New KAS prelims batch starts from 6th August 2018 - For registration Contact: 9686664983/9845512052. Admission Open for Universal School of Admission (B.A & B.com with IAS/KAS Integrated Coaching) Contact - 9686664985/080-46568844

ಬ್ರಹ್ಮೋಸ್ ಕ್ಷಿಪಣಿ: ಗೋದ್ರೆಜ್ ಏರೊಗೆ ಹೊಸ ಕ್ಷಿಪಣಿ ವಾಯುಚೌಕಟ್ಟು ಗುತ್ತಿಗೆ

ಬ್ರಹ್ಮೋಸ್ ಕ್ಷಿಪಣಿ: ಗೋದ್ರೆಜ್ ಏರೊಗೆ ಹೊಸ ಕ್ಷಿಪಣಿ ವಾಯುಚೌಕಟ್ಟು ಗುತ್ತಿಗೆ

ಬ್ರಹ್ಮೋಸ್ ಎಂಬ ವಾಯುಪ್ರದೇಶದಿಂದ ಉಡಾಯಿಸುವ ಯುದ್ಧಕ್ಷಿಪಣಿಗೆ ವಾಯು ಚೌಕಟ್ಟನ್ನು ನಿರ್ಮಿಸುವ ಗುತ್ತಿಗೆಯನ್ನು ಭಾರತದ ಗೋದ್ರೇಜ್ ಏರೊಸ್ಪೇಸ್ ಪಡೆದಿದೆ. ಇಂಥ 100 ವಾಯುಚೌಕಟ್ಟು ಅಭಿವೃದ್ಧಿಗೆ ಬ್ರಹ್ಮೋಸ್ ಏರ್ಸ್ಪೇಸ್ ಗುತ್ತಿಗೆ ನೀಡಿದೆ.

ಗೋದ್ರೆಸ್ ಏರೊಸ್ಪೇಸ್ ಎನ್ನುವುದು ಗೋದ್ರೆಸ್ ಮತ್ತು ಬಾಯ್ಸಿ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿಯ ಘಟಕವಾಗಿದ್ದು, ಇದು 2000ನೇ ಇಸ್ವಿಯಿಂದಲೂ ಬ್ರಹ್ಮೋಸ್ ಜತೆ ನಂಟು ಹೊಂದಿದೆ. ಇತ್ತೀಚೆಗೆ ಬ್ರಹ್ಮೋಸ್ ಕ್ಷಿಪಣಿಗಾಗಿ 100 ಘಟಕಗಳನ್ನು ಸರಬರಾಜು ಮಾಡಲಾಗಿತ್ತು.

ಪ್ರಮುಖ ಅಂಶಗಳು

ಗೋದ್ರೇಜ್ ಏರೊಸ್ಪೇಸ್, ಈಗಾಗಲೇ ಬ್ರಹ್ಮೋಸ್ ಭೂಮಿ ಹಾಗೂ ಸಮುದ್ರ ಅವತರಣಿಕೆಗಳಿಗೆ ವಾಯುಚೌಕಟ್ಟನ್ನು ಪೂರೈಸುತ್ತಿದ್ದು, ಎರಡೂ ಅವತರಣಿಕೆಗಳನ್ನು ಭಾರತೀಯ ವಾಯುಪಡೆ ಹಾಗೂ ನೌಕಾಪಡೆ ಈಗಾಗಲೇ ನಿಯೋಜಿಸಿಕೊಂಡಿವೆ. ಇದೀಗ ವಾಯು ಅವತರಣಿಕೆಯು ಶೇಕಡ 65ರಷ್ಟು ದೇಶೀಯವಾಗಿಯೇ ಅಭಿವೃದ್ಧಿಪಡಿಸಿದ ಪರಿಕರಗಳನ್ನು ಒಳಗೊಂಡಿದೆ. ಶೇಕಡ 50ಕ್ಕಿಂತಲೂ ಕ್ಷಿಪಣಿಯ ಬಿಡಿಭಾಗಗಳು ದೇಶೀಯವಾಗಿಯೇ ಉತ್ಪಾದನೆಯಾಗಿವೆ.

ಬ್ರಹ್ಮೋಸ್ ಕ್ಷಿಪಣಿ

ಬ್ರಹ್ಮೋಸ್ ಎನ್ನುವುದು ಸೂಪರ್ಸಾನಿಕ್ ಯುದ್ಧ ಕ್ಷಿಪಣಿಯಾಗಿದ್ದು, ಇದನ್ನು ಬ್ರಹ್ಮೋಸ್ ಏರೊಸ್ಪೇಸ್ ಅಭಿವೃದ್ಧಿಪಡಿಸಿದೆ. ಇದು ರಷ್ಯಾದ ಮಶಿನೊಸ್ಟೊಯೆನಿಯಾ ಮತ್ತು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಜಂಟಿ ಸಹಭಾಗಿತ್ವದ ಕಂಪನಿಯಾಗಿದೆ. ಇದು ಫೈರ್ ಅಂಡ್ ಫರ್ಗೆಟ್ ಎಂಬ ತತ್ವವನ್ನು ಆಧರಿಸಿದೆ. ಇದನ್ನು ಭೂಮಿ, ಅರೆ ಸಮುದ್ರ ಮತ್ತು ವಾಯು ಪ್ರದೇಶದಿಂದ ಕೂಡಾ ಉಡಾಯಿಸಲು ಅವಕಾಶವಿದೆ.

ಇದು ವಿಶ್ವದ ಅತಿವೇಗದ ಹಡಗು ನಿರೋಧಕ ಯುದ್ಧಕ್ಷಿಪಣಿ ಎಂದು ಪರಿಗಣಿಸಲಾಗಿದೆ. ಇದು ಎರಡು ಹಂತದ ಕ್ಷಿಪಣಿಯಾಗಿದ್ದು, ಮೊದಲ ಹಂತ ಸಾಲಿಡ್ ಹಾಗೂ ಎರಡನೇ ಹಂತ ರಾಮ್ಜೆಟ್ ದ್ರವ ಪ್ರೊಪಲಂಟ್ಗಳನ್ನು ಒಳಗೊಂಡಿದೆ. ಇದು 300 ಕಿಲೋಗ್ರಾಂನಷ್ಟು ಸಾಂಪ್ರದಾಯಿಕ ಹಾಗೂ ಅಣ್ವಸ್ತ್ರ ಯುದ್ಧೋಪಕರಣಗಳನ್ನು ಒಯ್ಯುವ ಸಾಮಥ್ರ್ಯ ಹೊಂದಿದೆ.

ಇದರ ಗರಿಷ್ಠ ಸೂಪರ್ಸಾನಿಕ್ ವೇಗ 2.8 ರಿಂದ 3 ಮಾಕ್ ಆಗಿದ್ದು, ಶಬ್ದದ ವೇಗದಷ್ಟೇ ವೇಗವನ್ನು ಇದು ಹೊಂದಿದೆ. ಇದರ ದಾಳಿ ಸಾಮಥ್ರ್ಯವು 600 ಕಿಲೋಮೀಟರ್ ಆಗಿದ್ದು, ನಿಖರವಾದ ಗುರಿಯ ಮೇಲೆ ದಾಳಿ ಮಾಡಬಲ್ಲವು. ಭಾರತ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಗೆ 2016ರಲ್ಲಿ ಸೇರಿದ ಬಳಿಕ ನಿಖರತೆ ಸಾಧಿಸುವುದು ಸಾಧ್ಯವಾಗಿದೆ.

ಭಾರತೀಯ ನೌಕಾಪಡೆ ಮತ್ತು ಸೇನೆಯು ಈಗಾಗಲೇ ವಿಭಿನ್ನ ಬ್ರಹ್ಮೋಸ್ ಕ್ಷಿಪಣಿ ಅವತರಣಿಕೆಗಳನ್ನು ಬಳಸಿಕೊಳ್ಳುತ್ತಿವೆ. 2017 ನವೆಂಬರ್ನಲ್ಲಿ ಬ್ರಹ್ಮೋಸ್ ವಾಯು ಅವತರಣಿಕೆಗಳು ಕೂಡಾ ವಾಯುಪಡೆಯಲ್ಲಿ ಕಾರ್ಯಾರಂಭ ಮಾಡಿವೆ. ಇದನ್ನು ಯಶಸ್ವಿಯಾಗಿ ಸುಖೋಯ್ ಯುದ್ಧವಿಮಾನದಿಂದ ಕೂಡಾ ಪ್ರಯೋಗಿಸಲಾಗಿದೆ. ಬ್ರಹ್ಮೋಸ್ ಏರೊಸ್ಪೇಸ್ ಈಗಾಗಲೇ ಕ್ಷಿಪಣಿಯ ಸಂಕ್ಷಿಪ್ತರೂಪವನ್ನು ಅಭಿವೃದ್ಧಿಪಡಿಸುವ ಪ್ರಯತ್ನದಲ್ಲಿದೆ. ಇದನ್ನು ಬ್ರಹ್ಮೋಸ್ ಎನ್ಜಿ ಎಂದು ಕರೆಯಲಾಗಿದೆ. ಇದು ಈಗ ವಿನ್ಯಾಸದ ಹಂತದಲ್ಲಿದ್ದು, ಮುಂದಿನ ಕೆಲವು ವರ್ಷಗಳಲ್ಲಿ ಇದು ಅಭಿವೃದ್ಧಿಯಾಗಲಿದೆ. ಮಿನಿ ಅವತರಣಿಕೆಯಿಂದಾಗಿ ಒಂದೇ ಸುಖೋಯ್ ಯುದ್ಧವಿಮಾನ ಹಲವು ಸಣ್ಣ ಕ್ಷಿಪಣಿಗಳನ್ನು ಒಯ್ಯಲು ಸಾಧ್ಯವಾಗಲಿದೆ. ಪ್ರಸ್ತ್ರುತ ಸುಖೋಯ್ ಏಕೈಕ ಬ್ರಹ್ಮೋಸ್ ಕ್ಷಿಪಣಿ ಒಯ್ಯಲು ಸಮರ್ಥವಾಗಿದೆ.

Comment