Universal School Of Administration Integrated Degree college Admission Open for more details contact: 9686664985

12 ವರ್ಷಕ್ಕಿಂತ ಕೆಳಗಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದರೆ ಗಲ್ಲು : ಮಧ್ಯಪ್ರದೇಶ

12 ವರ್ಷಕ್ಕಿಂತ ಕೆಳಗಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದರೆ ಆಪಾದಿತರಿಗೆ ಗಲ್ಲು ಶಿಕ್ಷೆ ವಿಧಿಸುವ ಮಸೂದೆಯನ್ನು ಮಧ್ಯಪ್ರದೇಶ ವಿಧಾನಸಭೆ ಆಂಗೀಕರಿಸಿದೆ. ದಂಡ ವಿಧಿ (ಮಧ್ಯಪ್ರದೇಶ ಸಂಶೋಧನ) ವಿಧೇಯಕ- 2017 ಹೆಸರಿನ ವಿಧೇಯಕವನ್ನು ವಿಧಾನಸಭೆ ಸರ್ವಾನುಮತದಿಂದ ಆಂಗೀಕರಿಸಿದೆ. ಇದರ ಅನ್ವಯ 12 ವರ್ಷಕ್ಕಿಂತ ಕೆಳಗಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದವರಿಗೆ ಗಲ್ಲುಶಿಕ್ಷೆ ವಿಧಿಸಲು ಅವಕಾಶವಿದೆ.

ಇದರೊಂದಿಗೆ ಮಧ್ಯಪ್ರದೇಶ ಇಂಥ ಶಿಕ್ಷೆಯನ್ನು ವಿಧಿಸಲು ನಿರ್ಧರಿಸಿದ ಮೊಟ್ಟಮೊದಲ ರಾಜ್ಯ ಸರ್ಕಾರ ಎನಿಸಿಕೊಂಡಿದೆ. ಮಸೂದೆಯನ್ನು ಇದೀಗ ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಿಕೊಡಲಾಗುತ್ತದೆ. ರಾಷ್ಟ್ರಪತಿಗಳ ಅನುಮೋದನೆ ದೊರಕಿದ ಬಳಿಕ ಅದು ಕಾನೂನಾಗಿ ಮಾರ್ಪಾಡಾಗಲಿದೆ.

ಮಸೂದೆಯ ಮುಖ್ಯ ಅಂಶಗಳು

ಮಸೂದೆಯ ಅನ್ವಯ 12 ವರ್ಷಕ್ಕಿಂತ ಕೆಳಗಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದವರಿಗೆ ಗಲ್ಲುಶಿಕ್ಷೆ ವಿಧಿಸಲು ಅವಕಾಶವಿದೆ. ಇಲ್ಲವೇ 15 ವರ್ಷದ ಕಠಿಣ ಜೈಲುಶಿಕ್ಷೆ ವಿಧಿಸಬಹುದಾಗಿದೆ. 12 ವರ್ಷಕ್ಕಿಂತ ಕೆಳಗಿನ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದವರಿಗೆ ಗಲ್ಲುಶಿಕ್ಷೆ ಅಥವಾ 20 ವರ್ಷವರೆಗಿನ ಕಠಿಣ ಶಿಕ್ಷೆ ವಿಧಿಸಲು ಅವಕಾಶವಿದೆ.

ಅಂತೆಯೇ ಮಹಿಳೆಯರನ್ನು ಚುಡಾಯಿಸುವುದು, ಹಿಂಬಾಲಿಸಿವುದು ಅಥವಾ ವಿವಾಹದ ಭರವಸೆ ನೀಡಿ ಲೈಂಗಿಕತೆ ನಡೆಸುವುದನ್ನು ಜಾಮೀನುರಹಿತ ಅಪರಾಧ ಎಂದು ಪರಿಣಿಸಲಾಗುವುದು ಹಾಗೂ ಕಠಿಣ ಶಿಕ್ಷೆ ವಧಿಸಲಾಗುವುದು. ಇದಲ್ಲದೇ ಎರಡು ಅಥವಾ ಹೆಚ್ಚು ಬಾರಿ ಅತ್ಯಾಚಾರ ಎಸಗಿದಲ್ಲಿ ಜೈಲು ಶಿಕ್ಷೆ ಪ್ರಮಾಣವನ್ನು ಹೆಚ್ಚಿಸಲು ಕೂಡಾ ಅವಕಾಶವಿದೆ.

ಮೊದಲ ಬಾರಿಗೆ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿದರೆ 3 ರಿಂದ 7 ವರ್ಷವರೆಗೆ ಶಿಕ್ಷೆ ವಿಧಿಸಬಹುದಾಗಿದೆ. ಎರಡು ಅಥವಾ ಹೆಚ್ಚಿನ ಬಾರಿಯ ಅಪರಾಧಕ್ಕೆ ಕನಿಷ್ಠ ಶಿಕ್ಷೆಯನ್ನು 7 ವರ್ಷದಿಂದ 10 ಲಕ್ಷಕ್ಕೆ ಹೆಚ್ಚಿಸಲಾಗಿದೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಚುಡಾಯಿಸುವುದಕ್ಕೆ 3 ವರ್ಷ ಜೈಲು ಶಿಕ್ಷೆ ಒದಗಿಸಬಹುದಾಗಿದೆ. ಎರಡನೇ ಬಾರಿ ಅಪರಾಧದಲ್ಲಿ ಸಿಕ್ಕಿಬಿದ್ದರೆ ಕನಿಷ್ಠ 3 ವರ್ಷದಿಂದ ಗರಿಷ್ಠ ಏಳು ವರ್ಷ ಜೈಲು ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಬಹುದಾಗಿದೆ.

Comment