IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಅಂತರರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಸಾಂಸ್ಥಿಕ ಸ್ವರೂಪ

ಅಂತರರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಸಾಂಸ್ಥಿಕ ಸ್ವರೂಪ

ಅಂತರರಾಷ್ಟ್ರೀಯ ಸೌರ ಒಕ್ಕೂಟವು ಒಪ್ಪಂದ ಆಧರಿತ ಅಂತರರಾಷ್ಟ್ರೀಯ ಅಂತರ ಸರ್ಕಾರ ಸಂಸ್ಥೆಯಾಗಿ ಇದೀಗ ರೂಪುಗೊಂಡಿದೆ. ಒಪ್ಪಂದವನ್ನು 15ನೇ ದೇಶವಾಗಿ ಗುನಿಯಾ ಮಾನ್ಯ ಮಾಡಿರುವುದರಿಂದ 2017 ಡಿಸೆಂಬರ್ 6ರಂದು ಇದು ಜಾರಿಗೆ ಬಂದಂತಾಗಿದೆ.

ಐಎಸ್ ಭಾರತೀಯ ಮೂಲದ ಮೊಟ್ಟಮೊದಲ ಒಪ್ಪಂದ ಆಧರಿತ ಅಂತರರಾಷ್ಟ್ರೀಯ ಸಕಾಋಇ ಸಂಸ್ಥೆಯಾಗಿದೆ. ಇದುವರೆಗೆ 46 ದೇಶಗಳು ಒಪ್ಪಂದಕ್ಕೆ ಸಹಿ ಮಾಡಿದ್ದು, 19 ದೇಶಗಳು ಈಗಾಗಲೇ ಒಪ್ಪಂದ ಚೌಕಟ್ಟನ್ನು ಮಾನ್ಯ ಆಂಗೀಕರಿಸಿವೆ.

ಅಂತರರಾಷ್ಟ್ರೀಯ ಸೌರ ಒಕ್ಕೂಟ

ಅಂತರರಾಷ್ಟ್ರೀಯ ಸೌರ ಒಕ್ಕೂಟ (ಐಎಸ್) ಎನ್ನುವುದು ಭಾರತದ ಪರಿಕಲ್ಪನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರು 2015 ಡಿಸೆಂಬರ್ನಲ್ಲಿ ಇದಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದ್ದರು. ಪ್ಯಾರೀಸ್ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನದ ಅವಧಿಯಲ್ಲಿ ಇದು ಜಾರಿಗೆ ಬಂದಿತ್ತು. ಇದರ ಕೇಂದ್ರ ಕಚೇರಿ ಹರ್ಯಾಣದ ಗುರ್ಗಾಂವ್ನಲ್ಲಿರುವ ಗ್ವಾಲಪಹರಿ ರಾಷ್ಟ್ರೀಯ ಸೌರ ವಿದ್ಯುತ್ ಸಂಸ್ಥೆಯ ಕ್ಯಾಂಪಸ್ನಲ್ಲಿದೆ.

ಇದರ ಮುಖ್ಯ ಉದ್ದೇಶವೆಂದರೆ, ಸೌರ ವಿದ್ಯುತ್ ಮೂಲಸೌಕರ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎದುರಾಗುವ ಸವಾಲುಗಳನ್ನು ಬಗೆಹರಿಸುವುದು ಹಾಗೂ ಇದಕ್ಕಾಗಿ ಉತ್ತಮ ಸಮನ್ವಯ ಸಾಧಿಸುವುದು. ಸೌರ ಸಮೃದ್ಧ ದೇಶಗಳಲ್ಲಿ ಸೌರವಿದ್ಯುತ್ ಉತ್ಪಾದನೆ ಹಾಗೂ ಬೇಡಿಕೆಯನ್ನು ಹೆಚ್ಚಿಸುವುದು ಇದರ ಉದ್ದೇಶ. ಸೌರವಿದ್ಯುತ್ ತಂತ್ರಜ್ಞಾನದ ಗುಣಮಟ್ಟವನ್ನು ಹೆಚ್ಚಿಸುವುದು ಇದರ ಗುರಿಯಾಗಿದೆ. ಎಲ್ಲೆಡೆ ಸಮಾನ ಹಾಗೂ ಉನ್ನತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಇದರ ಉದ್ದೇಶ. ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡಲು ಸಂಸ್ಥೆ ಶ್ರಮಿಸಲಿದೆ.

ಒಕ್ಕೂಟದಡಿಯಲ್ಲಿ 121 ದೇಶಗಳು ಬರುತ್ತವೆ. ಉಷ್ಣವಲಯದಲ್ಲಿರುವ ದೇಶಗಳು ಅಂದರೆ ಕರ್ಕಾಟಕ ಸಂಕ್ರಾತಿ ವೃತ್ತದಿಂದ ಮಕರ ಸಂಕ್ರಾಂತಿವೃತ್ತವರೆಗಿನ ದೇಶಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ. ಸೌರವಿದ್ಯುತ್ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಸಹಭಾಗಿತ್ವದ ಪ್ರಯತ್ನಗಳನ್ನು ಎಲ್ಲ ದೇಶಗಳು ನಡೆಸುತ್ತವೆ. ಬಹುತೇಕ ದೇಶಗಳು ಏಷ್ಯಾ, ಆಫ್ರಿಕಾ ಹಾಗೂ ದಕ್ಷಿಣ ಅಮೆರಿದಲ್ಲಿವೆ.

ಸಾಂಸ್ಥಿಕ ಸಂರಚನೆಯಲ್ಲಿ ಮುಖ್ಯವಾಗಿ ಅಸೆಂಬ್ಲಿ, ಕೌನ್ಸಿಲ್ ಹಾಗೂ ಸೆಕ್ರೆಟ್ರಿಯೇಟ್ ಇರುತ್ತದೆ. ಇದರ ಸದಸ್ಯರು ಸಮನ್ವಯದಿಂದ ಕಾರ್ಯಯೋಜನೆಗಳನ್ನು ಮತ್ತು ಚಟುವಟಿಕೆಗಳನ್ನು ಹಮ್ಮಿಕೊಂಡು, ಸೌರ ವಿದ್ಯುತ್ಗೆ ಅಗತ್ಯವಾದ ಹಣಕಾಸು ನೆರವು, ಸೌರತಂತ್ರಜ್ಞಾನ, ಅನುಶೋಧನೆ, ಸಂಶೋದನೆ ಹಾಗೂ ಅಭಿವೃದ್ಧಿ, ಸಾಮಥ್ರ್ಯ ವೃದ್ಧಿಯಂಥ ಚಟುವಟಿಕೆಗಳನ್ನು ನಡೆಸುತ್ತದೆ,

Comment