New KAS prelims batch starts from 6th August 2018 - For registration Contact: 9686664983/9845512052. Admission Open for Universal School of Admission (B.A & B.com with IAS/KAS Integrated Coaching) Contact - 9686664985/080-46568844

ದೆಹಲಿಯಲ್ಲಿ ಏಷ್ಯನ್ ದೇಶಗಳ ಸಮನ್ವಯಗೊಳಿಸುವಿಕೆ ಕಾರ್ಯಪಡೆ ಸಮ್ಮೇಳನ

ಏಷ್ಯನ್ ದೇಶಗಳ ಸಮನ್ವಯಗೊಳಿಸುವಿಕೆ ಕಾರ್ಯಪಡೆಯ 22ನೇ ವಾರ್ಷಿಕ ಸಮ್ಮೇಳನ ದೆಹಲಿಯಲ್ಲಿ ಇತ್ತೀಚೆಗೆ ನಡೆಯಿತು. ಇದನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವೆ ಅನುಪ್ರಿಯಾ ಪಟೇಲ್ ಉದ್ಘಾಟಿಸಿದರು.

ಐದು ದಿನಗಳ ಸಮ್ಮೇಳನವನ್ನು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್ಸಿಓ) ಹಾಗೂ ರಾಷ್ಟ್ರೀಯ ಔಷಧ ನಿಯಂತ್ರಣ ಪ್ರಾಧಿಕಾರ (ಎನ್ಡಿಆರ್) ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಭಾಗಿತ್ವದಲ್ಲಿ ಆಯೋಜಿಸಿದೆ.

ಸಮ್ಮೇಳನದ ಮುಖ್ಯ ಉದ್ದೇಶವೆಂದರೆ ಏಷ್ಯಾ ಖಂಡದಲ್ಲಿ ಮತ್ತು ಹೊರಗೆ ವೈದ್ಯಕೀಯ ಸಾಧನಗಳ ನಿಯಂತ್ರಣವನ್ನು ಸನ್ವಯಗೊಳಿಸುವ ನಿಟ್ಟಿನಲ್ಲಿ ಚೌಕಟ್ಟು ಅಭಿವೃದ್ಧಿಪಡಿಸಿ ಶಿಫಾರಸ್ಸು ಮಾಡುವುದು. ಏಷ್ಯನ್ ದೇಶಗಳ ಔಷಧ ನಿಯಂತ್ರಕರು ಹಾಗೂ ಉದ್ಯಮ ಕ್ಷೇತ್ರದಲ್ಲಿ ಜ್ಞಾನ ಮತ್ತು ಅನುಭವವನ್ನು ವಿನಿಮಯ ಮಾಡಿಕೊಳ್ಳುವುದು.

ಏಷ್ಯನ್ ದೇಶಗಳ ಸಮನ್ವಯಗೊಳಿಸುವಿಕೆ ಕಾರ್ಯಪಡೆ

ಏಷ್ಯನ್ ದೇಶಗಳ ಸಮನ್ವಯಗೊಳಿಸುವಿಕೆ ಕಾರ್ಯಪಡೆಯು ಒಂದು ಲಾಭರಹಿತ ಸಂಸಥೆಯಾಗಿದ್ದು, ಇದರ ಮುಖ್ಯ ಉದ್ದೇಶವೆಂದರೆ ಏಷ್ಯಾ ಖಂಡದಲ್ಲಿ ಮತ್ತು ಹೊರಗೆ ವೈದ್ಯಕೀಯ ಸಾಧನಗಳ ನಿಯಂತ್ರಣವನ್ನು ಸನ್ವಯಗೊಳಿಸುವ ನಿಟ್ಟಿನಲ್ಲಿ ಚೌಕಟ್ಟು ಅಭಿವೃದ್ಧಿಪಡಿಸಿ ಶಿಫಾರಸ್ಸು ಮಾಡುವುದು. ಅಂತರರಾಷ್ಟ್ರೀಯ ವೈದ್ಯಕೀಯ ಸಾಧನಗಳ ನಿಯಂತ್ರಣ ವೇದಿಕೆ (ಐಎಂಡಿಆರ್ಎಫ್) ಮಾರ್ಗಸೂಚಿಗೆ ಅನುಗುಣವಾಗಿ ಇದನ್ನು ರೂಪಿಸುವುದು. ಇದನ್ನು 1999ರಲ್ಲಿ ಆರಂಭಿಸಲಾಗಿದ್ದು, 30 ದೇಶಗಳ ನಿಯಂತ್ರಕರು ಮತ್ತು ಉದ್ಯಮಗಳು ಇದರ ಸದಸ್ಯತ್ವ ಪಡೆದಿವೆ. ಇದು ಸಂಬಂಧಪಪಟ್ಟ ಅಂತರರಾಷ್ಟ್ರೀಯ ಸಂಸ್ಥೆಗಳಾದ ಐಎಂಡಿಆರ್ಎಫ್. ಐಎಸ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯಂಥ ಸಂಘ ಸಂಸ್ಥೆಗಳ ಜತೆಗೂಡಿ ಕಾರ್ಯನಿರ್ವಹಿಸುತ್ತದೆ.

Comment