IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಆಕಾಶ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಆಕಾಶ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಭೂಮಿಯ ಮೇಲ್ಮೈನಿಂದ ವಾಯುಪ್ರದೇಶದ ಗುರಿಯ ಮೇಲೆ ಹಾರಿಸಬಹುದಾದ ಆಕಾಶ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಇದನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿದ ರೇಡಿಯೊ ಫ್ರೀಕ್ವೆನ್ಸಿ ಸೀಕರ್ ಮೂಲಕ ಗುರಿಯನ್ನು ನಿರ್ದೇಶಿಸಿ ಪ್ರಯೋಗಿಸಲಾಗಿದೆ. ಇದನ್ನು ಚಂಡೀಪುರದ ಐಟಿಆರ್ನಿಂದ ಉಡಾಯಿಸಲಾಗಿದೆ.

ಪರೀಕ್ಷೆಯ ಅವಧಿಯಲ್ಲಿ ರಾಡಾರ್ಗಳು, ಟೆಲಿಮೆಟ್ರಿ ಹಾಗೂ ಎಲೆಕ್ಟ್ರೋ ಆಪ್ಟಿಕಲ್ ವ್ಯವಸ್ಥೆಯ ಬಗ್ಗೆ ಪರೀಕ್ಷಿಸಲಾಗಿದೆ. ಇಡೀ ಕರಾವಳಿಯುದ್ಧಕ್ಕೂ ಇರುವ ವ್ಯವಸ್ಥೆಯ ಮೂಲಕ ಎಲ್ಲ ಆರೋಗ್ಯ ಮಾನದಂಡಗಳನ್ನು ವಿಶ್ಲೇಷಿಸಬಹುದಾಗಿದೆ.

ಮಹತ್ವ

ಇದು ಭೂಮಿಯ ಮೇಲ್ಮೈನಿಂದ ಗಾಳಿಗೆ ಚಿಮ್ಮುವ ಮೊಟ್ಟಮೊದಲ ಸೂಪರ್ಸಾನಿಕ್ ಕ್ಷಿಪಣಿಯಾಗಿದ್ದು, ದೇಶೀಯವಾಗಿ ಅಭಿವೃದ್ಧಿಪಡಿಸಿದ ಸೀಕರ್ನಿಂದ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು. ಇದರಿಂದಾಗಿ ಭಾರತ ಯಾವುದೇ ಬಗೆಯ ಮೇಲ್ಮೈ ಕ್ಷಿಪಣಿಯನ್ನು ತಡೆಯುವ ಸಾಮಥ್ರ್ಯವನ್ನೂ ಹೊಂದಲಿದೆ.

ಆಕಾಶ್ ಕ್ಷಿಪಣಿ

ಆಕಾಶ್ ಕ್ಷಿಪಣಿಯು ಮಧ್ಯಮದೂರ ಸಾಮಥ್ರ್ಯದ ಮೇಲ್ಮೈನಿಂದ ವಾಯುಪ್ರದೇಶಕ್ಕೆ ಚಿಮ್ಮುವ ಕ್ಷಿಪಣಿಯಾಗಿದೆ. ಇದು ಮಧ್ಯಮದೂರದ ಗುರಿಯ ಮೇಲೆ ದಾಳಿ ಮಾಡುವ ಸಾಮಥ್ರ್ಯದ ಸೂಪರ್ಸಾನಿಕ್ ಕ್ಷಿಪಣಿಯಾಗಿದೆ. ಇದನ್ನು ರಕ್ಷಣಾ ತಂತ್ರಜ್ಞಾನ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಸಮಗ್ರ ನಿರ್ದೇಶಿತ ಕ್ಷಿಪನಿ ಅಭಿವೃದ್ಧಿ ಯೋಜನೆಯಡಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಇದು ಬಹು ಗಯರಿಯ, ಬಹು ದಿಕ್ಕಿನ ಎಲ್ಲ ಹವಾಗುಣಗಳಲ್ಲೂ ಪ್ರಯೋಗಿಸಬಹುದಾದ ವಾಯು ಸುರಕ್ಷಾ ಕ್ಷಿಪಣಿ ವ್ಯವಸ್ಥೆಯಾಗಿದೆ. ಇದನ್ನು ದೇಶೀಯವಾಗಿ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ಅಭಿವೃದ್ಧೀಪಡಿಸಿದೆ. ಇದನ್ನು ಸಮಗ್ರ ನಿರ್ದೇಶಿತ ಕ್ಷಿಪಣಿ ಅಭಿವೃದ್ಧಿ ಯೋಜನೆಯಡಿ ತಯಾರಿಸಲಾಗಿದೆ. ಇದರಲ್ಲಿ ಸರ್ವೇಕ್ಷಣೆ ಮತ್ತು ಜಾಡು ಹಿಡಿಯುವ ರಾಡಾರ್ ವ್ಯವಸ್ಥೆ ಇದ್ದು, ಮಧ್ಯಮದೂರ ಸಾಮಥ್ರ್ಯದ ಗುರಿಗಳ ಮೇಲೆ ತೀವ್ರವಾಗಿ ಕೆಳಭಾಗದಿಂದ, ಮಧಭಾಗದಿಂದ ಹಾಗೂ ಎತ್ತರ ಪ್ರದೇಶಗಳಿಂದ ದಾಳಿ ಮಾಡುವ ಸಾಮಥ್ರ್ಯ ಹೊಂದಿದೆ. ಇದರ ಸೂಪರ್ಸಾನಿಕ್ ವೇಗವು 2.8 ರಿಂದ 3.5 ಮ್ಯಾಕ್ ಆಗಿರುತ್ತದೆ.

ಇದು 55 ಕೆ.ಜಿ. ಸಿಡಿತಲೆಗಳನ್ನು ಒಯ್ಯುವ ಸಾಮಥ್ರ್ಯ ಹೊಂದಿದ್ದು, ಇದು ಯಾವುದೇ ಇತರ ಕ್ಷಿಪಣಿಯನ್ನು ಛೇರಿಸುವ, ವಾಯು ಗುರಿಗಳ ಮೇಲೆ ನಿಖರ ದಾಳಿ ಮಾಡುವ ಸಾಮಥ್ರ್ಯ ಹೊಂದಿದೆ. ಇದರ ದೂರ ಸಾಮಥ್ರ್ಯ ಸುಮಾರು 25 ಕಿಲೋಮೀಟರ್ ಆಗಿದ್ದು, 18 ಕಿಲೋಮೀಟರ್ ಎತ್ತರದಿಂದ ಹಿಡಿದು 30 ಮೀಟರ್ನಷ್ಟು ಕೆಳಗಿನ ಗುರಿಯ ಮೇಲೂ ದಾಳಿ ಮಾಡಲು ಶಕ್ತವಾಗಿದೆ.

ಇದು ರಾಮ್ಜೆಟ್ ಪ್ರೊಪಲ್ಷನ್ ವ್ಯವಸ್ಥೆಯನ್ನು ಹೊಂದಿದ್ದು, ವಿರೋಧಿ ಕ್ಷಿಪಣಿಯ ದಾಳಿಯನ್ನು ತಡೆದುಕೊಳ್ಳುವ ಸಾಮಥ್ರ್ಯವನ್ನು ಹೊಂದಿದೆ. ವಾಯು ಗುರಿಗಳನ್ನು ತಟಸ್ಥಗೊಳಿಸುವ ಯುದ್ಧ ಕ್ಷಿಪಣಿ ಇದಾಗಿದ್ದು, ಯುದ್ಧ ಕ್ಷಿಪಣಿ ಮಾತ್ರವಲ್ಲದೇ ಯುದ್ಧವಿಮಾನಗಳು, ಮಾನವ ರಹಿತ ವಾಯು ವಾಹನಗಳನ್ನು ಛೇಧಿಸಬಲ್ಲದು. ಇದನ್ನು ಭಾರತೀಯ ಸೇನೆಗೆ ಅಲ್ಪದೂರ ಸಾಮಥ್ರ್ಯದ ಮೇಲ್ಮೈನಿಂದ ವಾಯುಪ್ರದೇಶಕ್ಕೆ ಹಾರಾಡುವ ಕ್ಷಿಪಣಿಯಾಗಿ ಸೇರಿಸಿಕೊಳ್ಳಲಾಗಿದೆ. ಇದನ್ನು 2015 ಜುಲೈ ತಿಂಗಳಲ್ಲಿ ಭಾರತದ ವಾಯುಪಡೆಗೆ ವಿಧ್ಯುಕ್ತವಾಗಿ ನಿಯೋಜಿಸಲಾಗಿತ್ತು.

Comment