IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಎನ್‍ಜಿಟಿಯಲ್ಲಿ ಏಕಸದಸ್ಯ ಪೀಠ ಸ್ಥಾಪನೆಗೆ ಅವಕಾಶ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಅಧ್ಯಕ್ಷರು ಏಕ ಸದಸ್ಯ ಪೀಠವನ್ನು ರಚಿಸಿಕೊಳ್ಳಲು ಕೇಂದ್ರ ಪರಿಸರ ಸಚಿವಾಲಯ ಒಪ್ಪಿಗೆ ನೀಡಿದೆ. ಆದರೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ಇದಕ್ಕೆ ಅವಕಾಶ ಇರುತ್ತದೆ. ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಪದ್ಧತಿಗಳು ಮತ್ತು ವಿಧಿವಿಧಾನಗಳು) ನಿಯಮಾವಳಿ- 2011ಕ್ಕೆ ಸೂಕ್ತ ತಿದ್ದುಪಡಿ ತಂದಿದೆ. ಸಂಬಂಧ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಆದರೆ ಇದು ವಿಶೇಷ ಸಂದರ್ಭಗಳನ್ನು ವ್ಯಾಖ್ಯಾನಿಸಿಲ್ಲ.

ನಡೆಯ ಮುಖ್ಯ ಕಾರನವೆಂದರೆ, ಎನ್ಜಿಟಿಯಲ್ಲಿನ ಖಾಲಿ ಹುದ್ದೆಗಳ ಸಮಸ್ಯೆಯನ್ನು ನಿಭಾಯಿಸುವುದು. ಹಿಂದಿನ ನಿಯಮಾವಳಿಯ ಅನ್ವಯ, ಎನ್ಜಿಟಿ ಪೀಠದಲ್ಲಿ ಎರಡು ಅಥವಾ ಹೆಚ್ಚಿನ ಸದಸ್ಯರು ಇರಬೇಕಾಗುತ್ತದೆ. ಇದರಲ್ಲಿ ಒಬ್ಬರು ನ್ಯಾಯಾಂಗ ಸದಸ್ಯರು ಹಾಗೂ ಮತ್ತೊಬ್ಬರು ತಜ್ಞರು ಇರುತ್ತಾರೆ. ನ್ಯಾಯಾಂಗ ಹಾಗೂ ಸ್ವತಂತ್ರ ತಜ್ಞರು ಎಲ್ಲ ವ್ಯಾಜ್ಯಗಳ ತಾಂತ್ರಿಕ ಆಯಾಮಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸುತ್ತಾರೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯನ್ನು 2010ರಲ್ಲಿ ಆರಂಭಿಸಲಾಗಿದ್ದು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಯ್ದೆ- 2010 ಅನ್ವಯ ಇದನ್ನು ಆರಂಭಿಸಲಾಗಿದೆ. ಇದರ ಮುಖ್ಯ ಉದ್ದೇಸವೆಂದರೆ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿಷಯಗಳನ್ನು ತಕ್ಷಣ ಮತ್ತು ಪರಿಣಾಮಕಾರಿಯಾಗಿ ವಿಲೇವಾರಿ ಮಾಡುವುದು. ಇದರ ಜತೆಗೆ ಪರಿಸರ ಸಂರಕ್ಷಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯ ಬಗೆಗಿನ ವ್ಯಾಜ್ಯಗಳನ್ನೂ ಇದು ಬಗೆಹರಿಸುತ್ತದೆ.

ಇದು ವ್ಯಾಜ್ಯಗಳನ್ನು ನ್ಯಾಯಬದ್ಧವಾಗಿ ತೀರ್ಮಾನಿಸುವ ಹೊಣೆ ಹೊಂದಿದ್ದು, ಪರಿಸರ, ಅರಣ್ಯ, ಜನರಿಗೆ ಹಾನಿಕಾರಕವಾಗುವ ರೀತಿಯಲ್ಲಿ ಪರಿಸರಾತ್ಮಕ ಬದ್ಧತೆಯನ್ನು ಪರಿಶೀಲಿಸುತ್ತದೆ.

ಇದು ವಿಶೇಷೀಕೃತ ಸಂಸ್ಥೆಯಾಗಿದ್ದು, ಪರಿಸರಾತ್ಮಕ ವಿಷಯಗಳನ್ನು ನಿರ್ವಹಿಸುವಲ್ಲಿ ಅಗತ್ಯವಾದ ಪರಿಣತಿಯನ್ನು ಹೊಂದಿರುತ್ತದೆ. ಇದರಲ್ಲಿ ಕಾನೂನು ಹಕ್ಕುಗಳು ಮತ್ತು ಪರಿಹಾರ ನೀಡಿಕೆ ಕೂಡಾ ಸೇರುತ್ತದೆ. ಪರಿಸರ ವಿಚಾರದಲ್ಲಿ ಯಾವುದೇ ವ್ಯಕ್ತಿ ಅಥವಾ ಆಸ್ತಿಗೆ ಹಾನಿಯಾದಾಗ ಅದಕ್ಕೆ ಪರಿಸರ ವಿಚಾರದಲ್ಲಿ ಪರಿಹಾರ ನೀಡುವ ಹೊಣೆ ಇರುತ್ತದೆ. ಇದು ನೀರು ಮತ್ತಿತರ ವಿವಾದಗಳ ಬಗ್ಗೆಯೂ ಪರಿಶೀಲನೆ ನಡೆಸುತ್ತದೆ.

ಎನ್ಜಿಟಿ ನೈಸರ್ಗಿಕ ನ್ಯಾಯ ತತ್ವದಿಂದ ನಿರ್ದೇಶಿತವಾಗಿದ್ದು, ನಾಗರಿಕ ಅಥವಾ ಅಪರಾಧ ದಂಡಸಂಹಿತೆಯ ವಿಧಿವಿಧಾನಗಳನ್ನು ಇದು ಒಳಗೊಂಡಿರುವುದಿಲ್ಲ. ಇದು ಯಾವುದೇ ಅರ್ಜಿಗಳು ಸಲ್ಲಿಕೆಯಾದ ಆರು ತಿಂಗಳ ಒಳಗಾಗಿ ವಿಲೇವಾರಿ ಮಾಡುವ ಹೊಣೆಗಾರಿಕೆಯನ್ನು ಹೊಂದಿರುತ್ತದೆ. ನವದೆಹಲಿಯಲ್ಲಿ ಎನ್ಜಿಟಿ ಇದ್ದು, ಇದರ ಪೀಠಗಳು ಭೋಪಾಲ್, ಪುಣೆ, ಕೊಲ್ಕತ್ತಾ ಹಾಗೂ ಚೆನ್ನೈಗಳಲ್ಲಿ ಇವೆ. ಇತರೆಡೆಗಳಲ್ಲಿ ಪ್ರಾದೇಶಿಕ ಪೀಠಗಳು ಇರುತ್ತವೆ.

Comment