Universal School Of Administration Integrated Degree college Admission Open for more details contact: 9686664985

ನೇಪಾಳದಲ್ಲಿ ಅಂತರರಾಷ್ಟ್ರೀಯ ಹವಾಮಾನ ಬದಲಾವಣೆ ಸಮ್ಮೇಳನ

ಅಂತರರಾಷ್ಟ್ರೀಯ ಹವಾಮಾನ ಬದಲಾವಣೆ ಕುರಿತ ಸಮ್ಮೇಳನ ಇತ್ತೀಚೆಗೆ ನೇಪಾಳದಲ್ಲಿ ನಡೆಯಿತು. ಇದನ್ನು ನೇಪಾಳದ ಅಧ್ಯಕ್ಷ ಬಿದ್ಯಾ ದೇವಿ ಭಂಡಾರಿ ಉದ್ಘಾಟಿಸಿದರು. ರಿಸಿಲಿಯೆಂಟ್ ಹಿಂದು ಖುಷ್ ಹಿಮಾಲಯ: ಡೆವಲಪಿಂಗ್ ಸೊಲ್ಯೂಶನ್ಸ್ ಟವಡ್ರ್ಸ್ ಸಸ್ಟೈನೇಬಲ್ ಫ್ಯೂಚರ್ ಆಫ್ ಏಷ್ಯಾ" ಎಂಬ ಶೀರ್ಷಿಕೆಯಡಿ ಇದನ್ನು ಆಯೋಜಿಸಲಾಗಿದೆ. ಇದನ್ನು ನೇಪಾಳದ ಪರಿಸರ ಸಚಿವಾಲಯವು ಅಂತರರಾಷ್ಟ್ರೀಯ ಸಮಗ್ರ ಪರ್ವತ ಅಭಿವೃದ್ಧಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿತ್ತು.

ಪ್ರಮುಖ ಅಂಶಗಳು

ನಾಲ್ಕು ದಿನಗಳ ಸಮ್ಮೇಳನದ ಮುಖ್ಯ ಉದ್ದೇಶವೆಂದರೆ, ಏಷ್ಯಾಖಂಡದ ಸುಸ್ಥಿರ ಅಭಿವೃದ್ಧಿ ಭವಿಷ್ಯಕ್ಕಾಗಿ ವಾತಾವರಣವನ್ನು ಸಜ್ಜುಗೊಳಿಸುವುದು ಹಾಗು ಹವಾಮಾನ ಬದಲಾವಣೆಯ ಪರಿಣಾಮವನ್ನು ಕನಿಷ್ಠಗೊಳಿಸುವುದು. ಇದಕ್ಕೆ ಪೂರಕವಾದ ಕಟ್ಟಡಗಳನ್ನು ನಿರ್ಮಿಸುವುದು, ಪ್ರಾದೇಶಿಕ ಸಹಕಾರವನ್ನು ಹೆಚ್ಚಿಸುವುದು ಹಾಗೂ ಮಾಹಿತಿಗಳ ಅಂತರವನ್ನು ಕಡಿಮೆ ಮಾಡುವುದು ಇದರ ಮುಖ್ಯವಾದ ಉದ್ದೇಸವಾಗಿದೆ.

ಸಮ್ಮೇಳನದಲ್ಲಿ 300ಕ್ಕೂ ಅಧಿಕ ತಜ್ಞರು ಏಷ್ಯಾದ ವಿವಿಧ ದೇಶಗಳಿಂದ ಆಗಮಿಸಿದ್ದರು. ಭಾರತ, ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ ಮತ್ತು ಮ್ಯಾನ್ಮಾರ್ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರುಭಾರತದ ನಿಯೋಗ ನೇತೃತ್ವವನ್ನು ಭಾರತದ ನೀತಿ ಫೌಂಡೇಷನ್ ಸದಸ್ಯ ವಿ.ಕೆ.ಸಾರಸ್ವತ್ ವಹಿಸಿದ್ದರು.

ಹಿಂದು ಖುಷ್ ಹಿಮಾಲಯ

ಹಿಂದು ಖುಷ್ ಹಿಮಾಲಯ ಎನ್ನುವುದು ಒಂದು ಪರ್ವತ ಶ್ರೇಣಿಯಾಗಿದ್ದು, ಇದು ಅಪ್ಘಾನಿಸ್ತಾನದಿಂದ ಮ್ಯಾನ್ಮಾರ್ವರೆಗೆ ಹಬ್ಬಿದೆ. ಇದು ಪ್ರಮುಖ 10 ನದಿಗಳ ವ್ಯವಸ್ಥೆಗೆ ಮೂಲವಾಗಿದ್ದು, ಪರಿಸರ ಸೇವೆಗಳು ಹಾಗೂ ಜೀವನಾಧಾರಕ್ಕಾಗಿ 210 ದಶಲಕ್ಷ ಮಂದಿಗೆ ಅವಕಾಶವನ್ನು ಮತ್ತು ನೀರನ್ನು ಒದಗಿಸುತ್ತವೆ. ಭಾಗವು ಕೆಳಭಾಗದ ಜನರಿಗಾಗಿ ಸುಮಾರು 130 ಶತಕೋಟಿ ಮಂದಿಯ ನೀರಿನ ಅಗತ್ಯತೆಗಳನ್ನು ಪೂರೈಸಲು ಶಕ್ತವಾಗಲಿದೆ.

Comment