ಲಿ ರೂಢಿಸುವುದು ಇದರ ಗುರಿಯಾಗಿದೆ.

Comment