Universal School Of Administration Integrated Degree college Admission Open for more details contact: 9686664985

ಜಿಸಿಸಿಯಿಂದ ಪ್ರತ್ಯೇಕ ಗುಂಪು ರಚಿಸಲು ಯುಎಇ , ಸೌದಿ ನಿರ್ಧಾರ

ಜಿಸಿಸಿಯಿಂದ ಪ್ರತ್ಯೇಕ ಗುಂಪು ರಚಿಸಲು ಯುಎಇ , ಸೌದಿ ನಿರ್ಧಾರ

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಸೌದಿ ಅರೇಬಿಯಾ ವಿಧ್ಯುಕ್ತವಾಗಿ ಹೊಸ ಆರ್ಥಿಕ ಹಾಗೂ ಪಾಲುದಾರಿಕೆ ಗುಂಪನ್ನು ರಚಿಸಿಕೊಂಡಿದ್ದು, ಇದಕ್ಕೆ ಜಂಟಿ ಸಹಕಾರ ಸಮಿತಿ ಎಂದು ಹೆಸರಿಸಲಾಗಿದೆ. ಇದು ಗಲ್ಫ್ ಸಹಕಾರ ಮಂಡಳಿ (ಜಿಸಿಸಿ)ಯಿಂದ ಭಿನ್ನವಾಗಿದೆ.

ಇದರಿಂದಾಗಿ ಇತರ ಆರು ಜಿಸಿಸಿ ಸದಸ್ಯರನ್ನು ಕಡೆಗಣಿಸಿದಂತಾಗಿದ್ದು, ಸೌದಿ ಅರೇಬಿಯಾ ನೇತೃತ್ವದ ಅರಬ್ ದೇಶಗಳು ರಾಜತಾಂತ್ರಿಕ ಸಂಘರ್ಷವನ್ನು ಕತಾರ್ನೊಂದಿಗೆ ಹೊಂದಿದ ಹಿನ್ನೆಲೆಯಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ. ಅರ್ಧದಷ್ಟು ದೇಶಗಳು ಕತಾರ್ನನ್ನು ನಿಷೇಧಿಸಿದ್ದು ಆದೇಶ ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ ನೀಡುತ್ತಿದೆ ಎಂದು ಆಪಾದಿಸಿವೆ.

ಹೊಸ ಸಮಿತಿಯು ಮುಖ್ಯವಾಗಿ ಯುಎಇ ಮತ್ತು ಸೌದಿ ಅರೇಬಿಯಾ ನಡುವೆ ಎಲ್ಲ ಕ್ಷೇತ್ರಗಳಲ್ಲಿ ಸಹಕಾರ ಹಾಗೂ ಸಮನ್ವಯನ್ನು ಸಾಧಿಸುವ ಗುರಿ ಹೊಂದಿದೆ. ಮಿಲಿಟರಿ, ರಾಜಕೀಯ, ಆರ್ಥಿಕ, ವ್ಯಾಪಾರ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಕೂಡಾ ಪರಸ್ಪರ ಸಹಕಾರ ನೀಡಲಿವೆ ಮತ್ತು ಪರಸ್ಪರ ದಏಶಗಳ ಹಿತಾಸಕ್ತಿಯನ್ನು ಕಾಯ್ದುಕೊಳ್ಳಿವೆ. ಇದರ ಮುಖ್ಯಸ್ಥರಾಗಿ ಅಬುದಾಬಿ ರಾಜ ಶೇಖ್ ಮೊಹ್ಮದ್ ಬಿನ್ ಝಯೇದ್ ಅಲ್ ನಹ್ಯಾನ್  ಹಾಗೂ ಯುಎಇ ಉಪಪ್ರಧಾನಿ ಶೇಕ್ ಮಸೂರ್ ಬಿನ್ ಝಯೇದ್ ಅಲ್ ನಹ್ಯಾನ್ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುವರು.

ಗಲ್ಫ್ ಸಹಕಾರ ಮಂಡಳಿ

ಗಲ್ಫ್ ಸಹಕಾರ ಮಂಡಳಿಯು ರಾಜಕೀಯ ಹಾಗೂ ಆರ್ಥಿಕ ಒಕ್ಕುಟವಾಗಿದ್ದು, ಅರೇಬಿಯನ್ ಭೂಭಾಗದ ಕುವೈತ್, ಒಮನ್, ಬಹರೇನ್, ಕತಾರ್, ಸೌದಿಅರೇಬಿಯಾ ಹಾಗೂ ಯುಎಇಯನ್ನು ಒಳಗೊಂಡಿದೆ. ಇದು ಆರ್ಥಿಕ ಭದ್ರತೆ, ಸಾಂಸ್ಕøತಿಕ ಹಾಗೂ ಸಾಮಾಜಿಕ ಸಹಕಾರಗಳನ್ನು ಆರು ದೇಶಗಳ ನಡುವೆ ಬಲಗೊಳಿಸುವ ಗುರಿ ಹೊಂದಿದೆ. ಪ್ರಾದೇಶಿಕ ವ್ಯವಹಾರಗಳ ಸಹಕಾರ ವಿಚಾರದ ಬಗ್ಗೆ ಚರ್ಚಿಸಲು ವಾರ್ಷಿಕವಾಗಿ ಶೃಂಗಸಭೆ ನಡೆಸುತ್ತವೆ. ಜಿಸಿಸಿ ಒಪ್ಪಂದಕ್ಕೆ 1981ರಲ್ಲಿ ಸಹಿ ಮಾಡಲಾಗಿದ್ದು, ಆಗ ಇದು ವಿಧ್ಯುಕ್ತವಾಗಿ ಚಾಲನೆ ಪಡೆದಿದೆ. ಇದರ ಕೇಂದ್ರ ಕಚೇರಿ ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿದೆ.

ಜಿಸಿಸಿಯ ಎಲ್ಲ ಸದಸ್ಯ ದೇಶಗಳು ರಾಜಪ್ರಭುತ್ವವನ್ನು ಹೊಂದಿದ್ದು, ಇದರಲ್ಲಿ ಕುವೈತ್, ಕತಾರ್ ಮತ್ತು ಬಹರೈನ್ನಲ್ಲಿ ಸಂವಿಧಾನಾತ್ಮಕ ರಾಜಪ್ರಭುತ್ವವಿದೆ. ಒಮನ್ ಮತ್ತು ಸೌದಿ ಅರೇಬಿಯಾ ಹೀಗೆ ಎರಡು ಸಂಪೂರ್ಣ ರಾಜಪ್ರಭುತ್ವ ಹೊಂದಿದ್ದರೆ, ಯುಎಪಿ ಒಕ್ಕೂಟ ರಾಜಪ್ರಭುತ್ವವನ್ನು ಹೊಂದಿದೆ. ಇದರಲ್ಲಿ ಏಳು ರಾಜ್ಯಗಳಿದ್ದು, ತನ್ನದೇ ಅಮೀರ್ಗಳನ್ನು ಇವು ಹೊಂದಿರುತ್ತವೆ.

Comment