Universal School Of Administration Integrated Degree college Admission Open for more details contact: 9686664985

ರೆಪೊ ದರ ಶೇಕಡ 6ರಲ್ಲೇ ಮುಂದುವರಿಕೆ

ರೆಪೊ ದರ ಶೇಕಡ 6ರಲ್ಲೇ ಮುಂದುವರಿಕೆ

ಭಾರತೀಯ ರಿಸರ್ವ್ ಬ್ಯಾಂಕಿನ ಆರು ಮಂದಿಯ ವಿತ್ತೀಯ ನೀತಿ ಸಮಿತಿಯು ದ್ರವ್ಯತೆ ಹೊಂದಾಣಿಕೆ ವ್ಯವಸ್ಥೆಯಡಿ ರೆಪೊದರವನ್ನು ಶೇಕಡ 6 ದರದಲ್ಲೇ ಮುಂದುವರಿಸಲು ನಿರ್ಧರಿಸಿದೆ.

ಇದರೊಂದಿಗೆ ಆರ್ಬಿಐನ ಐದನೇ ದ್ವೈಮಾಸಿಕ ನೀತಿ ಪರಾಮರ್ಶೆಯಲ್ಲಿ ಕೂಡಾ ಒಂದೇ ದರ ಮುಂದುವರಿದಿದೆ. ನಿರ್ಧಾರವು ಮಾರುಕಟ್ಟೆ ನಿರೀಕ್ಷೆಗಳು ಹಾಗೂ ತಟಸ್ಥ ಹಾಗೂ ನಿರಂತರ ವಿತ್ತೀಯ ನೀತಿಯನ್ನು ಸೂಚಿಸುತ್ತದೆ ಹಾಗೂ ಮಧ್ಯಮ ಪ್ರಮಾಣದ ಹಣದುಬ್ಬರ ಗುರಿಯಾದ ಶೇಕಡ 4ನ್ನು ಮುಂದುವರಿಸುವ ನಿಟ್ಟಿನಲ್ಲಿ ಮತ್ತು ಪ್ರಗತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮುಂದುವರಿಯುತ್ತದೆ.

ನೀತಿ ದರಗಳು

ರೆಪೊದರ: ದ್ರವ್ಯತೆ ಹೊಂದಾಣಿಕೆ ವ್ಯವಸ್ಥೆಯಡಿ ರೆಪೊದರವನ್ನು ಶೇಕಡ 6 ದರದಲ್ಲೇ ಮುಂದುವರಿಸಲು ನಿರ್ಧರಿಸಿದೆ.

ರಿವರ್ಸ್ ರೆಪೊ ದರ: ರಿವರ್ಸ್ ರೆಪೊ ದರವು ಆರ್ಬಿಐಗೆ ಬ್ಯಾಂಕುಗಳು ನೀಡುವ ಸಾಲದ ದರವಾಗಿದ್ದು, ಇದು ಶೇಕಡ 5.75 ದರದಲ್ಲೇ ಮುಂದುವರಿದಿದೆ.

ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ದರ: ದರವು ಬ್ಯಾಂಕುಗಳು ಒಂದು ದಿನದ ಅವಧಿಗೆ ರಿಸರ್ವ್ ಬ್ಯಾಂಕಿನಿಂದ ಸರ್ಕಾರಿ ಭದ್ರತಾ ಪತ್ರಗಳ ಆಧಾರದಲ್ಲಿ ಪಡೆಯುವ ಸಾಲವಾಗಿದ್ದು, ಇದನ್ನು ಅಲ್ಪಾವಧಿ ಸಾಲ ಯೋಜನೆ ಎಂದು ಪರಿಗಣಿಸಲಾಗುತ್ತದೆ. ದರ ಶೇಖಡ 6.25ರಲ್ಲಿ ಮುಂದುವರಿಯಲಿದೆ.

ಬ್ಯಾಂಕ್ ದರ: ಇದು ಆರ್ಬಿಐ ವಾಣಿಜ್ಯ ಬ್ಯಾಂಕುಗಳಿಗೆ ಣಿಡುವ ಸಾಲದ ದರವಾಗಿದ್ದು, ಇದು ಶೇಕಡ 6.25ರಲ್ಲಿ ಮುಂದುವರಿಯಲಿದೆ. ಇದು ವಾಣಿಜ್ಯ ಬ್ಯಯಾಂಕುಗಳ ಸಾಲದ ಮೇಲೆ ಪರಿಣಾಮ ಬಿರುತ್ತದೆ. ಅಧಿಕ ಬ್ಯಾಂಕ್ ದರದಿಂದಾಗಿ ಬ್ಯಾಂಕುಗಳು ಸಾಲದ ಮೇಲೆ ವಿಧಿಸುವ ಬಡ್ಡಿದರ ಕೂಡಾ ಹೆಚ್ಚಿ ಗ್ರಾಹಕರಿಗೆ ಹೊರೆಯಾಗುತ್ತದೆ.

ನಗದು ದಾಸ್ತಾನು ಅನುಪಾತ (ಸಿಆರ್ಆರ್): ನಗದು ದಾಸ್ತಾನು ಅನುಪಾತ ಎಂದರೆ ಬ್ಯಾಂಕುಗಳು ಆರ್ಬಿಐನಲ್ಲಿ ಇಡಬೇಕಾದ ನಿಧಿಯ ಮೊತ್ತ. ಇದು ಕೂಡಾ ಶೇಕಡ 4 ದರದಲ್ಲೇ ಮುಂದುವರಿಯುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಸಿಆರ್ಆರ್ ಅನ್ನು ವ್ಯವಸ್ಥೆಯಿಂದ ಅಧಿಕ ಹಣದ ಹರಿವನ್ನು ನಿಯಂತ್ರಿಸುವ ಸಲುವಾಗಿ ಬಳಸಿಕೊಳ್ಳುತ್ತದೆ.

ಶಾಸನಬದ್ಧ ದ್ರವ್ಯತೆ ಅನುಪಾತ (ಎಸ್ಎಲ್ಆರ್): ಇದು ಶೇಕಡ 19,5 ಬದಲಾಗಿ ಶೇಕಡ 20ಕ್ಕೆ ಹೆಚ್ಚಲಿದೆ. ಇದು ಬ್ಯಾಂಕುಗಳು ನಿಗದಿತವಾಘಿ ನಿರ್ವಹಿಸಬೇಕಾದ ನಿವ್ವಳ ಬೇಡಿಕೆಯ ಭಾಗವಾಗಿದೆ. ದ್ರವ್ಯತೆ ಆಸ್ತಿಗಳಾದ ಚಿನ್ನ, ನಗದು ಮತ್ತು ಸೆಕ್ಯುರಿಟಿಗಳು, ಖಜಾನೆ ಬಿಲ್ ಹಾಗೂ ದಿನಾಂಕ ನಿಗದಿಪಡಿಸಿದ ಭದ್ರತಾಪತ್ರಗಳನ್ನು ಒಳಗೊಂಡಿದೆ.

Comment